• Wed. May 8th, 2024

PLACE YOUR AD HERE AT LOWEST PRICE

ಮಾಜಿ ಶಾಸಕ ವೈ.ಸಂಪಂಗಿರ ಮಗ  ಪ್ರವೀಣ್‍ಕುಮಾರ್ ತಮ್ಮ ಫೇಸ್‍ಬುಕ್‌ನಲ್ಲಿ 2012ರ ಜುಲೈ  10 ರಂದು ನನ್ನ ಬಳಿ 10 ಕೋಟಿ ಹಣವಿದೆ ಆದರೆ  ಅದನ್ನು ಹೇಗೆ ಖರ್ಚು ಮಾಡುವುದು ಎಂದು  ಗೊತ್ತಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದು ಇಂತಹ  ರಾಜಕಾರಣಿಗಳು, ಸಮಾಜಸೇವಕರು ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಿದೆಯೇ? ಎಂದು
ಮಾಜಿ ಶಾಸಕ ದಿ.ಭಕ್ತವತ್ಸಲಂ ಮಗ ಕಾರ್ತಿಕ್ ಭಕ್ತವತ್ಸಲಂ ಪ್ರಶ್ನಿಸಿದರು.
ನಗರದ ಕಿಂಗ್ ಜಾರ್ಜ್ ಹಾಲ್‍ನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರ  ಮೇ 25ರಂದು ಮೊದಲ ಬಾರಿಗೆ ವೈ.ಸಂಪಂಗಿ  ಶಾಸಕರಾಗಿ ಆಯ್ಕೆಯಾದಾಗ ತಮ್ಮ ಆಸ್ತಿಯ ಮೌಲ್ಯ  12 ಲಕ್ಷ ಎಂದು ಚುನಾವಣಾ ಆಯೋಗಕ್ಕೆ  ಘೋಷಿಸಿಕೊಂಡಿದ್ದರು. 2009ರ ಜನವರಿ 29 ರಂದು  ಶಾಸಕರ ಭವನದಲ್ಲಿ 5ಲಕ್ಷ ರೂಗಳ ಲಂಚವನ್ನು
ಪಡೆಯುತ್ತಿದ್ದಾಗ  ಸಂಪಂಗಿ ಲೋಕಾಯುಕ್ತ ಬಲೆಗೆ ಬಿದ್ದು  ಪೊಲೀಸರು ಬಂಧಿಸಿದ್ದರು.
ಇದಾದ ಬಳಿಕ 2012ರ ಜೂನ್ 2ರಂದು ನ್ಯಾಯಾಲಯ ವೈ.ಸಂಪಂಗಿರವರಿಗೆ 3.5 ವರ್ಷ ಕಠಿಣ ಕಾರಾಗಾರ  ಶಿಕ್ಷೆಯನ್ನು ವಿಧಿಸಿ ಆದೇಶಿಸಿತ್ತು. ಆದರೆ ಆದೇಶ ಬಂದ ಕೇವಲ 4 ದಿನಗಳಿಗೆ ಅಂದರೆ 2012ರ ಜೂನ್ 6 ರಂದು
ನ್ಯಾಯಾಲಯದಿಂದ ಬೇಲ್ ಪಡೆದುಕೊಂಡು ಹೊರಬಂದಿದ್ದರು.
 ಸಾರ್ವಜನಿಕ ಜೀವನದಲ್ಲಿರುವ ಯಾವುದೇ ರಾಜಕಾರಣಿಗೆ ಇಂತಹ ಸ್ಥಿತಿ ಬಂದಾಗ ತಮ್ಮ ತಪ್ಪನ್ನು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಅದೇ ರೀತಿಯ ತಪ್ಪನ್ನು ಮಾಡಬಾರದು ಎಂದು ನಿರ್ಧಾರ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿಮಾಜಿ ಶಾಸಕರ ಮಗ ತನ್ನ ಬಳಿ 10 ಕೋಟಿ ರೂಪಾಯಿಗಳ ಹಣವಿದ್ದು, ನಾವು ಇದನ್ನು ಖರ್ಚು
ಮಾಡುವುದು ಹೇಗೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ದಾಖಲಿಸಿದ್ದಾರೆ.
ಆದರೆ ಇಲ್ಲಿ ಸಂಪಂಗಿರವರಿಗೆ ಬೇಲ್ ಸಿಕ್ಕಿದ ಕೇವಲ ಒಂದು ತಿಂಗಳಿಗೆ ಅಂದರೆ 2012ರ ಜುಲೈ 10 ರಂದು ಇವರ ಮಗ ಪ್ರವೀಣ್‍ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಬಳಿ 10 ಕೋಟಿ ರೂ ಹಣವಿದೆ ಎಂದು ಪೋಸ್ಟ್ ಮಾಡಿದ್ದು, ತಮ್ಮ ಒಟ್ಟು ಆಸ್ತಿಯ ಮೌಲ್ಯ 12 ಲಕ್ಷ ಎಂದು ಘೋಷಿಸಿದ ವ್ಯಕ್ತಿಯ ಮಗನ ಬಳಿ 10 ಕೋಟಿ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
 ಇಂತಹ ವ್ಯಕ್ತಿಗಳನ್ನು ಮತ್ತೆ ಅಧಿಕಾರಕ್ಕೆ ತಂದರೆ ಜನರಿಗೆ ಒಳ್ಳೆಯದನ್ನು ಮಾಡುತ್ತಾರೆಯೇ? ಎಂದ ಅವರು, ಪ್ರವೀಣ್‍ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಬರಹ ಅವರ ಗುಣ, ನಡತೆ, ವ್ಯಕ್ತಿತ್ವ ಮತ್ತು ದುರಹಂಕಾರವನ್ನು ತೋರಿಸುತ್ತಿದೆ ಎಂದರು.
 ಇಂತಹವರು ಮತ್ತೆ ತಮ್ಮ ಗುಣ ಮತ್ತು ನಡತೆಗಳನ್ನು ಬದಲಾಯಿಸಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ಕೆಜಿಎಫ್ ಇಂತಹ ನಾಯಕರನ್ನು ಬಯಸುವುದಿಲ್ಲ, ಕೆಜಿಎಫ್ ಡಸ್ ನಾಟ್ ಡಿಸರ್ವ್ ದೀಸ್ ಲೀಡರ್ಸ್ ಎನ್ನುವ ಘೋಷ ವಾಕ್ಯದೊಂದಿಗೆ ಸಾಮಾಜಿಕ ಜಾಲತಾಣ ಮತ್ತು ಹೊರಗೆ ಭಿತ್ತಿ ಪ್ರದರ್ಶನ ಮಾಡುತ್ತೇವೆ ಎಂದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!