• Thu. May 2nd, 2024

ರಮೇಶ್‌ ಕುಮಾರ್‌ ರಿಂದ ಗೋವಿಂದಗೌಡ ಬಲಿಪಶು – ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪ

PLACE YOUR AD HERE AT LOWEST PRICE

  • ಬ್ಯಾಂಕ್ ಉಳಿಸಿ ಬೆಳೆಸಿದ ಬ್ಯಾಲಹಳ್ಳಿ ಗೋವಿಂದಗೌಡರನ್ನು ಬಲಿಪಶು ಮಾಡಿದ
    ರಮೇಶ್ ಕುಮಾರ್‌ರಿಂದ ಡಿಸಿಸಿ ಬ್ಯಾಂಕ್ ಸಾಲ ದುರ್ಬಳಕೆ – ವೆಂಕಟಶಿವಾರೆಡ್ಡಿ
  • ಗೋವಿಂದಗೌಡರು ಮರಳಿ ಜೆ.ಡಿ.ಎಸ್. ಪಕ್ಷಕ್ಕೆ ವಾಪಸ್ಸು ಆಗುತ್ತಿರುವ ಕುರಿತು ಹೈಕಮಾಂಡ್‌ನಲ್ಲಿ ಮಾತುಕತೆಗಳು ನಡೆಯುತ್ತಿರುವುದು ನಿಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನು ನಿರ್ದೇಶಕರನ್ನಾಗಿ ಮಾಡಿದ್ದು ನಾವು, ಇದಕ್ಕೆ ಶಾಸಕ ಕೆ.ಶ್ರೀನಿವಾಸಗೌಡರು ವಿರೋಧ ಮಾಡಿ ಜೆ.ಡಿ.ಎಸ್. ಪಕ್ಷ ತೊರೆಯುವಂತೆ ಮಾಡಿದರು. ಘಟಬಂಧನ್ ರಮೇಶ್ ಕುಮಾರ್ ಇವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೆಳೆದು ಬಲಿಪಶು ಮಾಡಿದರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಿಸಿದರು,

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ನೀಡುವ ಹಣವನ್ನು ತಮ್ಮ ಮನೆಯಿಂದ ತಂದು ಕೊಟ್ಟಂತೆ ಬಿಂಬಿಸುತ್ತಾ ಸರ್ಕಾರದ ಸೂತ್ತೋಲೆಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು.

ರಮೇಶ್ ಕುಮಾರ್ ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಕಳೆದು ಕೊಂಡಿದ್ದಾರೆ. ಅವರು ಸದನದಲ್ಲಿ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿ ಬಳಿಸಿದ ಪದವನ್ನು ಉಚ್ಚರಿಸಲು ನಮಗೆ ಅಸಹ್ಯವಾಗುತ್ತದೆ. ಇಂದಿರಾಗಾಂಧಿ ಕುಟುಂಬದವರ ಹೆಸರಿನಲ್ಲಿ ಕಾಂಗ್ರೇಸ್‌ನವರು ೩-೪ ತಲೆಮಾರುಗಳಿಗೆ ಆಗುವ ಆಸ್ತಿ ಸಂಪಾದಿಸಿರುವುದಾಗಿ ತಿಳಿಸುವುದಕ್ಕೆ ಅವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು,

ಗೋವಿಂದಗೌಡರು ಮರಳಿ ಜೆ.ಡಿ.ಎಸ್. ಪಕ್ಷಕ್ಕೆ ವಾಪಸ್ಸು ಆಗುತ್ತಿರುವ ಕುರಿತು ಹೈಕಮಾಂಡ್‌ನಲ್ಲಿ ಮಾತುಕತೆಗಳು ನಡೆಯುತ್ತಿರುವುದು ನಿಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು,

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಳಬಾಗಿಲಿನ ಜೆ.ಡಿ.ಎಸ್. ಪಕ್ಷದ ಆಕಾಂಕ್ಷಿ ಸಮೃದ್ಧಿ ಮಂಜುನಾಥ್, ಮಾಲೂರು ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ರಾಮೇಗೌಡರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಸಿಹಿ ಹಂಚಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಕೋಲಾರದ ಆಕಾಂಕ್ಷಿ ಸಿ.ಎಂ.ಆರ್. ಶ್ರೀನಾಥ್, ಕೆ.ಜಿ.ಎಫ್. ಕ್ಷೇತ್ರ ರಮೇಶ ಬಾಬು ವಿ.ಎಂ, ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಮಲ್ಲೇಶ್ ಬಾಬು, ಜೆ.ಡಿ.ಎಸ್. ಮುಖಂಡರಾದ ಕಾಡೇನಹಳ್ಳಿ ನಾಗರಾಜ್, ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷೆ ರಾಜೇಶ್ವರಿ, ಬಾಲಾಜಿ ಚೆನ್ನಯ್ಯ, ನಗರಸಭೆ ಸದಸ್ಯ ರಾಕೇಶ್, ಮಾಜಿ ಸದಸ್ಯ ಖಲೀಲ್ ಅಹಮದ್, ಕುರುಬರ ಸಂಘದ ಅಶೋಕ್, ವಕ್ಕಲೇರಿ ವಡಗೂರು ರಾಮು, ಮುಂತಾದವರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!