ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧಿಸದೆ ಇದ್ದರೆ ನನಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ವೇಮಗಲ್ ಹೋಬಳಿಷಮದ್ದೇರಿ ಗ್ರಾಮ ಪಂಚಾಯತಿಯ ಕದರೀಪುರ ಗ್ರಾಮದ ಶ್ರೀ ಯೋಗ ಲಕ್ಷೀನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರ ಕಾರ್ಯಗಳನ್ನು ನಡೆಸುವುದರಿಂದ ದೇಶ ಸಂವೃದ್ದಿಯಾಗಿರುತ್ತದೆ. ಸದಾಕಾಲವೂ ದೇವರ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇರುತ್ತದೆಯೆಂದು ಹೇಳಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ದೇಗುಲ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಕೇಳಿದಾಗ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಅವರು, ದೈವ ನಿರ್ಣಯದಂತೆ ಈ ಬಾರಿ ನನಗೆ ಕಾಂಗ್ರೆಸ್ ಟಿಕೆಟ್ ದೊರೆತು ಕ್ಷೇತ್ರದ ಶಾಸಕರಾದರೆ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ವಿ.ಶ್ರೀನಿವಾಸ್, ಚೆನ್ನಕೇಶವ, ಕೆ.ಶ್ರೀನಿವಾಸಗೌಡ, ಬಾಬು, ಲಕ್ಷ್ಮೀ ನಾರಾಯಣ, ದೇವರಾಜ್, ನಾರಾಯಣಸ್ವಾಮಿ, ವೆಂಕಟೇಶ್, ಡಿ.ಕೆ.ಶ್ರೀನಿವಾಸ್, ನರಸಿಂಹಪ್ಪ ಭಾಗವಹಿಸಿದ್ದರು