• Wed. May 1st, 2024

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಿಕಣ್ಣೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಣಿತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಅರಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಉಷಾರಾಮಾಂಜನೇಯವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಅಕ್ಷರ ಫೌಂಡೇನ್‌ನಎಚ್.ಬಿ.ಕಣ್ಲೆ, ಉಪಾಧ್ಯಕ್ಷೆ ಪಿ.ವಿ.ಗಾಯಿತ್ರಮ್ಮ, ಗ್ರಾಪಂ ಪಂಚಾಯತ್ ಪಿಡಿಒ ಕೆ.ಶಿವಾನಂದಕುಮಾರ್, ಕಾರ್ಯದರ್ಶಿ ಎನ್.ನಾಗರಾಜು ಹಾಗೂ ಸದಸ್ಯರು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ -ಫೌಂಡೇಷನ್ ಬೆಂಗಳೂರು, ಅರಹಳ್ಳಿ ಗ್ರಾಪಂ ಸಹಯೋಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಗಣಿತ ಸ್ಪರ್ಧೆಗಳ ನಾಲ್ಕನೇ ತರಗತಿ ವಿಭಾಗದಲ್ಲಿ ೫೬ ಮಂದಿ, ೫ ನೇ ತರಗತಿಯಲ್ಲಿ ೪೫ ಮಂದಿ, ೬ ನೇ ತರಗತಿ ವಿಭಾಗದಲ್ಲಿ ೫೧ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

೪ ನೇ ತರಗತಿ ವಿಭಾಗದಲ್ಲಿ ಶಶಾಂಕ್, ಕೋಡಿಕಣ್ಣೂರು, ಲಹರಿ, ಹೊಗರಿ, ಮನೋಜ್‌ಕುಮಾರ್ ಕೋಡಿಕಣ್ಣೂರು.

೫ ನೇ ತರಗತಿ ವಿಭಾಗದಲ್ಲಿ ಎ.ಚೈತ್ರ ಹೊಗರಿ, ಸ್ನೇಹ ಹೊಗರಿ, ಇಂದ್ರಜಿತ್ ಬಾರಂಡಹಳ್ಳಿ,

೬ ನೇತರಗತಿ ವಿಭಾಗದಲ್ಲಿ ಪಿ.ರಕ್ಷಿತ್ ಹೊಗರಿ, ಎನ್.ಧನಶ್ರೀ ಸೀಪೂರು, ಎನ್.ಗಗನಶ್ರೀ ಅರಹಳ್ಳಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಗೆದ್ದುಕೊಂಡರು.

ವಿಜೇತರಿಗೆ ಪ್ರಥಮಬಹಮಾನ ೧ಸಾವಿರ, ದ್ವಿತೀಯ ಬಹುಮಾನ ೬೦೦ ರೂ ಮತ್ತು ತೃತೀಯ ಬಹುಮಾನವಾಗಿ ೪೦೦ ರೂಗಳ ನಗದು ಪಂಚಾಯ್ತಿವತಿಯಿಂದ ನೀಡಿ ಪ್ರೋತ್ಸಾಹಿಸಲಾಯಿತು.

 

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!