• Mon. Apr 29th, 2024

ಗೋಕುಲ ಮಿತ್ರಬಳಗದಿಂದ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ಸನ್ಮಾನ ಪೊಲೀಸ್ ಸುರೇಶ್,ಯೂನುಸ್,ಮುನಿಯಪ್ಪ,ಸಹಕಾರಿ ಸುರೇಶ್‌ಗೆ ಅಭಿನಂದನೆ

PLACE YOUR AD HERE AT LOWEST PRICE

ಕೋಲಾರ ನಗರದ ಗೋಕುಲ ಮಿತ್ರಬಳಗದಿಂದ ಪೊಲೀಸ್, ಪತ್ರಿಕೋದ್ಯಮ,ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕೋಲಾರ ನಗರ ಹೊರವಲಯದ ಇ-ಪ್ಯಾಕ್ಟ್ ಶಿವಕುಮಾರ್ ಅವರ ತೋಟದಲ್ಲಿ ನಡೆದ ಸಮಾಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಸೇವಾ ಪದಕ ವಿಜೇತ ಸುರೇಶ್, ಅಖಿಲ ಭಾರತ ಪತ್ರಿಕಾ ಸಂಪಾದಕರ ಒಕ್ಕೂಟಕ್ಕೆ ದಕ್ಷಿಣ ಭಾರತದಿಂದ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡಿರುವ ಮಹಮದ್ ಯೂನುಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದುನಿಯಾ ಮುನಿಯಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಸುರೇಶ್ ಮಾತನಾಡಿ,ಗೋಕುಲ ಮಿತ್ರಬಳಗ ಅಪಾರ ಸಂಖ್ಯೆಯ ಸ್ನೇಹಿತರ ಸಂಘಟನೆಯಾಗಿದ್ದು, ಜಾತಿ,ಧರ್ಮ ಬೇಧವಿಲ್ಲದೇ ಕಾರ್ಯನಿರ್ವಹಿಸುವ ಮೂಲಕ ಸ್ನೇಹದ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು.

ಪತ್ರಕರ್ತ ಮಹಮದ್ ಯೂನುಸ್ ಮಾತನಾಡಿ, ಗೋಕುಲ ಮಿತ್ರಬಳಗ ಸ್ನೇಹಿತರ ಕೂಟವಾಗಿದ್ದು, ನನ್ನನ್ನು ಗುರುತಿಸಿ ಗೌರವಿಸಿದೆ, ಇಲ್ಲಿ ಸೇರಿರುವ ಎಲ್ಲಾ ಸ್ನೇಹಿತರು ಯಾವುದೇ ಸ್ವಾರ್ಥವಿಲ್ಲದೇ ಸದಾ ಸಂಘಟಿತರಾಗಿ, ಸ್ನೇಹವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಖುಷಿ ತಂದಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರ ರಂಗದಲ್ಲಿ ಮತ್ತಷ್ಟುಬೆಳೆಯಬೇಕೆಂಬ ಆಶಯವಿದೆ, ನನ್ನನ್ನು ಅಧ್ಯಕ್ಷರನ್ನಾಗಿಸುವ ಕಾರ್ಯದಲ್ಲಿ ನನ್ನ ಬೆನ್ನಿಗೆ ನಿಂತು ಸಹಕಾರ ನೀಡಿದ ಗೋಕುಲ ಮಿತ್ರ ಬಳಗದ ಸ್ನೇಹಿತರನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಸಹಕಾರಿ ತರಬೇತಿಗಳ ಮೂಲಕ ಸಹಕಾರ ರಂಗವನ್ನು ಬೆಳೆಸುವ ನನ್ನ ಪ್ರಯತ್ನಕ್ಕೆ ಎಲ್ಲಾ ಸ್ನೇಹಿತರ ಸಲಹೆ ಪಡೆಯುವೆ ಎಂದ ಅವರು, ಗೋಕುಲ ಮಿತ್ರಬಳಗದ ಎಲ್ಲಾ ಸ್ನೇಹಿತರ ಹುಟ್ಟುಹಬ್ಬದ ದಿನಾಂಕ ನೆನಪಿಟ್ಟುಕೊಂಡು ಆಚರಿಸಲು ಮುಂದಾಳತ್ವ ವಹಿಸುವ ಬಳಗದ ಕೆ.ಎಸ್.ಗಣೇಶ್,ಮುನಿವೆಂಕಟಯಾದವ್ ಮತ್ತಿತರರ ಕಾರ್ಯ ಮರೆಯಲು ಸಾಧ್ಯವಿಲ್ಲ ಎಂದರು.

