• Tue. Apr 30th, 2024

PLACE YOUR AD HERE AT LOWEST PRICE

ಕೋಲಾರ : ಜಿಲ್ಲೆಯಲ್ಲಿ ವೋಟ್ ಫ್ರಂ ಹೊಂ (ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ)ಗೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ರಾಜಾ ರವರು ತಿಳಿಸಿದ್ದಾರೆ.

ನಮೂನೆ 12-ಡಿ ಯಲ್ಲಿ ನೊಂದಾಯಿಸಿಕೊoಡಿರುವ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಇಂದು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರನ್ವಯ ಚುನಾವಣಾ ಆಯೋಗವು ಮತದಾನದಿಂದ ವಂಚಿತರಾಗುತ್ತಿದ್ದ 80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮನೆಗೆ ಮತಗಟ್ಟೆ ಕಳುಹಿಸಿ ಮತದಾನ ಮಾಡುವ ಅಪೂರ್ವ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಅದರಂತೆ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 827 ಮತದಾರರಯ ಪೋಸ್ಟಲ್ ವೋಟಿಂಗ್ ಮಾಡಲು ನೋಂದಾಯಿಸಿ ಕೊಂಡಿದ್ದರು ಹಾಗೂ 191 ವಿಶೇಷ ಚೇತನ ಮತದಾರರು ಪೋಸ್ಟಲ್ ವೋಟಿಂಗ್ ಮೂಲಕ ಮತ ಚಲಾಯಿಸಲು ನೋಂದಾಯಿಸಿಕೊoಡಿದ್ದರು. ಇವರಿಗೆ ಮತದಾನ ಮಾಡಲು ಜಿಲ್ಲೆಯಲ್ಲಿ 100 ತಂಡಗಳನ್ನು 93 ವಿವಿಧ ಮಾರ್ಗಗಳಲ್ಲಿ ಮಾತದಾನಕ್ಕಾಗಿ ಕಳುಹಿಸಿಕೊಡಲಾಗಿತ್ತು.

ಮತ ಕ್ಷೇತ್ರವಾರು ಮತದಾನದ ವಿವರ: 144- ಶ್ರೀನಿವಾಸಪುರ ವಿಧಾನ ಸಭಾ ಮತ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 256 ಮತದಾರರು ಪೋಸ್ಟಲ್ ವೋಟಿಂಗ್ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ 238 ಮತದಾರರು ಮತ ಚಲಾಯಿಸಿದ್ದಾರೆ ಹಾಗೂ 36 ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು 33 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

145- ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 82 ಮತದಾರರು ಪೋಸ್ಟಲ್ ವೋಟಿಂಗ್ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ 78 ಮತದಾರರು ಮತ ಚಲಾಯಿಸಿದ್ದಾರೆ ಹಾಗೂ 21 ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು 21 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

146- ಕೆ.ಜಿ.ಎಫ್ ವಿಧಾನಸಭಾ ಮತ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 126 ಮತದಾರರು ಪೋಸ್ಟಲ್ ವೋಟಿಂಗ್ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ 116 ಮತದಾರರು ಮತ ಚಲಾಯಿಸಿದ್ದಾರೆ ಹಾಗೂ 37 ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು 34 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

147- ಬಂಗಾರಪೇಟೆ ವಿಧಾನಸಭಾ ಮತ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 73 ಮತದಾರರು ಪೋಸ್ಟಲ್ ವೋಟಿಂಗ್ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ 62 ಮತದಾರರು ಮತ ಚಲಾಯಿಸಿದ್ದಾರೆ ಹಾಗೂ 04 ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು 04 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!