• Fri. May 3rd, 2024

ಕೋಲಾರ ಕಸಾಪದಿಂದ ಪುಸ್ತಕಯಾನ – ಓದುವ ಬಳಗ ಕಟ್ಟೋಣ ಕಾರ್ಯಕ್ರಮ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿವಿಧೆಡೆ  ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡ ಪ್ರೇಮವನ್ನು ಜಾಗೃತಿಗೊಳಿಸಲು ಮುಂದಾಗಿದೆ.

ಇದರ ಭಾಗವಾಗಿ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪುಸ್ತಕಯಾನ – ಓದುವ ಬಳಗ ಕಟ್ಟೋಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ  ಎನ್. ಬಿ ಗೋಪಾಲಗೌಡ ಮಾತನಾಡಿ, ದೇಹಕ್ಕೆ ವ್ಯಾಯಾಮವಿದ್ದಂತೆ ಮೆದುಳಿಗೆ ಓದು. ಇಂದಿನ ದಿನಗಳಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗಿದೆ. ಯುವಕ ಯುವತಿಯರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಹೊಸ ಓದುಗರ ಬಳಗ ಸೃಷ್ಟಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಅತ್ಯುತ್ತಮ ಪುಸ್ತಕಗಳನ್ನು ಕಾಲೇಜಿಗೆ ತಂದು ವಿದ್ಯಾರ್ಥಿಗಳಿಗೆ ಕೊಟ್ಟು ಒಂದು ತಿಂಗಳ ಕಾಲ ಓದಿಸಿ ನಂತರ ಪುಸ್ತಕ ಓದಿದ ವಿದ್ಯಾರ್ಥಿಗಳು ಪುಸ್ತಕ ಕುರಿತು ಪ್ರಬಂಧ ಬರೆಯುವುದು, ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತು ಸಂವಾದ ಮತ್ತು ವೇದಿಕೆಯಲ್ಲಿ ಪುಸ್ತಕ ಕುರಿತು ಮಾತನಾಡಿಸುವ ಮೂಲಕ ಯುವಕರಲ್ಲಿ ಓದುವ ಹವ್ಯಾಸ ಮೂಡಿಸಲು ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.

ಹೊಸ ಆಲೋಚನೆಗಳು ಬರುವುದೇ ಪುಸ್ತಗಳನ್ನು ಓದಿದಾಗ, ಯಾವುದೇ ಕೆಲಸವಾದರೂ ಆರಂಭಿಸುವ ಮುನ್ನ ಕಠಿಣ ಒಮ್ಮೆ ಅಭ್ಯಾಸ ವಾದರೆ ನಂತರ ಸಲೀಸು ಆದ್ದರಿಂದ ಇಂದಿನಿಂದಲೇ ಓದಲು ಪ್ರಾರಂಭಿಸಿ ಎಂದು ತಿಳಿಸಿದರು.

ಈ ಪುಸ್ತಕಯಾನ ನಿರಂತರವಾಗಿ ನಡೆಯಲಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಕಸಾಪ ಘಟಕಗಳ ಮೂಲಕ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಉದ್ಘಾಟನೆ ಮಾಡಿದ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡುತ್ತಾ, ಹಲವು ಜಗತ್ತುಗಳಿಗೆ ಏಕೈಕ ಕಿಟಕಿ ಪುಸ್ತಕವಾಗಿದೆ. ಸಾವಿರ ವರ್ಷಗಳ ಸಾಹಿತ್ಯ ಕೃಷಿ ದುಡಿದು ಶ್ರಮಪಟ್ಟ ಫಸಲು ಇವತ್ತು ಬೇಡವಾಗಿರುವುದು ದುಃಖದ ಸಂಗತಿಯಾಗಿದೆ ಎಂದರು .

ಓದಿನ ಬಗ್ಗೆ ಅಂಬೇಡ್ಕರ್ ಹಾಗೂ ಶಹಜಾದೆಯರ ಉದಾಹರಣೆಯನ್ನ ನೀಡುತ್ತಾ ಶಹಜಾದೆ ರಾಜನಿಗೆ ಅರೇಬಿಯನ್ ನೈಟ್ಸ್ ಕಥೆಯನ್ನು ಹೇಳುವುದರ ಮೂಲಕ ರಾಜನಿಂದ ನಡೆಯಬಹುದಾದ ಅನೇಕ ತರುಣೆಯರ ಹತ್ಯೆಯನ್ನು ನಿಲ್ಲಿಸಿ ಮೃಗೀಯ ವ್ಯಕ್ತಿಯನ್ನು ಮನುಷ್ಯನಾಗಿ ಬದಲಾವಣೆ ಮಾಡಿದ ಉದಾಹರಣೆ ನೀಡಿದರು.

ಸಾಹಿತ್ಯ ಸಾವನ್ನ ಜಯಿಸುತ್ತದೆ ಮರುಜೀವವನ್ನು ನೀಡುವ ಒಂದು ದೊಡ್ಡ ಆಗರ ಅಂತಹ ಸಾಹಿತ್ಯ ಕೃತಿಗಳನ್ನು ನಾವೆಲ್ಲರೂ ಅಧ್ಯಯನವನ್ನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಬದುಕು ಹಸನುಗೊಳ್ಳುತ್ತದೆ ಎಂದು ಹೇಳುತ್ತಾ ಮಕ್ಕಳಿಗೆ ಪುಸ್ತಕವನ್ನು ನೀಡಿ ಓದುವ ಅಭಿರುಚಿಯನ್ನು ಬೆಳೆಸುತ್ತಿರುವ ಕಾರ್ಯ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ರಾವ್ ವಹಿಸಿದ್ದರು.

ಡಾ. ಶಿವಪ್ಪ ರವರು ಹಲವಾರು ಪುಸ್ತಗಳ ಪರಿಚಯ ಮಾಡಿಕೊಟ್ಟರು. ಎಚ್. ಎ. ಪುರುಷೋತ್ತಮ್ ರಾವ್ ಪುಸ್ತಕ ಓದುವ ಕಲೆ ಹಾಗು ಅದರಿಂದಾಗುವ ಪ್ರಯೋಜನಗಳ ಕುರಿತು ಮಾತನಾಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಿ. ಎ. ರಮೇಶ್ ಹಲವಾರು ಉದಾಹರಣೆ ಗಳ ಮೂಲಕ ಕನ್ನಡ ಸಾಹಿತ್ಯದ ವ್ಯೆಶಿಷ್ಟತೆಗಳನ್ನು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಆರ್. ಶಂಕರಪ್ಪ ಸ್ವಾಗತಿಸಿದರು. ಕೋಶಾಧ್ಯಕ್ಷ ವಿನಯ್ ಗಂಗಾಪುರ, ಸಂಘಟನಾ ಕಾರ್ಯದರ್ಶಿ ಕೋ.ನ ಪರಮೇಶ್ವರನ್, ಪ್ರಧಾನ ಸಂಚಾಲಕ  ಆರ್ ರವಿಕುಮಾರ್ ತಾಲೂಕು ಕಸಾಪ ಗೌರವಾಧ್ಯಕ್ಷ ಸುಬ್ಬರಾಮಯ್ಯ, ಪ್ರಧಾನ ಸಂಚಾಲಕ  ವೇಣು ಸುಂದರ ಗೌಡ, ಮಹಿಳಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಇದನ್ನು ಓದಿ: ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಕೋಲಾರ ನಗರ; ಎಸ್ ಪಿ ದೇವರಾಜ್

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!