• Wed. May 1st, 2024

ಕೆಜಿಎಫ್: ಗ್ರಾಮಾಂತೆ ಭಾಗದಲ್ಲಿ ಮಡಿವಾಳ ಮಾಚೀದೇವರ ಜಯಂತಿ.

PLACE YOUR AD HERE AT LOWEST PRICE

ಮಡಿವಾಳ ಮಾಚಿದೇವರ ಜಯಂತೋತ್ಸವ ಪ್ರಯುಕ್ತ ಬೇತಮಂಗಲ, ಟಿ.ಗೊಲ್ಲಹಳ್ಳಿ ಗ್ರಾಪಂಯ ಜಯಮಂಗಲ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಡಗರ ಸಂಭ್ರಮದಿಂದ ಪಲ್ಲಕ್ಕಿಗಳೊಂದಿಗೆಮಡಿವಾಳ ಮಾಚೀದೇವರ ಜಯಂತಿ ಆಚರಿಸಿದರು.
ಬೇತಮಂಗಲದ ಗ್ರಾಪಂ ಬಳಿ ಮಡಿವಾಳ ಮಾಚಿದೇವರ ಭಾವಚಿತ್ರವಿರುವ ಪಲ್ಲಕ್ಕಿಗಳನ್ನು ವಿವಿಧ ಬಣ್ಣಗಳ ಹೂವುಗಳಿಂದ ಅಲಂಕಾರ ಮಾಡಿದ್ದರು, ಮಡಿವಾಳ ಸಮುದಾಯದ ಮತ್ತು ಎಲ್ಲ ಸಮುದಾಯದ  ಜನರು ಬೆರತು ಜಯಂತೋತ್ಸವವನ್ನು ಆಚರಿಸಿದ್ದು ಮೆರಗು ನೀಡಿತು.
ಈ ಜಯಂತೋತ್ಸವದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಭಾಗವಹಿಸಿ ಪಲ್ಲಕ್ಕಿಯಲ್ಲಿ ಕೂತು ಚಾಲನೆ
ನೀಡಿದರು. ನಂತರ ಮಡಿವಾಳ ಸಮುದಾಯದ ವತಿಯಿಂದ ಅವರನ್ನು ಆತ್ಮಿಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಆರ್.ಕೆ ಪೌಡೇಶನ್ ಅಧ್ಯಕ್ಷ ವಿ.ಮೋಹನ್ ಕೃಷ್ಣ ಮಾತನಾಡಿ, ಸಮುದಾಯದ ಏಳಿಗೆಗೆ ಸದಾ ಸಿದ್ಧನಿರುತ್ತೇನೆ. ಮಡಿವಾಳ ಸಮುದಾಯಕ್ಕೆ  ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ, ಪಿಡಿಒ ಮಂಜುನಾಥ್, ಕೆಜಿಎಫ್ ನಗರಾಧ್ಯಕ್ಷ ಕಮಲನಾಥನ್,
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ರೆಡ್ಡಿ, ಮಡಿವಾಳ ಸಮುದಾಯ ಅಧ್ಯಕ್ಷ ಚಲಪತಿ, ಕಾರ್ಯದರ್ಶಿ
ವೆಂಕಟೇಶ್, ಕೋತ್ತೂರು ಶ್ರೀನಿವಾಸ್, ಗೌ.ಅಧ್ಯಕ್ಷ ಕುಟ್ಟಿ, ಖಚಾಂಚಿ ರಾಜು, ಜಯಮಂಗಲ ಸದಸ್ಯ ವೆಂಕಟೇಶಪ್ಪ, ಮದ್ದಿನಾಯಕನಹಳ್ಳಿ ಸದಸ್ಯ ವೆಂಕಟೇಶ್, ಬಡಮಾಕನಹಳ್ಳಿ ಕಾಂತರಾಜ್, ಮುಖಂಡರಾದ ಓಬಲಪ್ಪ, ನಾರಾಯಣಸ್ವಾಮಿ, ನಾಗರಾಜ್, ತೊಳಸಮ್ಮ, ರಾಧಪ್ಪ, ಚಲಪತಿ, ಆನಂದ್,ಸುಭ್ರಮಣಿ, ರಾಜೇಂದ್ರ, ತಮ್ಮಣ್ಣ, ಆಂಜಪ್ಪ, ಕುಮಾರ್ ಹಾಗೂ ಸಮುದಾಯದ ಅನೇಕ ಮುಖಂಡರು ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!