• Sat. Apr 27th, 2024

ಗುಟ್ಟಹಳ್ಳಿಯಲ್ಲಿ ವಾಜಪೇಯಿ ಜನ್ಮ ದಿನದ ಅಂಗವಾಗಿ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ.

PLACE YOUR AD HERE AT LOWEST PRICE

ಮಾಜಿ ಪ್ರಧಾನಿಗಳಾದ ದಿ.ಅಟಲ್ ಬಿಹಾರಿ ವಾಜಪೇಯಿರವರ ಹೆಸರಿನಲ್ಲಿ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿದ ಕ್ರೀಡಾಕೋಟಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅದ್ಯಕ್ಷ ಸಮಾಜ ಸೇವಕ ಸುರೇಶ್ ಹೇಳಿದರು.

ಅವರು ತಾಲ್ಲೂಕಿನ ಬೇತಮಂಗಲ ಹೋಬಳಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಟ್ಟಹಳ್ಳಿ (ಬಂಗಾರು ತಿರುಪತಿ) ಮೈದಾನದಲ್ಲಿ ಹಮ್ಮಿಕೊಳಡಿದ್ದ ಅಟಲ್ ಬಿಹಾರಿ ವಾಜಪೇಯಿ ಸೀಸನ್-1 ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರನೆ ಅಂಗವಾಗಿ ಆರಂಭವಾಗಿರು ಕ್ರೀಡಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು. ಕ್ರಿಕೆಟ್ ಜೊತೆಗೆ ಕಬಡ್ಡಿ, ಕೋಕೊ, ವಾಲಿಬಾಲ್ ಸೇರಿದಂತೆ ಹಲವು ಕ್ರೀಡಾಕೂಟ ಆಯೋಜಿಸಲಾಗುವುದು.

ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಜಿಲ್ಲಾ ಮಟ್ಟದ ಟೂರ್ನಿಮೆಂಟುಗಳನ್ನು ನಡೆಸಲಾಗುವುದು. ಯುವ ಜನತೆಯನ್ನು ದುಶ್ಚಟಗಳಿಂದ ದೂರವಿಡಲು ಮತ್ತು ಕ್ರಿಯಾಶೀಲರನ್ನಾಗಿ ಉಳಿಸಲು ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಕ್ರೀಡೆಗಳಲ್ಲಿ ಸೂಲು ಗೆಲುವು ಸಹಜ, ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲಾಗಲಿದೆ. ಸೋತವರು ನೊಂದುಕೊಳ್ಳದೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಇದಕ್ಕೆ ಕ್ಷೇತ್ರದ ಎಲ್ಲಾ ಯುವಕರು ಪ್ರೋತ್ಸಾಹ ನೀಡಬೇಕೆಂದ ಅವರು ನಿರಂತರ ಕ್ರೀಡಾಕೂಟಗಳಿಗೆ ತಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

ಒ.ಎಸ್.ಆರ್ ಸಂಸ್ಥೆಯ ಸ್ಥಾಪಕರೂ ಆದ ಸುರೇಶ್ ರವರು ತಮ್ಮ ಸ್ವಂತ ಹಣದಿಂದ  ಟೂರ್ನಿಮೆಂಟ ಆಯೋಜಿಸಿದ್ದರು. ಟ್ರೋಪಿ ಮತ್ತು 30 ಸಾವಿರ ಮೊದಲ ಬಹುಮಾನ, ಟ್ರೋಪಿ ಮತ್ತು 20 ಸಾವಿರ ಎರಡನೆಯ ಬಹುಮಾನ, ಟ್ರೋಪಿ ಮತ್ತು 10 ಸಾವಿರ ಮೂರನೆಯ ಬಹುಮಾನ ಇತ್ತು.

ಬಡಮಾಕನಹಳ್ಳಿ ವಾರಿಯರ್ಸ್ 11 ತಂಡ ಮೊದಲನೆಯ ಬಹುಮಾನ, ಜಂಗಮಾನಹಳ್ಳಿಯ ಜೆ.ಹೆಚ್ ಬಾಯ್ಸ್ ತಂಡ ಎರಡನೆಯ ಬಹುಮಾನ, ಬೇತಮಂಗಲದ ನ್ಯೂಟೌನ್ ರಾಯಲ್ ತಂಡ ಮೂರನೆಯ ಬಹುಮಾನ ಪಡೆದುಕೊಂಡಿತು. ವ್ಯಯಕ್ತಿಕ ಬಹುಮಾನಗಳನ್ನೂ ನೀಡಲಾಯಿತು.

ಈ ವೇಳೆ ದೈಹಿಕ ಶಿಕ್ಷಕ ಪ್ರಭಾಕರ್, ಗ್ರಾಮ ಪಂಚಾಯಿತಿ ಸದಸ್ಯ ರೆಡ್ಡಿಹಳ್ಳಿ     ಸ್ವಾಮಿವೇಲ್, ಶಿವಾರೆಡ್ಡಿ, ಡಿ.ಎಸ್.ಸುಬ್ರಬಣಿ, ಸುಲ್ತಾನ್ ಹೋಟೆಲ್ ನಯಾಜ್ ಮುಜೀಬ್, ರಫೀಕ್ ಪಾಷಾ, ಹರೀಶ್, ನಾರಾಯಣಸ್ವಾಮಿ, ಗಂಗಾಧರ್, ರಂಜಿತ್, ಮಧು, ಕಿರಣ್, ಯೂನಿಸ್, ಶಿವ, ಸಂತೋಷ್, ಸುರೆಶ್, ಹುಸೇನ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!