ಮಾಧ್ಯಮಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುನಿಯಪ್ಪ ಮಾತನಾಡಿ, ನಾನು ೧೯೯೨ರಿಂದ ನಾನು ಪತ್ರಿಕಾರಂಗದಲ್ಲಿದ್ದು ಸೇವೆ ಸಲ್ಲಿಸಿದ್ದೇನೆ, ಇದೀಗ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದ್ದು, ನನ್ನನ್ನು ಗೋಕುಲ ಮಿತ್ರಬಳಗದ ಸ್ನೇಹಿತರು ಗುರುತಿಸಿ ಸನ್ಮಾನಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುವೆ ಎಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನನಗಾದ ಸೋಲಿನಿಂದ ವಿಚಲಿತನಾಗಿಲ್ಲ, ಗೋಕುಲ ಮಿತ್ರಬಳಗದ ಸ್ನೇಹಿತರೊಂದಿಗೆ ಬೆರೆತರೆ ಎಂತಹ ನೋವು,ಬೇಸರ ಕ್ಷಣದಲ್ಲಿ ಮಾಯವಾಗುತ್ತದೆ, ಈ ಸಂಘಟನೆ ಸಹಸ್ರಾರು ಸಂಖ್ಯೆಯ ಸದಸ್ಯರನ್ನು ಹೊಂದಿ ಬೆಳೆಯಲಿ, ಈ ಕುಟುಂಬದಲ್ಲಿ ನಾನು ಒಬ್ಬ ಸದಸ್ಯನಾಗಲು ಹೆಮ್ಮೆ ಎನಿಸುತ್ತದೆ ಎಂದರು.

ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಗೋಕುಲ ಮಿತ್ರಬಳಗ ನೋಂದಾಯಿತ ಸಂಘಟನೆಯಲ್ಲ, ನಮ್ಮೆಲ್ಲಾ ಸ್ನೇಹಿತರು ನಮ್ಮ ಸ್ನೇಹ ಶಾಶ್ವತವಾಗಿರಲಿ ಎಂದು ಒಗ್ಗೂಡಿ ಕಟ್ಟಿಕೊಂಡ ಸಂಘಟನೆಯಾಗಿದೆ, ನಾವು ಹುಟ್ಟುಹಬ್ಬಗಳ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಎಲ್ಲಾ ಸದಸ್ಯರ ನೆರವಿನಿಂದ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಪಿಡಿಒ ನಾರಾಯಣಸ್ವಾಮಿ, ಚಲಪತಿ ಮತ್ತಿತರರಿಂದ ಮಿಮಿಕ್ರಿ, ಗಾಯನ ಕಾರ್ಯಕ್ರಮ ನಡೆದು ಎಲ್ಲರನ್ನು ರಂಜಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಸುಧಾಕರ್, ನಗರಸಭೆ ಮಾಜಿ ಅಧ್ಯಕ್ಷ ವಿ.ಕೆ.ರಾಜೇಶ್,
ಜೆಡಿಎಸ್ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಗೋಕುಲಮಿತ್ರಬಳಗದ ಮುನಿವೆಂಕಟಯಾದವ್, ಶಿವಕುಮಾರ್,ಪತ್ರಕರ್ತ ಚಾಂದ್‌ಪಾಷಾ, ಕೋ.ನಾ.ಮಂಜುನಾಥ್, ರಾಮಕೃಷ್ಣ, ಮಣಿ,ಬಾಲಾಜಿ, ಬುಜ್ಜಿ, ಪಿಡಿಒ ನಾಗರಾಜ್, ಪಿಡಿಒ ಕೃಷ್ಣಪ್ಪ, ಸರ್ವೋದಯ, ಡಿವಿಡಿ ಶಂಕರ್,ಪ್ಲವರ್ ಶಂಕರ್,ಕ್ಯಾಪ್ಟನ್ ಮಂಜು, ಕೃಷ್ಣಮೂರ್ತಿ, ಕೆಎಸ್‌ಆರ್‌ಟಸಿ ಗಿರಿ, ಸ್ವಾಮಿ,ವೇಣು, ಸಿಎಂಸಿ ಶಂಕರ್,ಶ್ವೇತಾ ಶಂಕರ್,ಚಂದು, ವಿಶ್ವಾಸ್, ಮಲ್ಲಿಕಾರ್ಜುನ್, ವಿನಯ್, ಗಣೇಶ್, ವೆಂಕಟೇಶ್ ಮತ್ತಿತರರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!