• Sun. May 5th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಹಿಂದೂ ಪಂಚಾಂಗದ ಪ್ರಕಾರ ಹುಣ್ಣಿಮೆಯ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ವರ್ಷದ 12 ಹುಣ್ಣಿಮೆಗಳಲ್ಲಿ ಕೆಲವೊಂದು ಹುಣ್ಣಿಮೆಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅದರಲ್ಲಿ ಭರತ ಹುಣ್ಣಿಮೆ ಕೂಡಾ ಒಂದಾಗಿದ್ದು ಇದು ಮಾಘ ಮಾಸದಲ್ಲಿ ಬರುವುದರಿಂದ ಇದನ್ನು ಮಾಘ\ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಮಾಘ ಹುಣ್ಣಿಮೆಯಂದು ಮಾಡುವ ಪೂಜೆ ಧಾನ, ಧರ್ಮಗಳು, ವಿಶೇಷ ಫಲ ನೀಡುತ್ತವೆ. ನಿಷ್ಕಲ್ಮಷ ಮನಸ್ಸಿನಿಂದ ಬಡ ಬಗ್ಗರಿಗೆ ಸಹಾಯ ಮಾಡಿದರೆ ಅದರ ಹತ್ತರಷ್ಟು ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಎಲ್ಲಾ ಹುಣ್ಣಿಮೆ ತಿಥಿಗಳಿಗಿಂತ ಇದಕ್ಕೆ ವಿಶೇಷ ಸ್ಥಾನವಿದ್ದು, ಈ ದಿನ ಗಂಗಾ ನದಿಯಲ್ಲಿ ಅಥವಾ ಹರಿಯುವ ನದಿಯಲ್ಲಿ ಸ್ನಾನ, ದಾನ ಮತ್ತು ಉಪವಾಸ ಮಾಡಿದರೆ ಸಮಸ್ಯೆಗಳು ಕಳೆದು ಜೀವನದಲ್ಲಿ ಸಂತೋಷ ದೊರೆಯುತ್ತದೆ ಎನ್ನಲಾಗಿದೆ.

ಈ ಬಾರಿ ಫೆಬ್ರವರಿ 5, ಭಾನುವಾರದಂದು ಮಾಘ ಹುಣ್ಣಿಮೆ ಬಂದಿದೆ. ಹುಣ್ಣಿಮೆ ತಿಥಿಯು ಫೆಬ್ರವರಿ 4, ಶನಿವಾರ ರಾತ್ರಿ 09:29 ರಿಂದ ಫೆಬ್ರವರಿ 5, ಭಾನುವಾರ ರಾತ್ರಿ 11:58 ವರೆಗೂ ಇರಲಿದೆ.

ವಿಶೇಷ ಹುಣ್ಣಿಮೆ ಪ್ರಯುಕ್ತ ಬಂಗಾರಪೇಟೆ ಪಟ್ಟಣದ ಗೌತಮ್ ನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಆರ್ಚಕರಾದ ಗಜೇಂದ್ರ ರವರಿಂದ ಶ್ರೀ ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!