• Thu. May 2nd, 2024

ಕೋಲಾರ I ಕೆ.ಸಿ.ವ್ಯಾಲಿ ನೀರಿನ ಯೋಜನೆ ವೀಕ್ಷಣೆ ಮಾಡಿದ ಉನ್ನತ ಮಟ್ಟದ ಅಂತರಾಷ್ಟ್ರೀಯ ತಂಡ

PLACE YOUR AD HERE AT LOWEST PRICE

ಯುನೈಟೆಡ್ ನೇಷನ್ಸ್ ಆರ್ಗನೈಜೇಶನ್ ಅಸೆಂಬ್ಲಿಯ ಅಧ್ಯಕ್ಷರ ನೇತೃತ್ವದ ಉನ್ನತ ಮಟ್ಟದ ಅಂತರಾಷ್ಟ್ರೀಯ ತಂಡವು, ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆಗೆ ಭೇಟಿ ನೀಡಿ ಕೆ.ಸಿ.ವ್ಯಾಲಿ ನೀರಿನ ಯೋಜನೆ ಹಾಗೂ ಸದ್ಬಳಕೆ ಬಗ್ಗೆ ವೀಕ್ಷಣೆ ಮಾಡಿತು.

ಕೋಲಾರ ಜಿಲ್ಲೆಯ ಮಹತ್ವಕಾಂಕ್ಷೆಯ ಯೋಜನೆಯಾದ ಕೆ.ಸಿ.ವ್ಯಾಲಿ ನೀರನ್ನು ಸಂಸ್ಕರಿಸಿ ೧೩೯ ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಇದರಿಂದ ಅಂತರ್ಜಲ ಮರುಪೂರಣ ಉದ್ದೇಶವಾಗಿದ್ದು, ಇದರಿಂದ ಕೊಳವೆ ಬಾವಿಗಳ ನೀರಿನ ಪ್ರಮಾಣ ಹೆಚ್ಚಾಗಿದ್ದು, ರೈತರು ಬೆಳೆಗಳನ್ನು ಬೆಳೆಯುವಂತಾಗಿದೆ.

ಯಾವುದೇ ನದಿ ನಾಲೆಗಳಿಲ್ಲದೆ ಸತತ ಬರಗಾಲದಿಂದ ಕಂಗೆಟ್ಟಿದ್ದ ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಅವಿಭಜಿತ ಕೋಲಾರ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದರು.

ಕೆ.ಸಿ.ವ್ಯಾಲಿ ಸಂಸ್ಕರಿಸಿದ ನೀರು ಹರಿವಿನಿಂದ ಆಗಿರುವ ಅಂತರ್ಜಲ ಮರುಪೂರಣ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ಈ ಬಗ್ಗೆ ಮಂಡಿಸಿದ್ದ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಇದರಿಂದ ಕುತೂಹಲಗೊಂಡ ಯುನೈಟೆಡ್ ನೇಷನ್ಸ್ ಆರ್ಗನೈಜೇಶನ್ ಜನರಲ್ ಅಸಂಬ್ಲಿಯ ಪ್ರೆಸಿಡೆಂಟ್ ಕಾಸಬ ಕೋರೋಸಿ, ಚೀಫ್ ಕ್ಯಾಬಿನೆಟ್ ಆಫೀಸರ್ ಲಾಸ್‌ಜೋಲ್‌ಜೋಕೆ, ಚೀಫ್ ಸೈಂಟಿಫಿಕ್ ಆಫೀಸರ್ ಜಾನ್ಸನ್ ಕಾಲ್ಮನ್ ಸೇರಿದಂತೆ ವಿವಿಧ ದೇಶಗಳ ಹತ್ತು ಮಂದಿ ತಜ್ಞರ ತಂಡ ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಕೆ.ಸಿ.ವ್ಯಾಲಿ ಯೋಜನೆಯ ಅಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!