• Sat. May 4th, 2024

ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ.

PLACE YOUR AD HERE AT LOWEST PRICE

ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ಬಂಗಾರಪೇಟೆತಾಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಮುಖಂಡ ಬಿ.ಎಲ್. ಕೇಶವರಾವ್ ಸರ್ಕಾರ ಎಲ್ಲಾ ನೌಕರರಿಗೆ ಕಾಲಕ್ಕೆ ತಕ್ಕಂತೆ ವೇತನ ಪರಿಷ್ಕಣೆ ಮಾಡುತ್ತಿದೆ. ಆದರೆ ದಿನದ 24ಗಂಟೆಯೂ ಗ್ರಾಮಗಳ ಸ್ವಚ್ಚತೆ ಹಾಗೂ ಅಭಿವೃದ್ದಿಗಾಗಿ ಶ್ರಮಿಸುವ ಗ್ರಾಪಂ ನೌಕರರನ್ನು ಮಾತ್ರ ಕಡೆಗಣಿಸುತ್ತಿದೆ.
ತಾರತಮ್ಯವನ್ನು ಹೋಗಲಾಡಿಸಿ ಎಲ್ಲಾ ಸರ್ಕಾರಿ ನೌಕರರಿಗೆ ನೀಡುವ ಗೌರವ ಹಾಗೂ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು.ಸರ್ಕಾರದ ಆದೇಶದಂತೆ ಎಲ್ಲಾ ಸಿಬ್ಬಂದಿಗಳನ್ನು ಇಎಫೆಎಂಎಸ್ ಮತ್ತು ಹೆಚ್‍ಎಂಎಸ್‍ಗೆ ಸೇರಿಸಬೇಕು.
ಕನಿಷ್ಟ ವೇತನ ನಿಗದಿ ಮಾಡಿ 5ವರ್ಷ ಮುಗಿದಿರುವುದರಿಂದ ಕನಿಷ್ಟ ಕೂಲಿ ಕಾನೂನು ರೀತ್ಯಾ ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾಪಂ ಸಿಬ್ಬಂದಿಗಳಿಗೆ 28ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. 15ನೇ ಹಣಕಾಸಿನಲ್ಲಿ ನರೇಗಾದಲ್ಲಿ ಮತ್ತು ತೆರಿಗೆ ವಸೂಲಿಯಲ್ಲಿ ವೇತನ ಪಾವತಿಸದ ಗ್ರಾ ಪಂ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕು.
ಅನುದಾನದಲ್ಲಿ ಕಡ್ಡಾಯವಾಗಿ ವೇತನ ಪಾವತಿಸುವಂತೆ ಆಗ್ರಹಸಿ ಪ್ರಸ್ತುತ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಜಿ ಪಂ ಅನುಮೋದನೆ ನೀಡಬೇಕು. ಪಿ ಮತ್ತು ಆರ್ ನಿಯಮಗಳು ಇತ್ತೀಚಿಗೆ ಬಂದಿದ್ದು ಇದಕ್ಕಿಂತ ಮೊದಲು ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿದ್ಯಾಭ್ಯಾಸ ಕಡ್ಡಾಯವನ್ನು ಹಿಂಪಡೆಯಬೇಕು.
ನಿವೃತ್ತಿ ಹೊಂದಿರುವ ನೌಕರರಿಗೆ ಗ್ರಾಚುಟಿ 20ತಿಂಗಳು ನೀಡಬೇಕು. ಭಾನುವರ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡಬೇಕು. ಬಾಕಿ ಉಳಿಸಿಕೊಂಡಿರುವ ನೌಕರರ ವೇತನವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಂ.ಮೋಹನ್, ತ್ಯಾಗರಾಜ್, ಕೃಷ್ಣಪ್ಪ
ಮತ್ತಿತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!