• Wed. May 1st, 2024

PLACE YOUR AD HERE AT LOWEST PRICE

ದ ಯಲ್ಲಿ   .
ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲ ಪ್ರಾಣೇಶ್ ಹೇಳಿದರು.
ಅವರು ತಾಲ್ಗೊಲೂಕಿನ ಗೊರವಿಮಾಕಲಪಲ್ಲಿ ಸಫಲಮ್ಮ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್
ವಿದ್ಯಾಕೇಂದ್ರದ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿದ್ಯಾರ್ಥಿಗಳಿಗೆ
ಸೃಜನಾತ್ಮಕ ಬೆಳವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
 ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೆ ವಿದ್ಯಾರ್ಥಿಗಳ ಸೃಜನಶೀಲ ಅಭಿವೃದ್ಧಿ ಆಧುನಿಕ ಶಿಕ್ಷಣದ ಅತ್ಯಂತ ತುರ್ತು ಕಾರ್ಯಾಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾದ ಪ್ರಸ್ತುತ ದಿನಗಳನ್ನು ಅರ್ಥೈಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಸಲಹೆ ನೀಡಿದರು .
ಸಿದ್ಧಿಸಮಾಜ ಯೋಗದ ಗುರುಗಳಾದ ಗೋಪಾಲ ಗುರೂಜಿ ಮಾತನಾಡಿ ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ. ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ
ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ.
ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಚುಟುಕ ಸಾಹಿತ್ಯ ತಾಲೂಕು ಅಧ್ಯಕ್ಷ ವೆಂಕಟಾಚಲಪತಿಗೌಡ ಮಾತನಾಡಿ ಒಬ್ಬ ಮನಷ್ಯನಿಗೆ ಕೇವಲ ವಿದ್ಯೆ ನೀಡಿದರಷ್ಟೇ ಸಾಲದು ಅದಕ್ಕೆ ಪೂರಕವಾಗಿ ತೀರಾ ಅಗತ್ಯವಿರುವ ಜೀವನಧರ್ಮವನ್ನು ಕಲಿಸುವುದು ಹಾಗೂ
ತಲಾತಲಾಂತರದಿಂದ ಉಳಿಸಿಕೊಂಡು ಬೆಳಸಿಕೊಂಡು ಬಂದಿರುವ ನಮ್ಮ ಸನಾತನ ಸಂಸ್ಕøತಿ-ಪರಂಪರೆಯ ಅರಿವು ಮೂಡಿಸುವುದು ಅತ್ಯವಶ್ಯಕ ಎಂದರು.
ಈ ಕಾರ್ಯಕ್ರಮದಲ್ಲಿ ಲಕ್ಷ್ಮೀಪುರ, ರಾಯಲ್ಪಾಡು, ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಪತಾಂಜಲಿ ಯೋಗ
ಗುರು ಸುದರ್ಶನ್‍ರವರಿಂದ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನವನ್ನ ಮಾಡಿಸಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!