• Fri. Apr 26th, 2024

ಅದ್ದೂರಿಯಾಗಿ ಮೂಡಿಬಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬ

PLACE YOUR AD HERE AT LOWEST PRICE

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಸಾರಥ್ಯದ ಕೋಲಾರ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬವನ್ನು ನಗರದ ಡೂಂಲೈಟ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು, ನುಡಿಗೆ ದಕ್ಕೆಯಾದಾಗ ಹೋರಾಟದ ಮೂಲಕ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಮ್ಮ ಸಂಘಟನೆಯ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಈಗ ಸ್ಥಳೀಯ ಜೆ.ಡಿ.ಎಸ್.ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಸಹ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೋಲಾರದ ಜನತೆ ಅವರಿಗೆ ಆಶೀರ್ವದಿಸಿ ಕೋಲಾರದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದ ಅವರು ಒಳ್ಳೆಯ ಕೆಲಸಗಳಿಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಸಮಾಜ ಸೇವಕ ಹಾಗೂ ಜೆ.ಡಿ.ಎಸ್.ಮುಖಂಡ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಪ್ರವೀಣ್ ಶೆಟ್ಟಿಯವರು ರಾಜ್ಯಾದ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು, ಅವರ ಕೊಡುಗೆ ಅಪಾರ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವ ಕರವೇ ಸಂಘಟನೆಯ ಸೇವೆ ಶ್ಲಾಘನೀಯ. ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಕನ್ನಡದ ಮೇಲೆ ಅಭಿಮಾನ ಬೆಳೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರುಗಳಾದ ಶಿವರಾಜಗೌಡ, ಕರವೇ ಜಿಲ್ಲಾಧ್ಯಕ್ಷ ಚಂಬೆರಾಜೇಶ್, ತಾಲೂಕು ಅಧ್ಯಕ್ಷ ದಿಂಬ ಡಿ.ಎಂ.ನಾಗರಾಜಗೌಡ, ಕೆ.ಜಯದೇವ್, ಜಯ ಕರ್ನಾಟಕ ತ್ಯಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಲಾವಿದಸ್ವಾಮಿ, ಮಂಗಸಂದ್ರ ನಾಗೇಶ್, ಎಸ್.ಉಲ್ಲಾಸ್, ಕನ್ನಡವಮಿತ್ರ ವೆಂಕಟಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಮತ್ತಿಕುಂಟೆ ಶ್ರೀನಿವಾಸಗೌಡ, ಜಿಲ್ಲಾ ಉಪಾಧ್ಯಕ್ಷ ಚೌಡರೆಡ್ಡಿ(ಎನ್.ಸಿ.ಆರ್) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಿನಾಗನಹಳ್ಳಿ ಹರೀಶ್, ಕಾರ್ಯದರ್ಶಿ ಲೋಕೇಶ್, ಗೌರವ ಸಂಚಾಲ ಸಂತೋಷ, ನಗರಾಧ್ಯಕ್ಷ ಅವಿನಾಶ್ ನಾರಾಯಣ್, ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ನಾಗರಾಜ್, ಮುಳಬಾಗಿಲು ತಾಲೂಕು ಅಧ್ಯಕ್ಷ ಹರೀಶ್‌ಗೌಡ, ಮಾಲೂರು ತಾಲೂಕು ಅಧ್ಯಕ್ಷ ನಾಣಿ, ಕರವೇ ಕುಟುಂಬದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಕೋಗಿಲೆ ವಿಜೇತರಾದ ಖಾಸೀಂ ಆಲಿ ಮತ್ತು ರಾಮ್ ಆರ್.ಕೆ.ಮ್ಯೂಸಿಕಲ್ ಇವೆಂಟ್ಸ್ ಬೆಂಗಳೂರು ಇವರಿಂದ ರಸಸಂಜೆ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!