• Sat. Apr 27th, 2024

ಯತೀಂದ್ರ ಸಿದ್ಧರಾಮಯ್ಯ ಕೋಲಾರ ರೌಂಡ್ಸ್ ,ಆರತಿ ಮಾಡಿ ಸ್ವಾಗತ ಕೋರಿದ ಮಹಿಳೆಯರು

PLACE YOUR AD HERE AT LOWEST PRICE

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಹಿನ್ನಲೆಯಲ್ಲಿ ಕೋಲಾರಕ್ಕೆ ಬೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಇಂದು ನಗರ ದೇವತೆ ಕೋಲಾರಮ್ಮ ದೇವಾಲಯ ಹಾಗೂ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಹಾಗೂ ನಗರದ ಕೆಲವು ವಾರ್ಡುಗಳಿಗೆ ಬೇಟಿ ನೀಡಿದರು.

ಇಂದು ಬೆಳಿಗ್ಗೆ ೧೧ ಗಂಟೆಗೆ ವೇಳೆಗೆ ಕೋಲಾರಕ್ಕೆ ಆಗಮಿಸಿದ ಯತೀಂದ್ರ ಸಿದ್ಧರಾಮಯ್ಯ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಕುರುಬ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಸಮೀಪದ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಬಸವನತ್ತ, ಕೋಡಿರಾಮಸಂದ್ರ, ಹೊನ್ನೇನಹಳ್ಳಿ ಹಾಗೂ ಕಳ್ಳೀಪುರ ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಯತೀಂದ್ರಗೆ ಆರತಿ ಮಾಡಿ ಸ್ವಾಗತ ಕೋರಿದ ಮಹಿಳೆಯರು ಹಾಗೂ ಯತೀಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ ಜನರು ಕುಣಿದು ಕುಪ್ಪಳಿಸಿದರು.

ತರುವಾಯ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಸಿದ್ಧರಾಮಯ್ಯನವರಿಗೆ ಬಾಡಿಗೆ ಮನೆಯ ಅಗತ್ಯವಿರುವ ಕಾರಣ, ಈಗಾಗಲೇ ಪಕ್ಷದ ಕೆಲವು ಮುಖಂಡರು ಗುರುತಿಸಿದ  ಬಸವನತ್ತ ಗ್ರಾಮದ ಸಮೀಪದ ಮನಯೊಂದಕ್ಕೆ ಬೇಟಿ ನೀಡಿದರು. ಮನೆ ನೋಡಿಕೊಂಡು ಹೋಗಲು ಬಂದಿರುವೆ. ಅಪ್ಪನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕೈ ಜೋಡಿಸಬೇಕಾಗಿದೆ. ಮನೆ ಚೆನ್ನಾಗಿದೆ, ತಂದೆ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳತ್ತಾರೆ. ಅನಿಲ್ ಕುಮಾರ್, ಸುದರ್ಶನ್ ಮನೆಯ ವಾಸ್ತು ನೋಡಿರುತ್ತಾರೆ. ನಮಗೆ ಮತ್ತು ತಂದೆ ವಾಸ್ತು ಮೇಲೆ ನಂಬಿಕೆ ಇಲ್ಲ. ಇದೇ ಮೊದಲ ಬಾರಿಗೆ ನಾನು ನೋಡುತ್ತಿರುವುದು ಅಪ್ಪ ಇನ್ನೂ ಮನೆ ನೋಡಿಲ್ಲ, ಅವರೇ ಅಂತಿಮಗೊಳಿಸುತ್ತಾರೆ. ಅಪ್ಪ ಹೈಕಮಾಂಡ್ ಹೇಳಿದರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೋಲಾರದಲ್ಲಿ ಕೆಲಸ ಆರಂಭ ಮಾಡಲಾಗಿದೆ ಎಂದರು.

ಇನ್ನೂ ವಿರೋಧ ಪಕ್ಷದ ಮುಖಂಡರಾದ ಯಡಿಯೂರಪ್ಪ ಮತ್ತು ಅನೇಕರು ಸಿದ್ಧರಾಮಯ್ಯ ಸ್ಪರ್ಧೆ ಅನುಮಾನಸ್ಪದ ಎಂಬ ಹೇಳಕೆಗೆ ಉತ್ತರಿಸಿದ ಯತೀಂದ್ರ, ನಮ್ಮ ಪಕ್ಷದ ನಾಯಕರು ಎಲ್ಲಿ ನಿಂತುಕೊಳ್ಳತ್ತಾರೆ ಎಂಬುದು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ, ಬೇರೆ ಪಕ್ಷದವರಿಗೆ ಏನು ಗೋತ್ತು, ನಾನು ಸಹ ವರುಣದಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೆ ಆದ್ರೆ ಅವ್ರು ಮನಸ್ಸು ಬೇರೆ ಕೆಡೆ ಇದೆ, ಕೋಲಾರದಿಂದ ಹೈಕಮಾಂಡ್ ಹೇಳಿದರೆ ಸ್ಪರ್ಧೆ ಮಾಡವುದಾಗಿ ಹೇಳಿದ್ದಾರೆ. ಕೊನೆ ಕ್ಷಣದಲ್ಲಿ ಸಿದ್ದತೆಗಳು ಮಾಡಿಕೊಳ್ಳಲು ಕಷ್ಟ, ಆ ಹಿನ್ನಲೆಯಲ್ಲಿ ಕೋಲಾರದಲ್ಲಿ ಚುನಾವಣೆ ಕೆಲಸ ಆರಂಭ ಮಾಡಲಾಗಿದೆ ಎಂದ ಅವರು, ನಾನು ದೇವರನ್ನು ಪ್ರಶ್ನೆ ಕೇಳಲು ಹೋಗಿಲ್ಲ, ಆ ದೇವರು ನಮ್ಮ ಮನೆ ದೇವರಲ್ಲ, ರಾಜಕೀಯ ತೀರ್ಮಾನಗಳನ್ನು ದೇವರು ಹೇಳಿದರೆ ಅಂತಾ ಬೇರೆ ಯಾರೋ ಹೇಳಿದ್ದಾರೆ ಅಂತಾ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ, ಸಿದ್ಧರಾಮಯ್ಯ ವಿರುದ್ಧ ಕರಪತ್ರ ಹಂಚಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಲು ನಯವಾಗಿ ತಿರಸ್ಕರಿಸಿದರು.

ಒಟ್ಟರೆ ಯತೀಂದ್ರರವರ ಕೋಲಾರ ರೌಂಡ್ಸ್ ಫಲಶೃತಿ ಏನೂ ಅಂತ ಗೌಪ್ಯವಾಗಿದೆ ಆದರೂ, ಸಿದ್ಧರಾಮಯ್ಯನವರ ಸ್ಪರ್ಧೆ ವಿಚಾರಕ್ಕೆ ಸಂಬoಧಿಸಿದoತೆ ಇನ್ನೂ ಗೂಡಾಚರ್ಯೆ ಕೆಲಸ ಮುಂದುವರೆಯುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!