• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣದಿಂದ ಸಂತೆಗೇಟ್ ತನಕ ಭೂಮಿಯನ್ನು ಸರ್ಕಾರಕ್ಕೆ ಉಚಿತವಾಗಿ ನೀಡಿರುವ ಸರ್ ಹಾಜಿ ಇಸ್ಮಾಯಿಲ್ ಸೇಠ್ ರವರ ಭಾವಚಿತ್ರವನ್ನು ಪುರಸಭೆ ಕಛೇರಿಯಲ್ಲಿ ಅಳವಡಿಸಲಾಗುವುದು ಎಂದು ಅದ್ಯಕ್ಷೆ ಫರ್ಜಾನಾ ಸುಹೈಲ್ ತಿಳಿಸಿದರು.

ಬಂಗಾರಪೇಟೆ  ಪುರಸಭೆಯಲ್ಲಿ 2023 -24ನೇ ಉಳಿತಾಯ ಆಯವ್ಯಯದ 33.59 ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಿ ಮಾತನಾಡಿ, ಸರ್ ಹಾಜಿ ಇಸ್ಮಾಯಿಲ್ ಸೇಠ್ ರವರ ದಾನದಿಂದಾಗಿ ಬಂಗಾರಪೇಟೆ ಅನೇಕ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಅವರ ಭಾವಚಿತ್ರವನ್ನು ಪುರಸಭೆಯಲ್ಲಿ ಅಳವಡಿಸಲಾಗುವುದು ಎಂದರು.

ಪಟ್ಟಣದ ಗ್ರಂಥಾಲಯಕ್ಕೆ ಸರ್ ಹಾಜಿ ಇಸ್ಮಾಯಿಲ್ ಸೇಠ್ ರವರ ಹೆಸರನ್ನು ನಾಮಕರಣ ಮಾಡಲಾಗುವುದು, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಿಡುಗಡೆಗೊಳಿಸಿರುವಂತಹ ಅನುದಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಪುರಸಭೆಯಿಂದ ಚಿರಶಾಂತಿ ವಾಹನ ಖರೀದಿಗೆ, ಖಾಸಗಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸ್ಕೈ ವಾಕ್ ನಿರ್ಮಾಣ, ಉದ್ಯಾನವನಗಳ  ಅಭಿವೃದ್ಧಿ, ಮನೆ ಮನೆಗೂ ಸ್ವಚ್ಛತೆಗೆ ಕಸದ ಬುಟ್ಟಿಗಳ ವಿತರಣೆ, ಸ್ವ ಸಹಾಯಗಳ ಮಹಿಳಾ ಸಂಘಗಳ ಅಭಿವೃದ್ಧಿ.

ಬೀದಿಗಳಲ್ಲಿ ಎಲ್.ಇ.ಡಿ ಲೈಟ್‌ಗಳ ಅಳವಡಿಕೆ,  ಬೀದಿ ಬದಿ ವ್ಯಾಪಾರಿಗಳಿಗೆ ನಿಗಧಿತ  ಸ್ವಂತ ಸ್ಥಳ ನಿರ್ಮಾಣ, ಹಾಗೂ ಸ್ವಚ್ಛತಕ್ಕೆ ಹೆಚ್ಚು ಆದ್ಯತೆ, ಸೇರಿದಂತೆ ಸರ್ವರಿಗೆ ಸೂರು ನಿವೇಶನ ನೀಡುವುದರ ಬಗ್ಗೆ, 9 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ಜಿ.ಎನ್.ಚಲಪತಿ, ಉಪಾಧ್ಯಕ್ಷೆ ಶಾರಧ ವಿವೇಕಾನಂದ,  ಪುರಸಭೆ ಅಧಿಕಾರಿಗಳು ಸದಸ್ಯರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!