• Sat. May 18th, 2024

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡೆಸ್ಕ್‌ಗಳ ವ್ಯವಸ್ಥೆ ಮಾಡಿದ ಕೆಜಿಎಫ್ ಶಾಸಕಿ ಡಾ. ರೂಪಕಲ.

PLACE YOUR AD HERE AT LOWEST PRICE

ಕೆ.ಜಿ.ಎಫ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಕೊಠಡಿಗಳಲ್ಲಿ ಡೆಸ್ಕ್‌ಗಳಿಲ್ಲದೆ  ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ಅರಿತ ಕೆಜಿಎಫ್ ಶಾಸಕಿ ಡಾ. ರೂಪಕಲಾ ಎಂ ಶಶಿಧರ್  ನಗರಸಭೆ ವತಿಯಿಂದ ಅನುದಾನ ಬಿಡುಗಡೆಗೊಳಿಸಿ ಡೆಸ್ಕ್‌ಗಳನ್ನು ವ್ಯವಸ್ಥೆಗೊಳಿಸಿದ್ದಾರೆ.
ನಗರದಲ್ಲಿರುವ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ನಿರ್ಮಾಣವಾಗಿರುವ ನೂತನ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕೂರಲು ಡೆಸ್ಕ್ ಇಲ್ಲದೆ ಇರುವ ಬಗ್ಗೆ ಮಾಹಿತಿ ಪಡೆದು  ಶಾಸಕಿ ಡಾ. ರೂಪಕಲಾ‌ ಎಂ ಶಶಿಧರ್  ದಿ.21-11-2022ರಂದು ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದರು.
ನಂತರ ಡೆಸ್ಕ್ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ತುರ್ತಾಗಿ ನಗರಸಭೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಡೆಸ್ಕ್ ನೀಡಲು ಕ್ರಮ ಕೈಗೊಂಡಿದ್ದರು.
ಅದರಂತೆ ಇಂದು ದಿನಾಂಕ: 06-01-2023 ರಂದು 73 ಡೆಸ್ಕುಗಳನ್ನು ನಗರಸಭೆ ಅಧ್ಯಕ್ಷ  ವಳ್ಳಲ್ ಮುನಿಸ್ವಾಮಿರ  ಮುಖಾಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳನ್ನು  ಹಸ್ತಾಂತರಿಸಲಾಯಿತು.
ಬಾಕಿ ಇರುವ 27 ಡೆಸ್ಕ್‌ಗಳನ್ನು  ಇನ್ನೆರಡು ದಿನದೊಳಗೆ ಕಾಲೇಜು ತಲುಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜರ್ಮನ್, ಮುಖಂಡರಾದ ಭಾಸ್ಕರನ್,  ನಂದಕುಮಾರ್,  ರಷೀಧ್ ಖಾನ್, ಅನ್ಬು ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!