• Sun. May 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸಮರ್ಪಕ ಪ್ರಚಾರವಿಲ್ಲ, ಕಾಲಾವಕಾಶ ಕಡಿಮೆ, ಮೇಲಧಿಕಾರಿಗಳ ಗೈರು ಹೀಗೆ ಹಲವು ಕಾರಣಗಳಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಫವತಿ ಖಾತೆ ಆಂದೋಲನದಿಂದ ಜನತೆಗೆ ಉಪಯೋಗ ಆಗುತ್ತಿಲ್ಲ ಎಂದು ತಾಲ್ಲೂಕಿನ ಚಿಕ್ಕವಲಗಮಾದಿ ಗ್ರಾಮಸ್ಥರು ಆರೋಪಿಸಿದರು.

ಜಿಲ್ಲೆಯಾದ್ಯಂತ ಫವತಿ ಖಾತೆ ಆಂದೋಲನದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮವು ಎರಡನೆಯ ದಿನವಾದ ಇಂದು ತಾಲ್ಲೂಕಿನ ಚಿಕ್ಕವಲಗಮಾದಿ ಕಂದಾಯ ವೃತ್ತದಲ್ಲಿ ಕಂದಾಯ ಇಲಾಖೆವತಿಯಿಂದ ಕಾರ್ಯಕ್ರಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ನಡೆಯುವ ವೇಳೆ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ಕರಪತ್ರ ಇರಲಿಲ್ಲ. ಕಂದಾಯ ವೃತ್ತಕ್ಕೆ ಚಿಕ್ಕವಲಗಮಾದಿ, ಹಾರೋಹಳ್ಳಿ, ವರದಾಪುರ, ಮಾಕಾರಹಳ್ಳಿ, ಸಿಂಗರಹಳ್ಳಿ ಮತ್ತು ಪರವನಹಳ್ಳಿ ಸೇರಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಗಳಿವೆ. ಆದರೆ ಕಾರ್ಯಕ್ರಮ ನಡೆಯುವಾಗ 10 ಜನರೂ ಸಹ ಹಾಜರಿಲ್ಲ.

ಗ್ರಾಮ ಆಡಳಿತಾಧಿಕಾರಿ ದವಾಲ್ ಸಾಬ್ ಒಬ್ಬರು ಮಾತ್ರ ಬ್ಯಾನರ್ ಬಳಿ ಕುಳಿತಿದ್ದರು. ಕಿರಿದಾದ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಆರಂಭಗೊಂಡು ಎರಡು ಘಂಟೆಗಳು  ಕಳೆಯುತ್ತಾ ಬಂದರೂ ಮೇಲಧಿಕಾರಿಗಳು ಅಲ್ಲಿಗೆ ಬರಲೇ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸಹ ಹಾಜರಿರಲಿಲ್ಲ. ನಾಲ್ಕೈದು ಜನ ಮಾತ್ರ ಹಾಜರಿದ್ದರು.

ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಸಧಸ್ಯ ಅಂಬೇಡ್ಕರ್ ಮಾತನಾಡಿ, ಇಲ್ಲಿ ಫವತಿ ಖಾತೆ ಆಂದೋಲನ  ಎಂಬ ಬ್ಯಾನರ್ ಅಳವಡಿಸಿಕೊಂಡು ಅಧಿಕಾರಿ ಕುಳಿತಿದ್ದಾರೆ. ಆದರೆ ಕಾರ್ಯಕ್ರಮದ ಬಗ್ಗೆ ಸರಿಯಾದ ರೀತಿಯಲ್ಲಿ ರೈತರಿಗೆ, ಜನರಿಗೆ ತಿಳಿಸಿಲ್ಲ. ಕೇವಲ ಕೆಲವು ಗ್ರಾಮ ಪಂಚಾಯಿತಿ ಸಧಸ್ಯರಿಗೆ ಹೇಳಿದ್ದೀವಿ ಎನ್ನುತ್ತಾರೆ.

 

ಕಂದಾಯ ವೃತ್ತದ ಅಧಿಕಾರಿಗಳು ಯಾವುದೇ ರೈತರಿಗೆ ವಿಷಯ ಮುಟ್ಟಿಸಿಲ್ಲ. ಕೆಲವು ಮುಖಂಡರಿಗೆ, ಗ್ರಾಮ ಪಂಚಾಯಿತಿ ಸಧಸ್ಯರಿಗೆ ಮಾತ್ರ ಹೇಳಿದ್ದೀವಿ ಎನ್ನುತ್ತಾರೆ. ನನಗೆ ನೆನ್ನೆ ಸಂಜೆ ಹೇಳಿದರು. ಕಂದಾಯ ವೇತ್ತಕ್ಕೆ ಸೇರಿದ ಹಳ್ಳಿಗಳ ಜನರಿಗೆ ವಿಷಯ ತಿಳಿಯದ ಕಾರಣ ಬಹುತೇಕ ರೈತರು ಬಂದಿಲ್ಲ.

ಫವತಿ ಖಾತೆ ಆಂದೋಲನ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಕಂದಾಯ ವೃತ್ತದ ಯಾವುದೇ ಗ್ರಾಮದಲ್ಲಿ ಡಂಗೂರ ಸಾರಿಸಿ ವಿಷಯ ತಿಳಿಸಿಲ್ಲ. ಕರಪತ್ರ ಹಂಚಿಲ್ಲ. ಸಾರ್ವಜನಿಕರಿಗೆ ತಿಳಿಸಿಲ್ಲ. ಕಾರ್ಯಕ್ರಮದಲ್ಲೂ ಕರಪತ್ರ ಯಾರಿಗೂ ಕೊಟ್ಟಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಹಾಲಿ ಗ್ರಾಮ ಪಂಚಾಯಿತಿ ಸಧಸ್ಯ ಮುನಿಸ್ವಾಮಿ ಪ್ರತಿಕ್ರಿಯಿಸಿ ಗ್ರಾಮ ಆಡಳಿತಾಧಿಕಾರಿ ನನಗೆ ನೆನ್ನೆ ಸಂಜೆ ದೂರವಾಣಿ ಮೂಲಕ ತಿಳಿಸಿದರು. ಕಾರ್ಯಕ್ರಮದ ಬಗ್ಗೆ ಒಂದು ವಾರದ ಮುಂಚಿಯವಾಗಿ ತಿಳಿಸಿದ್ದರೆ ಕಂದಾಯ ವೃತ್ತದ ಎಲ್ಲ ಹಳ್ಳಿಗಳಲ್ಲಿ ನಾವೇ ಪ್ರಚಾರ ಮಾಡುತ್ತಿದ್ದೆವು.

ಕಾರ್ಯಕ್ರಮದ ಬಗ್ಗೆ ನನಗೆ ಕರಪತ್ರವನ್ನೂ ನೀಡಿಲ್ಲ. ಗ್ರಾಮಗಳಲ್ಲಿ ಟಾಂ ಟಾಂ ಕೂಡ ಹೊಡೆಸಿಲ್ಲ. ದಿನಾಂಕಗಳನ್ನು ನಿಗದಿ ಮಾಡಿಬಿಟ್ಟಿದ್ದೇವೆ ಆದ್ದರಿಂದ ಕಾರ್ಯಕ್ರಮ ಮಾಡಲೇಬೇಕು ಎಂದರು ನಿಮ್ಮಿಷ್ಟ ಸಾರ್ ಮಾಡಿಕೊಂಡು ಹೋಗಿ ಎಂದು ತಿಳಿಸಿದ್ದೇನೆ. ಕಾರ್ಯಕ್ರಮ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!