• Thu. May 16th, 2024

PLACE YOUR AD HERE AT LOWEST PRICE

ಕರ್ನಾಟಕ ಸಮಸ್ತ ಜನಪರ ಸಂಘಟನೆಗಳಿ0ದ ದೇಶ ಉಳಿಸಿ ಸಂಕಲ್ಪ ಯಾತ್ರೆ – ಡಾ.ವಿ.ವೆಂಕಟೇಶ್

ಕೋಲಾರ,ಏಪ್ರಿಲ್.೦೧ : ಕರ್ನಾಟಕ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದೇಶ ಉಳಿಸಿ ಸಂಕಲ್ಪ ಯಾತ್ರೆ ವಾಹನಕ್ಕೆ ಇಂದು ಏಪ್ರಿಲ್ ೧ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಚಾಲನೆ ನೀಡಲಾಗಿದೆ ಎಂದು ಮಾಜಿ ಸಂಸದ ಡಾ. ವಿ. ವೆಂಕಟೇಶ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಸಂವಿಧಾನವನ್ನು ಕಾಪಾಡಿಕೊಳ್ಳಲು ದೇಶ ಉಳಿಸಿ ಸಂಕಲ್ಪ ಯಾತ್ರೆಯನ್ನು, ಮೂರು ವಾಹನಗಳಲ್ಲಿ ಕೋಲಾರ ಮಾರ್ಗವಾಗಿ ಬೆಳಗಾವಿಗೆ, ಹಾಗೂ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಳಗಾವಿಗೆ, ಮೈಸೂರು ಮಾರ್ಗವಾಗಿ ಬೆಳಗಾವಿಗೆ ಮೂರು ಮಾರ್ಗಗಳಲ್ಲಿ ಚಲಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಾಯ್ದು,  ಏಪ್ರಿಲ್ ಎಂಟ ರಂದು ಬೆಳಗಾವಿ ತಲುಪಲಿದೆ ಅಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ಸಮಾವೇಶಕ್ಕೆ ರಾಜ್ಯ ಸಂಘಟನೆ ಮುಖಂಡರು, ರಾಜ್ಯ ಇದ್ದರು ಸಮುದಾಯಗಳು,  ಸಾಹಿತಿಗಳು,  ಸಾಂಸ್ಕೃತಿಕ ವಲಯದ ಮುಂದಾಳುಗಳ ಸಮಾಗಮಗೊಳ್ಳಲಿದೆ ಎಂದರು.

ಈ ದೇಶವನ್ನು ಸರ್ವಾಧಿಕಾರದಿಂದ ದ್ವೇಷ ರಾಜಕಾರಣದಿಂದ ಸುಲಿಗೆ ಕೋರರನ್ನು ಕಾಪಾಡಿಕೊಳ್ಳಲು ಪಣತೊಡಲಾಗಿದೆ ಎಂದರಲ್ಲದೆ, ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ತನ್ನ ನಿಜ ಬಣ್ಣವನ್ನು ತೋರಿಸಿಕೊಂಡಿದೆ, ದೇಶದ ಪರಿಸ್ಥಿತಿಯನ್ನು ಅದೋಗತಿಗೆ ತಂದಿಟ್ಟಿದೆ ಜನಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ ಎಂದು ದೂರಿದರು. ಚುನಾವಣೆಯ ಮೊದಲು ಪುಲ್ವಾಮ ದಂತಹ ಮತ್ತೊಂದು ನೀಚ ಷಡ್ಯಂತರ ರೂಪಿಸುವ ಎಲ್ಲಾ ಸಾಧ್ಯತೆಗಳು ಇವೆ. ಆಗಿ ನಾವು ಜಾಗೃತರಾಗಬೇಕಿದೆ ಜನರನ್ನು ಜಾಗೃತಗೊಳಿಸಬೇಕಿದೆ ಮತ್ತು ಎಲ್ಲಾ ಜನಪರ ಶಕ್ತಿಗಳನ್ನು ಬೆಸೆದು ಬರಲಿರುವ ಚುನಾವಣೆಯಲ್ಲಿ ಅವರನ್ನು ಸೋಲಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ಪಕ್ಷವು ಇಸ್ ಬಾರ್ ಚಾರ್ ಸೌ ಪಾರ್ ಎಂಬ ಒಸಿ ಪ್ರಚಾರದಲ್ಲಿ ತೊಡಗಿದೆ ಅವರು ಏನು ಹೇಳಿದರೂ ಜನರು ತೀರ್ಮಾನಿಸಿದ್ದಾರೆ. ಇಸ್ ಬಾರ್ ಬಿಜೆಪಿಗೆ ಹಾರ್ ಬಿಜೆಪಿ ೪೦೦ ಮುಟ್ಟುವುದಿರಲಿ ೨೦೦ ತಲುಪುವುದು ಕಷ್ಟವಿದೆ. ಜನಸಾಮಾನ್ಯರನ್ನು ಸಂಕಷ್ಟಗಳ ಕುಪಕ್ಕೆ ತಳ್ಳಿರುವ ಬಿಜೆಪಿಗೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಬೆಂಗಳೂರು ಚೆನ್ನಮ್ಮ, ದಲಿತ ಸಂಘರ್ಷ ಸಮಿತಿ ಮುಖಂಡ ಹಾರೋಹಳ್ಳಿ ವೆಂಕಟೇಶ್, ಅಲ್ಪಸಂಖ್ಯಾತ ಸಮುದಾಯದ ಮುಬಾರಕ್ ಬಾಗಬಾನ, ಕೆ.ಎಸ್.ಎಸ್.ಡಿ ಸಂಘಟನೆಯ ಜಿಲ್ಲಾಧ್ಯಕ್ಷ ಸುಧಾಕರ್, ಎ.ಎ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್, ರೆಡ್ಡಿ ಇತರರು ಇದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!