• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಹಿರಿಯ ನಾಗರಿಕರು  ಈ ದೇಶದ ಆಧಾರ ಸ್ಥಂಭಗಳು ಅವರ ಅನುಭವ ಹಾಗೂ ಸಮಾಜಕ್ಕೆ ಅವರು ಕೊಟ್ಟ ಕೊಡುಗೆಗಳು ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಬೇಕು ಎಂದು ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಹೆಚ್.ಎಂ.ರವಿ ತಿಳಿಸಿದರು.

ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಹುದುಕುಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಯೋಜಿಸಲಾಗಿದ್ದ ಪಿಂಚಣಿ ಅದಾಲತ್  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿರಿಯರ ಬಗ್ಗೆ ನಿರ್ಲಕ್ಷ ಧೋರಣೆ, ವೃದ್ಧರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡುತ್ತಿದೆ ಎಂದರು.

ಜಗತ್ತು ಬೆಳೆದಂತೆಲ್ಲ ಸಾರ್ವಜನಿಕರಲ್ಲಿ ಮಾನವೀಯ ಮೌಲ್ಯಗಳು ಕುಸಿಯುವ ಹಂತ ತಲುಪಿದ್ದು ಹಿರಿಯ ನಾಗರಿಕರು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಅತ್ಯಂತ ದುರಂತ. ಇಂತಹ ಸಂದರ್ಭದಲ್ಲಿ ಸರ್ಕಾರ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸುವುದರ ಮೂಲಕ ಅಸರೆಯಾಗಿದೆ.

ಇದ್ದನ್ನು ಸಮರ್ಪಕವಾಗಿ ಒದಗಿಸುವುದು ಗ್ರಾಪಂ ಅದ್ಯಕ್ಷನಾಗಿ ನನ್ನ ಬದ್ಧತೆಯಾಗಿದೆ, ಹಿರಿಯ ನಾಗರೀಕರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿ ಅವರ ಅಸರೆಯ ದೃಷ್ಟಿಯಿಂದ ಪಿಂಚಣಿ ಅದಾಲತ್ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಎಂ.ದಯಾನಂದ್  ರಾಜ್ಯ ಸರ್ಕಾರ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ರವರ ಕಲ್ಪನೆಯ ಕೂಸು ಪಿಂಚಣಿ ಅದಾಲತ್ ಕಾರ್ಯಕ್ರಮ. ಈ ಒಂದು ಕಾರ್ಯಕ್ರಮವು ನಿರಂತರವಾಗಿ ಒಂದು ವರ್ಷಗಳ ಕಾಲದಿಂದ ನಡೆಯುತ್ತಿದೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕು ಆಡಳಿತ ವತಿಯಿಂದ  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗದ ಜನರು ದೂರದ ಪ್ರದೇಶಗಳಿಂದ ತಾಲ್ಲೂಕು ಆಡಳಿತ ಕಛೇರಿಗೆ  ಅಲೆದಾಡುವಂತ  ಸ್ಥಿತಿಯನ್ನು ದೂರಮಾಡಿ, ಸಕಾಲದಲ್ಲಿ ಪಿಂಚಣಿ ಸೌಲಭ್ಯಗಳು  ಮನೆಬಾಗಿಳಿಗೆ ತಲುಪಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದರು.

ಜನರ  ಬವಣೆಗೆ  ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಬಂಗಾರಪೇಟೆ  ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಪ್ರಸಕ್ತ ಮಾಸದಲ್ಲಿ ಹುದುಕುಳ  ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

ಈ ಅದಾಳತ್ ಕಾರ್ಯಕ್ರಮದಲ್ಲಿ ನೂರಾರು ಜನರು ಬಂದು ತಮ್ಮ ಸಮಸ್ಯೆಗಳಿಗೆ  ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಈ ಮೂಲಕ ಕ್ರಿಯಾಶೀಲ. ಪ್ರಮಾಣಿಕ, ಆಡಳಿತ ವ್ಯವಸ್ಥೆಗೆ ಕಾಯಕಲ್ಪ ಹಾಕಿದಂತಾಗಿದೆ ಎಂದರು

