• Sat. Oct 5th, 2024

PLACE YOUR AD HERE AT LOWEST PRICE

ಕೋಲಾರ:ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯದು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. ಅಂತಹ ಯಶೋಗಾಥೆಗೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಬಿಎಂಟಿಸಿ ಸಂಸ್ಥೆಯ ನಿರ್ವಾಹಕ ವೇಣುಗೋಪಾಲ ಅವರು ತಮ್ಮ ಮೂರು ಎಕರೆಯಲ್ಲಿ 7 ವರ್ಷಗಳ ಹಿಂದೆ ನೇರಳೆ ಗಿಡ ನಾಟಿ ಮಾಡಿದ್ದು ಕಳೆದ ನಾಲ್ಕು ವರ್ಷಗಳಿಂದ ಆದಾಯ ಗಳಿಸುತ್ತಿದ್ದಾರೆ.

ಇನ್ನು ನೇರಳೆ ಗಿಡ ನಾಟಿ ಮಾಡಿದ ಮೂರು ವರ್ಷಕ್ಕೆ ಫಸಲು ಬಿಡಲಾರಂಭಿಸಿದ್ದು, ಲಕ್ಷಕ್ಕೆ ಮೊದಲ ಫಸಲು ಮಾರಾಟ ಮಾಡಿದ್ದಾರೆ. ನಂತರ ಎರಡು ವರ್ಷಗಳಿಗೆ ಉತ್ತಮ ಆದಾಯವನ್ನು ಮಾಡಿಕೊಂಡಿದ್ದಾರೆ. ಇದೀಗ ಒಟ್ಟು ತೋಟವನ್ನು ಮೂರು ವರ್ಷಗಳವರೆಗೆ ಲಕ್ಷಾಂತರ ರೂ. ಆದಾಯ ಮಾಡಲಾಗಿದೆ.

 ಇತರೆ ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಹೋಲಿಕೆ ಮಾಡಿದ್ರೆ ನೇರಳೆ ಗಿಡಕ್ಕೆ ಖರ್ಚು ಕಡಿಮೆಯಾಗುತ್ತೆ. ಈ ಹಿಂದೆ ಕೂಲಿಯಾಳುಗಳಿಗೆ ದುಬಾರಿ ಕೂಲಿ ಕೊಡಬೇಕಿತ್ತು. ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆದ್ರೆ ನೇರಳೆ ಬೆಳೆಗೆ ಯಾವುದೇ ದುಬಾರಿ ಬಂಡವಾಳವಿಲ್ಲ. ಕಡಿಮೆ ಖರ್ಚಿನಲ್ಲಿ ವಾರ್ಷಿಕ ಬೆಳೆಯಾದ ನೇರಳೆಯಿಂದ ಉತ್ತಮ ಫಸಲು ಬರುತ್ತಿದ.

ಇನ್ನು ಒಂದು ಸಸಿ ಸರಾಸರಿ 40 ಕೆಜಿ ಹಣ್ಣನ್ನು ಬಿಡುತ್ತದೆ. ಕೆಲವೊಂದು ನೇರಳೆ ಮರಗಳು 60 ಕೆಜಿ ವರೆಗೂ ಸಹ ಹಣನ್ನು ಬಿಡುತ್ತವೆ. ಅಲ್ಲದೆ ನೇರಳೆ ಬೆಳೆಗೆ ವಾರ್ಷಿಕ ಖರ್ಚು 20 ರಿಂದ 30 ಸಾವಿರ ರೂಪಾಯಿ ಮಾತ್ರ ಬರುತ್ತದೆ. ಹೂ ಬಿಡುವ ಹಂತದಲ್ಲಿ ಎರಡು ಮೂರು ಬಾರಿ ಔಷಧಿಯನ್ನು ಸಿಂಪಡಣೆ ಮಾಡಿದ್ರೆ ಸಾಕು ಮತ್ತೆ ಯಾವುದೇ ರೀತಿಯ ಖರ್ಚು ಇರುವುದಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ನೀರು ಹಾಯಿಸಿದ್ರೆ ಸಾಕು ಉತ್ತಮ ಫಸಲು ಪಡೆಯಬಹುದು ಎಂದು ರೈತ ವೇಣುಗೋಪಾಲ ಹೇಳಿದರು.

ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 100 ರಿಂದ ರಿಂದ 150 ರೂಪಾಯಿವರೆಗೂ ಬೆಲೆ ಇದೆ. ಒಟ್ಟು ತೋಟವನ್ನು ಮೂರು ವರ್ಷಗಳವರೆಗೆ ಲಕ್ಷಾಂತರ ರೂ. ಗಳಿಗೆ ಮಾರಾಟ ಮಾಡಲಾಗಿದೆ.

ಇದು ಕಡಿಮೆ ಖರ್ಚಿನ ಅಧಿಕ ಲಾಭದ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯಿಂದಲೂ ಸಹ ನೇರಳೆ ಗಿಡಗಳಿಗೆ ಸಹಾಯಧನವನ್ನು ಪಡೆಯದೇ, ಸ್ವಂತ ಹಣದಲ್ಲಿ ಲಾಭವನ್ನು ಕಾಣಲಾಗುತ್ತಿದೆ.

 ಒಟ್ಟಾರೆ ನಾನಾ ರೀತಿಯ ತರಕಾರಿ ಬೆಳೆ ಬೆಳೆದು ರೈತರು ಕೈ ಸುಟ್ಟಿಕೊಳ್ಳುವ ಬದಲಿಗೆ ಕಡಿಮೆ ಬಂಡವಾಳದ ನೇರಳೆ ಬೆಳೆ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಪಡೆಯಬಹುದು.

-ಸತೀಶ್.

Related Post

ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕೆಂದರೆ ನಾವು ಜಾಗೃತರಾಗಿ ಸಮಾಜವನ್ನೂ ಜಾಗೃತಗೊಳಿಸಬೇಕು ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು. 
ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕೆಂದರೆ ನಾವು ಜಾಗೃತರಾಗಿ ಸಮಾಜವನ್ನೂ ಜಾಗೃತಗೊಳಿಸಬೇಕು ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು. 
ರೇಣುಕಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

Leave a Reply

Your email address will not be published. Required fields are marked *

You missed

error: Content is protected !!