• Sun. Apr 28th, 2024

ಸಮಾಜದಲ್ಲಿ ಮಹಿಳೆಯರು ಅಬಲೆಯರು ಅಲ್ಲ ಕಾನೂನು ಮ‌ೂಲಕ ರಕ್ಷಣೆ, ಪರಿಹಾರ, ಜೀವನ ನಡೆಸಲು ಬೇಕಾದ ಅಗತ್ಯ ಮಾರ್ಗಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು-ಸುನಿಲ್ ಎಸ್ ಹೊಸಮನಿ

PLACE YOUR AD HERE AT LOWEST PRICE

ಸಮಾಜದಲ್ಲಿ ಮಹಿಳೆಯರು ಅಬಲೆಯರು ಅಲ್ಲ ಕಾನೂನು ಮ‌ೂಲಕ ರಕ್ಷಣೆ, ಪರಿಹಾರ, ಜೀವನ ನಡೆಸಲು ಬೇಕಾದ ಅಗತ್ಯ ಮಾರ್ಗಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ತಿಳಿಸಿದರು.

ನಗರದ ಕಾರಂಜಿಕಟ್ಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕೇಂದ್ರ ವತಿಯಿಂದ ಮಾತೃವಂದನಾ ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಮಹಿಳೆಯರು ಎಂಬ ಒಂದೇ ಕಾರಣದಿಂದಾಗಿ ನಿರಂತರವಾಗಿ ಹತ್ಯೆ, ದೌರ್ಜನ್ಯಗಳು ನಡೆಯುತ್ತಾ ಇದ್ದು ಕಾನೂನು ಬಲಿಷ್ಠವಾಗಿದೆ ಎಂಬುದನ್ನು ಗೊತ್ತಿದ್ದರೂ ಅಂತಹ ಪ್ರಕರಣಗಳಿಗೆ ಕೊನೆಯಿಲ್ಲವಾಗಿದೆ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇಂತಹ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಅರಿವು ಮೂಡಿಸಿ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.

ಸಮಾಜದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರು ಅಷ್ಟೇ ಸಾಧನೆಗಳನ್ನು ಮಾಡಿದ್ದಾರೆ ಜೊತೆಗೆ ತನ್ನದೇ ಆದ ವಿವಿಧ ಕ್ಷೇತ್ರದಲ್ಲಿ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ ಸಮಾಜದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳದೇ ಮಹಿಳೆಯರು ಸಮಾಜದಲ್ಲಿ ಭಾಗವಾಗಿ ಗುರುತಿಸಿ ಅವರನ್ನು ಪೋತ್ಸಾಹಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್ ಮಾತನಾಡಿ ಸಮಾಜದಲ್ಲಿ ಮಹಿಳೆ ಎಂದೊಡನೆ ಕೇವಲವಾಗಿ ನೋಡುತ್ತಾರೆ ಮಹಿಳೆ ಹೆಂಡತಿಯಾಗಿ, ತಾಯಿಯಾಗಿ ಬೇಕು ಆದರೆ ಮಗಳಾಗಿ ಮಾತ್ರ ಬೇಡವಾಗಿದೆ ಗರ್ಭದಲ್ಲೇ ಹೆಣ್ಣು ಅಂತ ಗೊತ್ತಾದ ಕೂಡಲೇ ಹತ್ಯೆ ಮಾಡಲಾಗುತ್ತಾ ಇದೆ ಸಮಾಜದಲ್ಲಿ ಸಂಸ್ಕಾರ ಮತ್ತು ನೈತಿಕತೆ ತುಂಬುವಲ್ಲಿ ನಾವು ಹಿಂದೆ ಬಿಂದಿದ್ದೇವೆ ಮಹಿಳೆಯರ ಬಗ್ಗೆ ಕೇವಲ ಮಾರ್ಚ್ ಎಂಟನೇ ದಿನಕ್ಕೆ ಮಾತ್ರ ಸೀಮಿತಗೊಳಿಸದೇ ಪ್ರತಿ ದಿನವೂ ಮಹಿಳೆಯರು ಬಗ್ಗೆ ಗೌರವ ಮತ್ತು ಸ್ಥಾನಮಾನ ಕೊಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಬೇಕು ಮನುಷ್ಯ ನಾನು ಅನ್ನೋದು ಬಿಟ್ಟು ನಾವು ಎಂಬುದು ಪ್ರತಿಯೊಬ್ಬರ ಮನದಲ್ಲಿ ಬರಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೆ.ಮುರಳೀಧರ ಶೆಟ್ಟಿ ಮಾತನಾಡಿ ಮಹಿಳೆಯರ ಕಷ್ಟಗಳು ಹಾಗೂ ಅವರ ಮಾನದಾಳದ ಮಾತುಗಳು ಅರ್ಥವಾಗುವುದು ಕಡಿಮೆ ವಸ್ತುಸ್ಥಿತಿಗಳ ಬಗ್ಗೆ ಮಾತಾಡಬೇಕು ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರಿಗೆ ಸಾಲ ಕೊಡುವುದು ಅಷ್ಟೇ ಅಲ್ಲದೇ ಮಹಿಳಾ ಸಬಲೀಕರಣಕ್ಕೆ ಕಾನೂನು ಅರಿವು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಜನಜಾಗೃತಿ ವೇದಿಕೆ ಸದಸ್ಯೆ ಅರುಣಮ್ಮ, ಎಇಎಸ್ ಶಾಲೆಯ ಮುಖ್ಯಸ್ಥ ಪಾಲ್ಗುಣ, ಧರ್ಮಸ್ಥಳ ಸಂಸ್ಥೆಯ ತಾಲೂಕು ನಿರ್ದೇಶಕ ಸಿದ್ದಗಂಗಯ್ಯ, ಸಂಸ್ಥೆಯ ಕೃಷಿ ಮೇಲ್ವಿಚಾರಕ ವಿಜಯಕುಮಾರ್, ವಲಯ ಮೇಲ್ವಿಚಾರಕಿ ಶಶಿಕಲಾ, ಜ್ಞಾನ ವಿಕಾಸ ಸಂಸ್ಥೆ ಸಮಾನ್ವಯಾಧಿಕಾರಿ ಸೌಮ್ಯ ಸೇರಿದಂತೆ ಸ್ವಸಹಾಯ ಮಹಿಳಾ ಸಂಘಗಳು ಪ್ರತಿನಿಧಿಗಳು ಇದ್ದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!