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ನಾನಾ ಕಾರಣಗಳನ್ನು  ಹೇಳಿ ತಮ್ಮ ಜವಾಬ್ದಾರಿಯಿಂದ ನೂಣಿಚಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಆದರೆ ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಂ.ರವಿ ಅವರು ಇದಕ್ಕೆ ತದ್ವಿರುದ್ಧ ನಿಲುವನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್.ಎಂ.ರವಿರವರು ನಿರಂತರವಾಗಿ  ಮೂರು ತಿಂಗಳಿನಿಂದ ಅವಿರತವಾಗಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ತನ್ನ ವ್ಯಾಪ್ತಿಯ ಗ್ರಾಮಗಳಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದ್ದು, ಅವರ ಸೇವಾ ಮನೋಭಾವ, ಹಾಗೂ ದೃಢಸಂಕಲ್ಪದ ನಾಯಕತ್ವದ ಫಲವಾಗಿ ಜಿಲ್ಲೆಯಲ್ಲಿಯೇ ಬೃಹತ್ ಪಿಂಚಿಣಿ ಅದಾಲತ್ ಕಾರ್ಯಕ್ರಮವನ್ನು ನಡೆಯುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಹುದುಕುಳ, ವಟ್ರಕುಂಟೆ, ಬೈರನಾಯಕನಹಳ್ಳಿ, ಹನುಮಂತರಾಯನದಿನ್ನೆ, ಅಕ್ಕಮ್ಮನದಿನ್ನೆ, ಪಾಕರಹಳ್ಳಿ, ನಾರಾಯಣಪುರ, ಅನಿಗಾನಹಳ್ಳಿ, ಭಾವರಹಳ್ಳಿ, ಬೀರಾಂಡಹಳ್ಳಿ. ಗ್ರಾಮಗಳಿಂದ ನೂರಾರು ವಯೋವೃದ್ಧರು, ಹೆಚ್ಚುವರಿ ಪಿಂಚಣಿ ಅರ್ಜಿದಾರರು, ಫಲಾನುಭವಿಗಳು ಭಾಗವಹಿಸಿದ್ದರು.

ಒ.ಎ.ಪಿ – 20. ಎಸ್.ಎಸ್.ವೈ.- 1. ಹೆಚ್ಚುವರಿ ಪಿಂಚಣಿ- 50 . ವಿಧವಾ ವೇತನ- 5 ಅರ್ಜಿಗಳನ್ನು ಪರಿಗಣಿಸಿ ಸರ್ಕಾರದ ನಿಯಮಾನುಸಾರ ದಾಖಲೆ ಹೊಂದಿರುವ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ಧರಿಸಲಾಯಿತು. ವೈದ್ಯರಾದ ನಾಗಜ್ಯೋತಿ ನೇತೃತ್ವದಲ್ಲಿ  ಉಚಿತ ವೈದ್ಯಕೀಯ ತಪಾಸಣಾ ಶಿಭಿರವನ್ನು ಸಹ ಏರ್ಪಡಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಮುಕ್ತಾಂಭ. ಪಿಡಿಓ ಚಿತ್ರಾ.  ಪಂಚಾಯಿತಿ ಸದಸ್ಯರಾದ ಸುರೇಶ್. ಪ್ರಕಾಶ್. ಮೂರ್ತಿ. ಶ್ರೀರಾಮ್. ಶ್ರೀನಿವಾಸ್.  ತಾನಪ್ಪ. ವೆಂಕಟರಾಮಶೆಟ್ಟಿ. ಮಂಜಮ್ಮ. ಭಾಗ್ಯಮ್ಮ. ಹಾಗೂ  ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!