• Sat. Apr 27th, 2024

ಖಾಸಗೀ ಬಸ್ಸಿನ ನಿರ್ವಾಹಕನ ನಿಂದನೆಯಿ0ದ ಕಿನ್ನತೆಗೆ ಒಳಗಾದ ಪ್ರೊಫೆಸೆರ್, ಸರ್ಕಾರ ಖಾಸಗೀ ಬಸ್ ಸಿಬ್ಬಂದಿಗಳ ದುಂಡಾವರ್ತನೆ ಬಗ್ಗೆ ಸಾರ್ವಜನಿಕರ ದೂರು ಪೆಟ್ಟಿಗೆ ತೆರೆಯಲು ಮನವಿ.

PLACE YOUR AD HERE AT LOWEST PRICE

ಕೋಲಾರ,ಜೂನ್.೧೮ : ಖಾಸಗೀ ಬಸ್ಸುಗಳಲ್ಲಿ ೬ ವರ್ಷದ ಮಗುವಿಗೆ ಹಾಫ್ ಟಿಕೆಟ್ ನೀಡಲು ನಿರಾಕರಿಸಿ, ಪೋಷಕರನ್ನು ಅವ್ಯಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿ ಮುಜುಗರಕ್ಕೆ ಒಳಪಡಿಸಿದ ಘಟನೆ ಕೆಜಿಎಫ್ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೆಜಿಎಫ್ ಮೂಲದ ಡಾ.ಪ್ರಭಾಕರನ್ ಎಂಬ ವ್ಯಕ್ತಿಯೊಬ್ಬರು ಬಂಗಾರಪೇಟೆಯಿ0ದ ರೈಲು ಪ್ರಯಾಣ ಮಾಡಬೇಕಿದ್ದು, ಕೆಜಿಎಫ್ ನಿಂದ ಭಾರತಿ ಎಂಬ ಖಾಸಗಿ ಬಸ್ ಹತ್ತಿ ಗಂಡ ಹೆಂಡತಿ ಇಬ್ಬರಿಗೆ ಎರಡು ಪೂರ್ಣ ಟಿಕೆಟ್ ಮತ್ತು ೬ ವರ್ಷದ ಮಗನಿಗೆ ಅರ್ದ ಟಿಕೆಟ್ ನೀಡುವಂತೆ ದುಡ್ಡು ಕೊಟ್ಟಿದ್ದಾರೆ. ಆಗ ನಿರ್ವಾಹಕ ಮಗುವಿಗೂ ಪೂರ್ಣ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿದಾಗ, ೩ ವರ್ಷದಿಂದ ೧೧ ವರ್ಷದ ಮಕ್ಕಳಿಗೆ ಅರ್ದ ಟಿಕೆಟ್ ನೀಡಬೇಕಲ್ಲವೇ ಎಂದು ಕೇಳಿದ್ದಾರೆ.

ಅಷ್ಟಕ್ಕೇ ಕೆಂಡಾಮ0ಡಲವಾದ ನಿರ್ವಾಹಕ ಬಸ್ಸಿನಿಂದ ಕೆಳಗಿಳಿಸಲು ಪ್ರಯತ್ನಿಸಿದಾಗ ತುರ್ತಾಗಿ ಹೋಗಬೇಕಾದ ಒತ್ತಡದಲ್ಲಿದ್ದ ಪ್ರೊಫೆಸರ್ ಆತಂಕಕ್ಕೆ ಒಳಗಾಗಿ ಈ ರೀತಿ ಮದ್ಯದಲ್ಲಿ ಇಳಿಸುವುದು ಸರಿಯಲ್ಲ ಎಂದು ಕೇಳಲಾಗಿ ನಿರ್ವಾಹಕ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಇಡೀ ಕುಟುಂಬವನ್ನು ಮುಜುಗರಕ್ಕೆ ಗುರಿಪಡಿಸಿದ್ದಾರೆ. ಆಗ ಸಹ ಪ್ರಯಾಣಿಕರ ಮದ್ಯ ಪ್ರವೇಶದಿಂದ ಪ್ರೊಫೆಸರ್ ಮಗುವಿಗೂ ಪೂರ್ಣ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ.

