• Thu. May 16th, 2024

PLACE YOUR AD HERE AT LOWEST PRICE

ಮಾಲೂರು:ನೆನ್ನೆ ರಾತ್ರಿ ಬೆಂಗಳೂರಿನಿಂದ ಕೆಜಿಎಫ್ ಹೊರಟಿದ್ದ ಮಾರಿಕುಪ್ಪಂ ಮೆಮು ರೈಲಿನಲ್ಲಿ ಮಾಲೂರು ರೈಲ್ವೆ ನಿಲ್ದಾಣದಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ ಪ್ರಾಯಾಣಿಕರು ಕೆಲಕಾಲ  ಆತಂಕಗೊಂಡ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಕೆಜಿಎಫ್ ನ ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೊರಟಿದ್ದ ರೈಲುಗಾಡಿ ಮಾಲೂರು ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನ ಇಂಜಿನ್ ನ ಮೇಲೆ ದಿಢೀರನೆ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಕಾಣಿಸಿಕೊಂಡಿತು.

ತಕ್ಷಣ ರೈಲಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿಯುತ್ತಿರುವಾಗ ರೈಲಿನ ಇಂಜಿನ್ ಹೊತ್ತಿಕೊಂಡು ಉರಿಯಲಾರಂಭಿಸಿತು. ಬೆಂಕಿಯೊಂದಿಗೆ ದಟ್ಟವಾದ ಹೊಗೆ ನಿಲ್ದಾಣವನ್ನು ಆವರಿಸಿತು. ಪ್ರಯಾಣಕರು ಕೆಳಗೆ ಇಳಿದಿದ್ದ ಕಾರಣ ಯಾವುದೇ ಪ್ರಾರಾಣಾಪಾಯವಾಗಲಿಲ್ಲ.

ರೈಲು ಇಂಜಿನ್ ಮೇಲೆ ಕಾಡ್ ಬೋರ್ಡ್ ತಗುಲಿ ರೈಲು ವಿದ್ಯುತ್ ತಂತಿಯ ಮೂಲಕ ಬೆಂಕಿ ಹೊತ್ತಿಕೊಂಡಿತು. ತಕ್ಷಣ ರೈಲ್ವೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಯಾರಿಗೂ ಗಾಯಗಳಾಗಲಿಲ್ಲವೆಂದು ತಿಳಿದುಬಂದಿದೆ.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!