• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ನನ್ನ ಬಗ್ಗೆ ಹಗುರವಾಗಿ ಮಾತನಾಡಿ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸುತ್ತಿದ್ದು, ಅದನ್ನು ಬಹಿರಂಗಪಡಿಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಒಂದು ವೇಳೆ ಆರೋಪ ಸಾಭೀತು ಮಾಡದಿದ್ದರೆ ಅವರು ಚುನಾವಣೆಗೆ ನಿಲ್ಲಬಾರದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲ್ ಹಾಕಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಡಬಲ್ ರಸ್ತೆಗೆ ಕೋಲಾರ ರಸ್ತೆಯ ರೈಲ್ವೆ ಗೇಟ್‍ನಿಂದ ದೇಶಿಹಳ್ಳಿವರೆಗೂ 10ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಆಕಸ್ಮಿಕವಾಗಿ 49ಸಾವಿರ ಮತಗಳನ್ನು ಪಡೆದವರು ನಾಲ್ಕೂವರೆ ವರ್ಷಗಳಿಂದ ಜನರಿಂದ ದೂರವಾಗಿದ್ದುರು.

ಈಗ ಚುನಾವಣೆ ಹಿನ್ನೆಲೆಯಲ್ಲಿ ಬಂದು ನನ್ನ ಬಗ್ಗೆ ಹಾಗೂ ನಾನು ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಬೊಟ್ಟು ಮಾಡಿ ಟೀಕಿಸುವುದಕ್ಕೆ ಅವರಿಗೆ ನೈತಿಕ ಹಕ್ಕಿಲ್ಲ.ನಾನು ಹತ್ತು ವರ್ಷಗಳಿಂದ ಬಂಗಾರಪೇಟೆ ಕ್ಷೇತ್ರದ ಚಿತ್ರಣವನ್ನು ಬದಲಾಯಿಸಿ ಎಲ್ಲರೂ ನೋಡುವಂತೆ ಅಭಿವೃದ್ಧಿ ಮಾಡಿರುವೆ.

ಆದರೆ ಬಂಗಾರಪೇಟೆ ಬಗ್ಗೆ ಏನೂ ಗೊತ್ತಿಲ್ಲದವರು ಹತ್ತು ವರ್ಷಗಳಿಂದ ಕ್ಷೇತ್ರ ಅಭೀವೃದ್ದಿಗಿಂತ ಶಾಸಕರು ಅಭೀವೃದ್ದಿಯಾಗಿದ್ದಾರೆ,, ಅವರು ಅಭೀವೃದ್ದಿಯಾಗಿವುದರಲ್ಲಿ ಶೇ60ರಷ್ಟು ಹಣ ಬಳಸಿದ್ದರೆ ಕ್ಷೇತ್ರದ ಅಭಿವೃದ್ದಿಯಾಗುತ್ತಿತ್ತು ಎಂಬ ಆರೋಪಕ್ಕೆ ಆಕ್ರೋಶಗೊಂಡು ಮಲ್ಲೇಶಬಾಬು ವಿರುದ್ದ ತಮ್ಮ ಭಾಷಣ ಉದ್ದಕ್ಕೂ ಸಿಡಿಮಿಡಿಗೊಂಡರು.

ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದರೂ ಅವರ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅದನ್ನು ತಡೆಯುತ್ತಿದ್ದರು ಎಂದು ಆರೋಪಿಸಿದರಲ್ಲದೆ, ಪಟ್ಟಣದಲ್ಲಿ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹತ್ತು  ವರ್ಷಗಳಿಂದ ಹೋರಾಟ ಮಾಡಿದ ಫಲ ಈಗ ಭವನ ನಿರ್ಮಾಣಕ್ಕೆ ಕಾಲ ಕೂಡಿ ಬಂತು.

ಆದರೆ ತಹಸೀಲ್ದಾರ್ ರಾಜಕೀಯ ಮಾಡಿ ಭವನಕ್ಕೆ ತಡೆ ತರುವಂತೆ ಮಾಡಿದರೂ ನ್ಯಾಯ ದೇವರ ಕೃಪೆಯಿಂದ ಈಗ ಕಾಮಗಾರಿ ಪ್ರಾರಂಭವಾಗಿದೆ. ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣ,ರಂಗಮಂದಿರ,ಒಳಾಂಗಣ ಕ್ರೀಡಾಂಗಣ,ಪತ್ರಕರ್ತರ  ಭವನ ನಿರ್ಮಾಣಕ್ಕೆ ಮರು ಜೀವ ಬಂದಿದ್ದು ಸಧ್ಯದಲ್ಲೆ ಕಾಮಗಾರಿ ಶುರುವಾಗಲಿದೆ ಎಂದು ತಿಳಿಸಿದರು.

ನಾನು ಹತ್ತು ವರ್ಷಗಳಿಂದ ಅಭಿವೃದ್ದಿ ಮಾಡಿದ್ದು ಜನರಿಗೆ ತೃಪ್ತಿಯಾಗಿದ್ದರೆ ಮತ್ತೆ ಚುನಾವಣೆಯಲ್ಲಿ ಮತ ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಅವಕಾಶ  ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಫರ್ಜಾನ ಸುಹೇಲ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪುರಸಭೆ ಮಾಜಿ ಅಧ್ಯಕ್ಷ ಶಂಷುದ್ದಿನ್ ಬಾಬು, ಸದಸ್ಯರಾದ  ಅರುಣಾಚಲಂಮಣಿ, ಪ್ರಶಾಂತ್, ಶಫಿ, ಮೊದಲಾದವರಿ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!