• Sun. Apr 28th, 2024

PLACE YOUR AD HERE AT LOWEST PRICE

ಕೆಜಿಎಫ್:ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಬಡ ಕುಟುಂಬಗಳಿಗೆ ಸರ್ಕಾರಿ ಜಾಗ ಗುರುತಿಸಿ ನಿವೇಶನಕ್ಕೆ ಜಾಗ ನೀಡುವುದಾಗಿ ಕೆಜಿಎಫ್ ಕ್ಷೇತ್ರದ ಶಾಸಕಿ ಎಂ.ರೂಪಕಲಾ ಶಶಿಧರ್ ಭರವಸೆ ನೀಡಿದರು.

ತಾಲ್ಲೂಕಿನ ಎನ್.ಜಿ.ಹುಲ್ಕೂರು ಗ್ರಾಪಂಯ ಕದರಿಗಾನಕುಪ್ಪ, ಪಂತನಹಳ್ಳಿ, ಬಲಜೇನಹಳ್ಳಿ, ಜೀಡಮಾಕನಹಳ್ಳಿ, ಸುಣ್ಣಕುಪ್ಪ ಹಾಗೂ ದಾದೇನಹಳ್ಳಿ ಗ್ರಾಮಗಳಿಗೆ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಅಳಿಸಿ ಮಾತನಾಡಿದರು.

ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಾವಿರಾರೂ ಕುಟುಂಬಗಳು  ಸ್ವತಃ ಜಾಗ ಇಲ್ಲದೆ, ಬಡತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಗ್ರಾಪಂಯ ಮಟ್ಟದಲ್ಲಿ ಸೂಕ್ತ ಫಲಾನುಭವಿಗಳಿಂದ ಲಿಖಿತ ರೂಪದಲ್ಲಿ ಅರ್ಜಿ ಪಡೆದು, ನಿವೇಶನ ಮಂಜೂರು ಮಾಡವುದಾಗಿ ತಿಳಿಸಿದರು.

ಪಂತನಹಳ್ಳಿ ಗ್ರಾಮಕ್ಕೆ ಸೇರುವ ಸರ್ಕಾರದ 9 ಎಕರೆ ಜಾಗವು ರಾಜಪೇಟ್ ಮುಖ್ಯ ರಸ್ತೆ ಬಳಿಯೇ ಇದ್ದು, ಆಂದ್ರ ಮೂಲದ ಪ್ರಭಾವಿಗಳು ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಈ ಜಾಗವನ್ನು ಗ್ರಾಮಸ್ಥರಿಗೆ ನೀಡಬೇಕೆಂದು ಮನವಿ ಮಾಡಿದ ಸಲುವಾಗಿ ಶಾಸಕಿ ರೂಪಕಲಾ ತಕ್ಷಣ ಕಂದಾಯ ಅಧಿಕಾರಿಗಳಿಗೆ ಜಾಗವನ್ನು ಸರ್ವೇ ಮಾಡಿ ವಶಕ್ಕೆ ಪಡೆಯಲು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್, ಜಯರಾಮ್ ರೆಡ್ಡಿ, ಗ್ರಾಪಂ ಅಧ್ಯಕ್ಷರಾದ ಸುಂದರಪಾಳ್ಯ ರಾಂಬಾಬು, ಗೊಲ್ಲಹಳ್ಳಿ ಪವಿತ್ರ ಗೋಪಾಲ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕಮ್ಮಸಂದ್ರ ನಾಗರಾಜ್, ಕಾರಿ ಪ್ರಸನ್ನ, ಸುವರ್ಣಹಳ್ಳಿ ಕೃಷ್ಣಮೂರ್ತಿ, ಸುಬ್ಬಾರೆಡ್ಡಿ, ಮುನಿಸ್ವಾಮಿ ರೆಡ್ಡಿ, ಇಓ ಮಂಜುನಾಥ್, ಬಿಇಓ ಚಂದ್ರಶೇಖರ್, ತಹಸೀಲ್ಧಾರ್ ಮುನಿಯಪ್ಪ, ಆರೋಗ್ಯ ಇಲಾಖೆ ನಾಗಮಣಿ, ಕೃಷಿ ಇಲಾಖೆಯ ವಸಂತ್ ರೆಡ್ಡಿ, ಮೇಘಮಾಲ, ತೋಟಗಾರಿಕೆ ಇಲಾಖೆ ಶಿವಾರೆಡ್ಡಿ, ಮುಖಂಡರಾದ ಚಂದ್ರಕಾಂತ್, ಸುರೇಂದ್ರಗೌಡ, ಓಬಿಸಿ ಮುನಿಸ್ವಾಮಿ, ಸೀನಪ್ಪ, ನಾರಾಯಣಸ್ವಾಮಿ, ಪ್ರಭಾಕರ್, ಗುತ್ತಿಗೆದಾರ ಮುನಿರೆಡ್ಡಿ, ಕೋದಂಡರೆಡ್ಡಿ, ಮಹದೇವಪುರ ಚಂದ್ರಪ್ಪ, ಗ್ರಾಪಂ ಪಿಡಿಓ ಮಹೇಶ್, ರಾಜರಾಮ್, ಆರೋಗ್ಯ ಇಲಾಖೆಯ ಕುಮಾರ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!