• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಉದ್ದೇಶ ಪೂರ್ವಕವಾಗಿ ಪಟ್ಟಣದ ಕೆಲ ವಾರ್ಡುಗಳಲ್ಲಿ ಬಿಜೆಪಿ ಬೆಂಬಲಿತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಯುವ ಮೋರ್ಚಾ ಬಿಜೆಪಿ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ ಎಆರ್‍ಒ ರವರಿಗೆ ದೂರು ನೀಡಿದರು.

ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವುದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್ ಶಾಸಕರು ಬಿಜೆಪಿ ಬೆಂಬಲಿತ ಮತದಾರರನ್ನು ಪಟ್ಟಿ ಮಾಡಿ ಅಧಿಕಾರಿಗಳ ಮೇಲೆ ಒತ್ತಡಹಾಕಿ ಹೆಸರು ರದುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿಯ ಹಿರಿಯ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿರವರ ಹಿರಿಯ ಮಗ ರಾಹುಲ್‍ರೆಡ್ಡಿ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಅದೇ ರೀತಿ ಇತರೇ ಬಡವಾಣೆಗಳಲ್ಲಿ ಸಹ ಸುಮಾರು ಹೆಸರುಗಳನ್ನು ಕೈಬಿಡಲಾಗಿದೆಯೆಂದು ಅಧಿಕಾರಿಗಳ ವಿರುದ್ದ ಆರೋಪ ಮಾಡಿದರು.

ವಾರ್ಡ್ ನಂ.20ರಲ್ಲಿ ವಾಸವಾಗಿರುವ ರಾಹುಲ್‍ರೆಡ್ಡಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಚಲಾಯಿಸಿದ್ದಾರೆ. ಆದರೆ ಈ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ನಾಮತ್ತೆಯಾಗಿದೆ. ಇದೇ ರೀತಿ ಅನೇಕರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಮ ಮಾರ್ಗದಿಂದ ಗೆಲ್ಲಲು ಕುತಂತ್ರ ಮಾಡಿದ್ದಾರೆಂದು ದೂರಿದರು.

ಸತ್ತಿರುವವರ ಹೆಸರು ಪಟ್ಟಿಯಲ್ಲಿದೆ. ಬದುಕಿರುವವರ ಹೆಸರು ಮಾತ್ರ ಇಲ್ಲವೆಂದರೆ ಹೇಗೆ ಎಂದು ತಹಸೀಲ್ದಾರ್ ಯು.ರಶ್ಮೀರನ್ನು ಪ್ರಶ್ನಿಸಿದರು.ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಮುಗಿದಿದೆ.ಈಗ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ,

ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಲು ಚುನಾವಣೆ ಆಯೋಗ ಸಾಕಷ್ಟು ಸಮಯ ನೀಡಿದ್ದರೂ ಆಗ ಪರಿಶೀಲನೆ  ಮಾಡಿಕೊಳ್ಳದೆ ಸಮಯ ಮುಗಿದ ಬಳಿಕ ಬಂದು ಪ್ರಶ್ನಿಸಿದರೆ ಹೇಗೆ ಎಂದು ತಹಶೀಲ್ದಾರರು ಮರು ಪ್ರಶ್ನಿಸಿದರು.

ಇದು ಕಾಣದ ಕೈಗಳ ಕೈಚಲಕದಿಂದ ನಡೆದಿದ್ದು ಈ ಬಗ್ಗೆ ಆಯೋಗಕ್ಕೆ ಬಿಎಲ್‍ಒ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗುವುದೆಂದು ರಾಹುಲ್‍ರೆಡ್ಡಿ ತಿಳಿಸಿದರು.

ಈ ವೇಳೆ ಪುರಸಭೆ ಸದಸ್ಯ ಬಿ.ಪಿ.ಮಹೇಶ್, ಮಾಜಿ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ, ಗ್ರಾಪಂ ಸದಸ್ಯರಾದ ಪ್ರಸನ್ನ ಅಮರ್ ಯುವ ಮೋರ್ಚಾ ಅಧ್ಯಕ್ಷ ಬಿಂದು ಮಾಧವ, ಕರವೇ ಚಲಪತಿ ,ವಿನೋಧ್, ನರಸಾರೆಡ್ಡಿ, ಭರತ್, ಅಯ್ಯಮಂಜು, ಪ್ರವೀಣ್ ಮತ್ತಿತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!