• Fri. May 17th, 2024

ತೆರವುಗೊಳಿಸಿರುವ ಕುರುಬರಪೇಟೆಯ ಆಂಜನೇಯಸ್ವಾಮಿ ದೇವಾಲಯವನ್ನು ಪುನರ್ ಸ್ಥಾಪಿಸಲು ನಾಗರೀಕರ ಒತ್ತಾಯ

PLACE YOUR AD HERE AT LOWEST PRICE

ಕೋಲಾರ ನಗರದ ಕುರುಬರಪೇಟೆಯಲ್ಲಿ ೨೦೧೯-೨೦೨೦ ನೇ ಸಾಲಿನಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ತೆರವು ಮಾಡಿರುವ ಪುರಾಣ ಪ್ರಸಿದ್ದ ಆಂಜನೇಯಸ್ವಾಮಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿಕೊಡಲು ಒತ್ತಾಯಿಸಿ ಕುರುಬರಪೇಟೆ ಮತ್ತು ಗೌರಿಪೇಟೆ ನಿವಾಸಿಗಳು ಜಿಲ್ಲಾಽಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕೋಲಾರ ನಗರದ ಕುರುಬರಪೇಟೆಯಲ್ಲಿ ಸುಮಾರು ೨೫೦ ವಷ ಹಳೆಯದಾದ ಆಂಜನೇಯಸ್ವಾಮಿ ದೇವಸ್ಥಾನ ಇತ್ತು. ಗಣೇಶ ಹಬ್ಬದ ದಿನ ನಾಗರಕಟ್ಟೆಗೆ ಹಾಲೆರೆಯುತ್ತಿದ್ದರು. ಸಂಕ್ರಾಂತಿ ಹಬ್ಬದಂದು ಹಸುಗಳ ಮೆರವಣಿಗೆ ನಡೆಯುತ್ತಿತ್ತು. ದೀಪಾವಳಿ ಹಬ್ಬದಂದು ಸಾರ್ವಜನಿಕರು ನೋಮಿಕೊಂಡು ಹೋಗುತ್ತಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಹನುಮಾನ್ ಜಯಂತಿ, ವೈಕುಂಠ ಏಕಾದಶಿ ಕಾರ್ಯಗಳನ್ನು ಅದ್ದೂರಿಯಾಗ ಆಚರಿಸುತ್ತಿದ್ದರು. ಪ್ರತಿ ಶನಿವಾರ ಭಜನೆ ನಡೆಯುತ್ತಿದ್ದು. ಸದರಿ ಆಂಜನೇಯಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿರುತ್ತದೆ.

ಹೀಗಿರುವಲ್ಲಿ ೨೦೧೯-೨೦ನೇ ಸಾಲಿನಲ್ಲಿ ಕೋಲಾರದ ಮೆಕ್ಕೆ ವೃತ್ತದಿಂದ ಡೂಂ ಲೈಟ್ ವೃತ್ತದವರೆಗೆ ಡಬ್ಬಲ್ ರಸ್ತೆಯನ್ನು ಮಾಡುವ ಸಮಯದಲ್ಲಿ ಕುರುಬರಪೇಟೆಯಲ್ಲಿ ರಸ್ತೆಯ ಬದಿ ಇದ್ದ ಆಂಜನೇಯಸ್ವಾಮಿ ದೇವಾಲಯವನ್ನು ತೆರವು ಮಾಡಬೇಕಾಗಿದ್ದರಿಂದ ಸಾರ್ವಜನಿಕರು ಇದಕ್ಕೆ ಪ್ರತಿರೋಧವನ್ನು ವ್ಯಕ್ತ ಪಡಿಸಿದ್ದರು.

ಆಗ ಕೋಲಾರದ ನಗರದಲ್ಲಿದ್ದ ಅಂದಿನ ಅಕಾರಿಗಳಾದ ನಗರಸಭೆ ಆಯುಕ್ತ ಶ್ರೀಕಾಂತ್, ಸಹಾಯಕ ಆಯುಕ್ತರು, ಕೋಲಾರ ಉಪ ವಿಭಾಗದ ಉಪ ವಿಭಾಗಾಽಕಾರಿಗಳಾದ ಸೋಮಶೇಖರ್, ಕೋಲಾರದ ತಹಶೀಲ್ದಾರ್ ಆಗಿದ್ದ ಶೋಭಿತಾ ತೆರವು ಮಾಡಲಿರುವ ಆಂಜನೇಯಸ್ವಾಮಿ ದೇವಸ್ಥಾನವನ್ನು ಪುನಃ ದೇವಾಲಯದ ಜಾಗ ಇರುವ ಕಡೆ ನಿರ್ಮಿಸಲಾಗುವುದು ಎಂದು ಭರವಸೆ ಮಾಡಿ ಸಾರ್ವಜನಿಕರ ಮನವೊಲಿಸಿ ದೇವಸ್ಥಾನವನ್ನು ತೆರವು ಮಾಡಿದ್ದರು.

ಸದರಿ ದೇವಸ್ಥಾನವು ತೆರವಾಗಿ ಸುಮಾರು ಮೂರು ವಷಗಳು ಕಳೆದಿದೆ. ದಯವಿಟ್ಟು ಪುರಾಣ ಪ್ರಸಿದ್ದ ಆಂಜನೇಯಸ್ವಾಮಿ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ
ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜ್ವಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೋಲಾರ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಎನ್.ರವೀಂದ್ರನಾಥ್, ಪಿ.ನಾರಾಯಣಪ್ಪ, ಫಲ್ಗುಣ, ಕೆ.ವಿ.ಶ್ರೀರಾಮ್, ಹೆಚ್.ಎನ್.ನವೀನ್, ಕೆ.ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!