• Mon. Apr 29th, 2024

ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮತ ಕೇಳುತ್ತೇನೆದ ಮಾಜಿ ಸಚಿವ !!

PLACE YOUR AD HERE AT LOWEST PRICE

ತ್ಯಾವನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿದ ನಂತರ ಮತ ಕೇಳುತ್ತೇನೆ :  ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್
ತ್ಯಾವನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಿಸಿ ರಸ್ತೆಗಳನ್ನು ಕೇಳಿದ್ದೀರಾ ಅವುಗಳನ್ನು  ಆದಷ್ಟು ಬೇಗ ಮಾಡಿಕೊಡುತ್ತೇನೆ. ಇನ್ನು ಒಂದು ತಿಂಗಳಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ನಿಮ್ಮ ಬಳಿ ಮತ ಕೇಳುತ್ತೇನೆ ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ತಿಳಿಸಿದರು.
ತಾಲೂಕಿನ ತ್ಯಾವನಹಳ್ಳಿ ಗ್ರಾಮದಲ್ಲಿ ಬುಧವಾರ ಕುಂದು ಕೊರತೆ ಸಭೆಯಲ್ಲಿ ಗ್ರಾಮದ ಸಮಸ್ಯೆಗಳನ್ನು ಅವರು ಆಲಿಸಿ ಮಾತನಾಡುತ್ತಾ, ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ನಾಲ್ಕು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದೀರಾ, ನಾನು ಬಂದ ಹೋದ ಮಾತ್ರಕ್ಕೆ ನಿಮ್ಮ ಗ್ರಾಮದ ರಸ್ತೆ ನಿರ್ಮಾಣ ಆಗಿ ಉದ್ಘಾಟನೆಯಾಗಿದೆ. ಇನ್ನು ಒಂದರಿಂದ ಎರಡು ತಿಂಗಳಲ್ಲಿ  ನಾನು ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿಪಡಿಸುತ್ತೇನೆ. ನನಗೆ ಮತ ಕೊಡಿ ಎಂದು ಕೇಳಲ್ಲ, ನಿಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸಿರುವುದಕ್ಕೆ ಕೂಲಿಯಾಗಿ ಮತ ನೀಡಿ ಎಂದು ಕೇಳಲು ನಿಮ್ಮ ಗ್ರಾಮಕ್ಕೆ  ಬಂದಿರುವುದೆಂದರು.
ಗ್ರಾಮದಲ್ಲಿರುವ ಕುಂದು ಕೊರತೆಗಳನ್ನು ಕಣ್ಣಾರೆ ಕಂಡು, ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಕ್ಕೆ ಬಂದಿದ್ದೇನೆ. ನಿಮ್ಮ ಗ್ರಾಮಕ್ಕೆ ನಾನು ಶಾಸಕನಾಗಿದ್ದಾಗ  ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಾನು ಸೋತ ನಂತರ ನಿಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಶಾಸಕರಿಗೆ ನಿಮ್ಮೂರಿನ ರಸ್ತೆಯೂ ಗೊತ್ತಿಲ್ಲ. ನಿಮ್ಮೂರಿನ ಹೆಸರೇ ಗೊತ್ತಿಲ್ಲ ಅಂತಹ ಅವರಿಗೆ ಗ್ರಾಮದಲ್ಲಿ ಮತ ಕೊಟ್ಟಿದ್ದೀರಾ ಏಕೆ ಎಂದು  ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಗ್ರಾಮಸ್ಥರು ಇನ್ನು ಮುಂದೆ ಬೇರೆ ಪಕ್ಷಕ್ಕೆ ಮತ ನೀಡಿದರೆ ಚೌಡೇಶ್ವರಿ ದೇವಿ ನಮಗೆ ಶಿಕ್ಷೆ ನೀಡಲಿ ಎಂದು ಪ್ರಮಾಣ ಮಾಡಿ ಮುಂದೆ ಬರಲಿರುವ ಚುನಾವಣೆಯಲ್ಲಿ ನಮ್ಮ ಗ್ರಾಮದಿಂದ ನಾಲ್ಕು ನೂರಕ್ಕೂ ಹೆಚ್ಚು ಮತಗಳನ್ನು ನೀಡುತ್ತೇವೆ ಎಂದು ಶಪಥ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ  ಬಿಗ್ಲಿ ಸೂರ್ಯ ಪ್ರಕಾಶ್, ಬಂಕ್ ಮಂಜುನಾಥ್, ಗ್ರಾಮದ  ಮುಖಂಡರಾದ ನಾರಾಯಣಪ್ಪ, ಗ್ರಾಮ ಪಂಚಾಯತಿ ಸದಸ್ಯ ಮುನಿರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!