• Fri. Apr 26th, 2024

PLACE YOUR AD HERE AT LOWEST PRICE

ಬಂಗಾರಪೇಟೆ ಪಟ್ಟಣದ ಪ್ರತಿ ವಾರ್ಡ್ ನಿಂದಲೂ ಕಾಂಗ್ರೇಸ್ ಮತ್ತು ಜೆಡಿಎಸ್ ತೊರೆದು  ಬಹುತೇಕ ಯುವಕರು ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಇನ್ನಷ್ಟು ಬಲ ತರುತ್ತಿದೆ ಎಂದು ಬಿಜೆಪಿ ಮುಖಂಡ ಪುರಸಭೆ ಮಾಜಿ ಅದ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಹೇಳಿದರು.

ಅವರು ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಸ್ವಾಗತಿಸಿ ಮಾತನಾಡಿ, ಪಟ್ಟಣದಲ್ಲಿ ಬದಲಾವಣೆ ಪರ್ವ  ಆರಂಭವಾಗಿದೆ. ಅನ್ಯ ಪಕ್ಷಗಳಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಇನ್ನೂ ಹೆಚ್ಚಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿರವರ ನೇತೃತ್ವದ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಜನರನ್ನು ತಲುಪಿ, ಅವರಿಗೆ ಅನುಕೂಲವಾಗಿವೆ. ಅಧಿಕಾರದಲ್ಲಿ ಬಿಜೆಪಿ ಪಕ್ಷ ಇರಬೇಕೆಂದು ಜನ ಬಯಸಿದ್ದಾರೆ.

ಬಂಗಾರಪೇಟೆಯಲ್ಲಿ ಬಿಜೆಪಿ ಪಕ್ಷದ ಒಗ್ಗಟ್ಟು ಮತ್ತು ನಾಯಕತ್ವವು ಕ್ಷೇತ್ರದ ಜನರಲ್ಲಿ ಭರವಸೆ ಮೂಡಿಸಿದೆ. ನೆಮ್ಮದಿಯ ವಾತಾವರಣಕ್ಕಾಗಿ ಮತ್ತು ತಾರತಮ್ಯರಹಿತ ಅಭಿವೃದ್ಧಿಗೆ ಮತದಾರರು ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ನಾರಾಯಣಸ್ವಾಮಿರನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದರು.

ಬಂಗಾರಪೇಟೆ ಪಟ್ಟಣದ ಸೇಠ್ ಕಾಂಪೌಂಡ್ ನ ರಾಜೇಶ್ ನೇತೃತ್ವದಲ್ಲಿ ಸುಮಾರು 30 ಯುವಕರು ಕಾಂಗ್ರೇಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ಇದೇ ವೇಳೆ ಕಾರಹಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷರ ಪತಿ ಮರಗಲ್ ಶಾಂತಮ್ಮ ರಘು, ಮುನಿರಾಜು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಪಕ್ಷದ ನಗರ ಘಟಕದ ಶಕ್ತಿ ಕೇಂದ್ರದ ಅದ್ಯಕ್ಷ ಶಶಿಕುಮಾರ್, ಮುಖಂಡರಾದ ತಿಮ್ಮಾಪುರ ಕೃಷ್ಣಮೂರ್ತಿ, ಮುನಿರಾಜು, ಅಮರಾವತಿ ಬಡಾವಣೆಯ ನಾಗೇಂದ್ರ, ಆನಂದ, ಸೇಠ್ ಕಾಂಪೌಂಡ್ ನ ಕಪಿಲ್, ಜಾನ್, ಮುರಳಿ, ಪಾರ್ತಿಬನ್, ಅಯ್ಯಾ ಮಂಜು, ಕರವೇ ಚಲಪತಿ, ಅಮರಾವತಿ ಬಡಾವಣೆಯ ಮಂಜುನಾಥ್, ಇಂದಿರಾ ಆಶ್ರಯ ಬಡಾವಣೆ ವಿನೋದ್ ಕುಮಾರ್, ಕಣಿಂಬೆಲೆ ಹರೀಶ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!