• Mon. May 6th, 2024

PLACE YOUR AD HERE AT LOWEST PRICE

ಛತ್ರಪತಿ ಶಿವಾಜಿ ಮಹಾರಾಜರಲ್ಲಿದ್ದ ದೇಶ ಭಕ್ತಿ, ಹಿಂದು ಧರ್ಮದ ಅಭಿಮಾನ, ತಾಯಿಮೇಲಿನ ಪ್ರೀತಿ, ಮಹಿಳೆಯರ ಮೇಲಿನ ಗೌರವದಂತಹ ಅದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳಬೇಕೆಂದು ಅಹಿಂದ ಸಂಘಟನೆಯ ಮುಖಂಡ ಫಲ್ಗುಣ ಕರೆ ನೀಡಿದರು.

ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ಷತ್ರಿಯ ಸಮಾಜದವರು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಣ್ಣ,ಪುಟ್ಟ ಸಮುದಾಯಗಳ ಕೊಡುಗೆಗಳನ್ನು ನೆನಪಿಸಿಕೊಳ್ಳಲು ಹಾಗೂ ನಮ್ಮ ಮುಂದಿನ ಪೀಳಿಗೆಗಳಿಗೆ ಅರಿವುಂಟು ಮಾಡಲಿ ಸಮುದಾಯದವರು ಸಂಘಟಿತರಾಗಿ ಇಂಥಹ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಆದರ್ಶಗಳಿಗೆ ಗೌರವಿಸಿ ಇತಿಹಾಸದಲ್ಲಿ ಉಳಿಸುವ ಕೆಲಸ ಮಾಡಬೇಕೆಂದರು.

ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್ ಕದಂ ಮಾತನಾಡಿ, ನಮ್ಮ ಸಮಾಜದ ಕೇಂದ್ರ ಸಂಘವು ಬೆಂಗಳೂರಿನಲ್ಲಿದೆ. ಶಿವಾಜಿ ಮಹಾರಾಜರ ೩೯೯ನೇ ಜಯಂತಿಯನ್ನು ರಾಜ್ಯ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಸರ್ಕಾರದಿಂದ ಕ್ಷತ್ರಿಯ ಸಮಯದಾಯದ ಅಭಿವೃದ್ದಿಗೆ ಸರ್ಕಾರವು ೪೩೪ ಕೋಟಿ ರೂಗಳನ್ನು ಮಂಜೂರು ಮಾಡಿದೆ ಎಂದರು.

ಸಮುದಾಯದ ಶಾಲಾ ಮಕ್ಕಳಿಗೆ ಅಧುನಿಕ ತಂತ್ರಜ್ಷಾನದ ಸೌಲಭ್ಯವನ್ನು ಕಲ್ಪಿಸಿದೆ. ಮೀಸಲಾತಿಯಲ್ಲಿ ನೀಡಿರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಮನವಿ ಮಾಡಿದರು,
ಜಿಲ್ಲಾ ಮಹಿಳಾ ಸಂಘಟನೆಗಳ ಅಧ್ಯಕ್ಷೆ ಅಂಧ್ರಹಳ್ಳಿ ಶಾಂತಮ್ಮ ಮಾತನಾಡಿ, ಪ್ರತಿಯೊಬ್ಬ ಸಾಧಕರ ಹಿಂದೆ ಓರ್ವ ಮಹಿಳೆ ಶಕ್ತಿ ಇರುತ್ತದೆ ಎಂಬುವುದಕ್ಕೆ ಶಿವಾಜಿ ಮಹಾರಾಜರ ಸಾಧನೆ ಹಿಂದೆ ಅವರ ತಾಯಿ ಜಿಜಾಬಾಯಿ ಇದ್ದರು ಎಂಬುವುದು ನಿದರ್ಶನವಾಗಿದೆ ಎಂದರು.

ಜಿಜಾ ಬಾಯಿ ಕ್ಷತ್ರಿಯ ಸಮುದಾಯದಲ್ಲಿ ಜನಿಸಿ ಮಹಿಳೆಯಾಗಿದ್ದರೂ ಸಹ ಶಿಕ್ಷಣ, ಕತ್ತಿವರೆಸೆ, ಕುದುರೆ ಸವಾರಿಯನ್ನು ಕಲಿಯುವ ಮೂಲಕ ಸ್ವಾವಲಂಬಿಯಾಗಿರುವುದನ್ನು ಸಮಾಜದಲ್ಲಿ ಮಹಿಳೆಯರಿಗೆ ತೋರಿಸಿ ಕೊಟ್ಟ ಆದರ್ಶವಾದಿ ಮಹಿಳೆಯಾಗಿದ್ದಾರೆ ಎಂದರು.

ಒಂದು ಕುಟುಂಬವು ಶಾಂತಿ ನೆಮ್ಮದಿಯಿಂದ ಜೀವನ ಮುಂದರೆಸಬೇಕಾದರೆ ಕುಟುಂಬದ ಜವಾಬ್ದಾರಿಯನ್ನು ಮಹಿಳೆ ಹೊತ್ತಾಗ ಮಾತ್ರ ಸಾಧ್ಯವಾಗುತ್ತದೆ. ಮಹಿಳೆಯರಿಗೆ ಶಿಕ್ಷಣವು ಮುಖ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಕಲಿತಾಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು,

ನಿವೃತ್ತ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಮಾಜ ಸೇವಕ ರವೀಂದ್ರ ಕುಮಾರ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜಿಜಾಬಾಯಿ ೧೫೯೪ರಲ್ಲಿ ಜನಸಿ,೧೬೦೩ರಲ್ಲಿ ಷಾಹಜಿಯನ್ನು ವಿವಾಹವಾಗಿ ೧೬೨೭ರಲ್ಲಿ ಶಿವಾಜಿಗೆ ಜನ್ನ ನೀಡಿದರು, ಶಿವಾಜಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು ಎಂದರು.

ಶಿವಾಜಿ ಎಲ್ಲಾ ಸಮುದಾಯಗಳಿಗೆ ಸಮಾಜಿಕ ನ್ಯಾಯ ಕಲ್ಪಿಸಿದರು, ೩೦೦ ಕೋಟೆಗನ್ನು ಸಂರಕ್ಷಿಸಿದರು, ಹಿಂದುತ್ವದ ಬೆಳವಣಿಗೆ ವಿಶೇಷ ಆದ್ಯತೆ, ಮಹಿಳೆಯರಿಗೆ ಸಮಾಜದಲ್ಲಿ ಉತ್ತಮವಾದ ಗೌರವ ಕಲ್ಪಿಸಿ ಕೊಟ್ಟರು. ೩೪೦೦ ದೇವಾಲಯಗಳನ್ನು ರಕ್ಷಸಿದರು, ಇವರ ಆಡಳಿತದಲ್ಲಿ ಆಹಲ್ಯಬಾಯಿ ಹೊಳ್ಕೆತ್ ಅವರ ಪಾತ್ರವನ್ನು ವಿವರಿಸಿದರು,

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ರಾವ್, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್ ರಾವ್, ಖಜಾಂಜಿ ರಾಜಾರಾವ್, ಮುಖಂಡರಾದ ಶಂಕರ್ ರಾವ್, ರಾಜೇಶ್ ಸಿಂಗ್, ಶ್ಯಾಮರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!