ಇಷ್ಠೇ ಅಲ್ಲದೆ ಕಿನ್ನತೆಗೆ ಒಳಗಾಗಿ ಈ ಕುರಿತು ಸಾರಿಗೆ ನಿಯಮಗಳು ಏನಿವೆ ಎಂಬ ಮಾಹಿತಿಯನ್ನು ಹಲವು ಸಾರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಗೆಳೆಯರೊಂದಿಗೆ ಸ್ಪಷ್ಟನೆ ಪಡೆದ ನಂತರ ನಮ್ಮಸುದ್ಧಿ.ಕಾಮ್‌ಗೆ ಕರೆ ಮಾಡಿ ಖಾಸಗೀ ಬಸ್ಸಿನ ನಿರ್ವಾಹಕನ ಈ ಅಮಾನವೀಯ ವರ್ತನೆ ಬಗ್ಗೆ ತಿಳಿಸಿ, ಖಾಸಗೀ ಬಸ್ಸುಗಳ ಸಿಬ್ಬಂದಿ ಗ್ರಾಹಕರನ್ನು ಈ ರೀತಿಯಲ್ಲಿ ನಿಂದಿಸುವ ಕುರಿತು ಯಾರಿಗೆ ದೂರು ನೀಡಬೇಕೆಂಬುದನ್ನು ಸಂಬ0ಧಪಟ್ಟ ಸರ್ಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ಇದು ಒಬ್ಬರ ಸಮಸ್ಯೆಯಲ್ಲಾ ಇದು ಸಾರ್ವಜನಿಕ ಸಮಸ್ಯೆಯಾಗಿದ್ದು ಈ ರೀತಿಯ ಯಾವುದೇ ಘಟನೆಗಳು ನಡೆದಾಗ ದೂರು ನೀಡಲು ಒಂದು ವ್ಯವಸ್ಥೆ ಇರಬೇಕೆಂದು ಸರ್ಕಾರವನ್ನು ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಖಾಸಗೀ ಬಸ್ಸುಗಳಲ್ಲಿ ಈ ರೀತಿಯ ಘಟನೆಗಳು ಬಹಳವಾಗಿ ನಡೆಯುತ್ತಿವೆ, ಪ್ರಯಾಣಿಕರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಿದಾಗ ನಿರ್ವಾಹಕನಿಂದ ಸಮಸ್ಯೆಯಾದರೆ ಸಂಬ0ಧಪಟ್ಟ ಡಿಪೋ ಮ್ಯಾನೇಜರ್‌ಗೆ ದೂರು ನೀಡುತ್ತಾರೆ ಅಥವಾ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಆದರೆ, ಈ ಖಾಸಗೀ ಬಸ್ಸುಗಳಲ್ಲಿ ಆಗುವ ನಡೆಯುವ ನಿಯಮ ಬಾಹಿರ ಸಂಬಾಷಣೆ ಅಥವಾ ನಿರ್ವಾಹಕ, ಕ್ಲೀನರ್, ಚಾಲಕರುಗಳಿಂದ ಆಗುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗದೆ ಸಾರ್ವಜನಿಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಕುರಿತು ಸಾರಿಗೆ ಅಧಿಕಾರಿಗಳು ಒಂದು ದೂರು ಪೆಟ್ಟಿಗೆಯನ್ನ ತೆರೆಯುವ ಅವಶ್ಯಕತೆ ಹಾಗೂ ಒಂದು ಹೆಲ್ಪ್ ಲೈನ್ ದೂರವಾಣಿ ಸಂಖ್ಯೆಯನ್ನು ಎಲ್ಲಾ ಖಾಸಗೀ ಬಸ್ಸುಗಳ ಒಳಗೆ ನಮೂದಿಸಿದರೆ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ನಿತ್ಯ ಖಾಸಗೀ ಬಸ್ಸುಗಳಲ್ಲಿ ಪ್ರಯಾಣಿಸುವವರ ಮಾತಾಗಿದೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!