• Mon. May 6th, 2024

ದೊಡ್ಡೂರು ಕರ್ಪನಹಳ್ಳಿ  ಶ್ರೀ ಬ್ಯಾಟರಾಯಸ್ವಾಮಿ ದೇವರ ಬ್ರಹ್ಮರಥೋತ್ಸವ

PLACE YOUR AD HERE AT LOWEST PRICE

ಬಂಗಾರಪೇಟೆ ತಾಲ್ಲೂಕು ದೊಡ್ಡೂರು ಕರ್ಪನಹಳ್ಳಿಯಲ್ಲಿಯಲ್ಲಿನ  ಪುರಾಣ ಪ್ರಸಿದ್ದವಾಗಿರುವ ಶ್ರೀ ಬ್ಯಾಟರಾಯಸ್ವಾಮಿ ದೇವರ ಬ್ರಹ್ಮರಥೋತ್ಸವ  ಸಂಭ್ರಮ ಸಡಗರದಿಂದ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು.
ಬಂಗಾರಪೇಟೆ ತಾಲೂಕಿನ ದೊಡ್ಡೂರುಕರಪನಹಳ್ಳಿಯ ಬ್ಯಾಟರಾಯಸ್ವಾಮಿ  ಬೆಟ್ಟದ ಮೇಲಿರುವ ಶ್ರೀ ಬ್ಯಾಟರಾಯಸ್ವಾಮಿಯ 8ದಿನಗಳ ಕಾಲ ನಡೆಯುವ ಜಾತ್ರೆಯ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
21 ಬುಧವಾರದಿಂದ ಆರಂಭವಾಗಿರುವ ಜಾತ್ರೆ 28ರಂದು ಮುಕ್ತಾಯವಾಗಲಿದೆ.ಈ ಜಾತ್ರೆಯ ವಿಶೇಷವೆಂದರೆ ಬಾರೀ ಧನಗಳು ಸೇರುವುದು,ರಾಜ್ಯದವರಲ್ಲದೆ ಹೊರ ರಾಜ್ಯಗಳಾದ ಆಂಧ್ರಪ್ರದೇಶ,ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಧನಗಳನ್ನು ಕೊಳ್ಳಲು ಮಾರುಲು ಸೇರುತ್ತಿದ್ದರು.
ಆದರೆ ಕಳೆದ ಎರಡುಮೂರು ವರ್ಷಗಳಿಂದ ಕೊರೋನಾ ಕಾರಣದಿಂದ ಜಾತ್ರೆ ನಡೆಯದೆ ಸ್ಥಗಿತವಾಗಿತ್ತು.ಎರಡು ವರ್ಷಗಳ ಬಳಿಕ ಮತ್ತೆ ಆರಂಭವಾಗಿದ್ದರೂ ಸಹ ಧನಗಳು ಮಾತ್ರ ಜಾತ್ರೆಯಲ್ಲಿ ಸೇರದೆ ಜಾತ್ರೆಗೆ ಆಕರ್ಷಣೆ ಇಲ್ಲದಂತಾಗಿದೆ.
ರಥೋತ್ಸವಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಚಾಲನೆ ನೀಡಿದರು.
  
ಈ ವೇಳೆ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ,ಎಂ.ನಾರಾಯಣಸ್ವಾಮಿ,ಡಿಕೆಹಳ್ಳಿ ಗ್ರಾಪಂ ಅಧ್ಯಕ್ಷೆ ಕಲಾವತಿರಮೇಶ್,ಉಪಾಧ್ಯಕ್ಷೆ ರಾಧಮ್ಮ,ಸದಸ್ಯರಾದ ಕೆ.ಹಚೆ.ಮುನಿಯಪ್ಪ,ಕುಮಾರ್,ಮುಖಂಡರಾದ ಹನುಮಪ್ಪ,ಅಭಿಲಾಶ್,ಸುಬ್ಬರಾಯಪ್ಪ,ಮರಗಲ್ ಶ್ರೀನಿವಾಸ್,ಡಿಸಿಸಿ ಬ್ಯಾಂಕಿನ ನಿರ್ದೇಶಕ, ಗೋವಿಂದರಾಜು,ಕೆ.ವಿ.ಮಾಗರಾಜ್,ಅನು,ತಾಪಂಃಇಒ ವೆಂಕಟೇಶಪ್ಪ,ಪಿಡಿಒ ಭಾಸ್ಕರ್ ಮತ್ತಿತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!