• Mon. Apr 29th, 2024

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಬಿ ಕೆ ಎಸ್ ಅಯ್ಯಂಗಾರ್ ತವರೂರು ಬೆಳ್ಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

PLACE YOUR AD HERE AT LOWEST PRICE

ಮನಸ್ಸನ್ನು ಸ್ತೀಮಿತವಾಗಿ ಇಟ್ಟುಕೊಳ್ಳಬೇಕಾದರೆ ಹಾಗೂ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕಾಪಾಡಿ ಕೊಳ್ಳಬೇಕಾದರೆ ಯೋಗವು ಬಹಳ ಮುಖ್ಯವಾಗಿದೆ ಮಾಜಿ ಸಭಾಪತಿ ವಿ ಆರ್ ಸುದರ್ಶನ್ ತಿಳಿಸಿದರು.

ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ಬಳಿ ಇರುವ ಶ್ರೀಮತಿ ರಮಾಮಣಿ ಸುಂದರಾಜ್ ಅಯ್ಯಂಗಾರ್ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಇರುವ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಬಿಕೆಎಸ್ ಅಯ್ಯಂಗಾರ್ ಯೋಗ ಸೆಂಟರ್ ಹಾಲ್ ನಲ್ಲಿ ೯ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಪಂಚದಲ್ಲಿ ಯೋಗಕ್ಕೆ ಎಷ್ಟು ಶಕ್ತಿ ಇದೆ ಎಂಬುದನ್ನು ಗುರೂಜಿ ಅವರು ತಂದು ಕೊಟ್ಟಿದ್ದಾರೆ.

ಬೆಳ್ಳೂರು ಗ್ರಾಮದಲ್ಲಿ ಜನಿಸಿ ಅವಿರತ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗಿ ಇಂದು ಯೋಗವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಮಹಾನ್ ವ್ಯಕ್ತಿ ಆಗಿರುತ್ತಾರೆ ಯೋಗದ ಮಹತ್ವದ ಪರಿಣಾಮ ಕೇಂದ್ರ ಸರಕಾರ ಕೂಡ.
ಈ ಕಾರ್ಯಕ್ರಮ ಎಂದು ಯೋಗ ದಿನಾಚರಣೆಯನ್ನು ಮಾಡುತ್ತಿದ್ದು, ಇಂದು ಪ್ರಧಾನ ಮಂತ್ರಿ ಮೋದಿ ಅವರು ಅಮೆರಿಕದ ಅಧ್ಯಕ್ಷರ ಜೊತೆಯಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ, ನಮ್ಮ ಮನಸ್ಥಿತಿ ಅಸಮತೋಲನ ಆದಾಗ ಅದನ್ನು ಸರಿಪಡಿಸುವ ಶಕ್ತಿ ಯೋಗ ಹೊಂದಿರುತ್ತದೆ. ನಿಮ್ಮ ಏಕಾಗ್ರತೆ ಮತ್ತು ವ್ಯಕ್ತಿತ್ವವನ್ನು ಹೆಚ್ಚಿಸಲು ಸಹಾಯಮಾಡುತ್ತದೆ,

ಗುರೂಜಿ ರವರು ಭಾರತೀಯ ಪರಂಪರೆಗೆ ಕೊಟ್ಟ ದೊಡ್ಡ ಗೌರವ ಮತ್ತು ಯೋಗವನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ಮಾಡಬೇಕು ಈ ರೀತಿ ಮಾಡುವುದರಿಂದ ಗುರುಗಳಿಗೆ ಕೊಟ್ಟ ದೊಡ್ಡ ಕಾಣಿಕೆ ಎಂದಾಗುತ್ತದೆ, ಸಂಸ್ಥೆಯ ಟ್ರಸ್ಟಿಗಳಾದ ರಘು ಮತ್ತು ಅವರ ತಂಡ ಬಹಳ ಯಶಸ್ವಿಯಾಗಿ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಹೀಗೆಯೇ ಇದರ ಯಶಸ್ಸು ಇರಲಿ ಎಂದರು.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಮೂರು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಗುರೂಜಿಯವರ ಆಶೀರ್ವಾದ ಪಡೆದು ಈಗ ಮುಖ್ಯಮಂತ್ರಿ ಆಗಿದ್ದಾರೆ, ಅವರು ಸಹ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದು ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ಭೇಟಿ ನೀಡುವುದಾಗಿ ತಿಳಿಸಿರುತ್ತಾರೆ ಎಂದರು.

ಎಸ್ ಆರ್ ಎಸ್ ಐ ಸಂಸ್ಥೆಗಳ ಟ್ರಸ್ಟಿ ಬಾಷ್ಯಮ್ ರಘು ಮಾತನಾಡಿ ಯೋಗ ಕಲಿಯುವುದಕ್ಕೆ ಯಾವುದೇ ಜಾತಿ ಮತ್ತು ಧರ್ಮದ ಅಡ್ಡಿ ಇರುವುದಿಲ್ಲ, ಪ್ರತಿಯೊಬ್ಬರೂ ಯೋಗವನ್ನು ಕಲಿತು ಆರೋಗ್ಯವಂತರಾಗಿ ಆರೋಗ್ಯವಂತ ಸಮಾಜವನ್ನು ಸೃಷ್ಟಿ ಮಾಡಬೇಕೆಂಬುದು ಗುರೂಜಿಯವರ ಉದ್ದೇಶವಾಗಿತ್ತು.

ಯೋಗ ಎಂಬುದು ರಾಜರುಗಳಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಸಾಮಾನ್ಯ ಜನತೆಗೂ ಸಿಗಬೇಕೆಂಬುದು ಉದ್ದೇಶದಿಂದ ಎಲ್ಲರೂ ಯೋಗವನ್ನು ಕಲಿಯುವಂತೆ ಮಾಡಿ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿಕೊಟ್ಟರು, ಯೋಗವನ್ನು ಗುರುಜಿಯವರು ತಮ್ಮ ಶರೀರದ ಮೇಲೆ ಅದರಿಂದ ಏನು ಅನುಕೂಲವಾಗುತ್ತದೆ ಎಂಬುದನ್ನು ಪಡೆದು ಆನಂತರ ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.

ಅವರು ಹುಟ್ಟಿದ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಉದ್ದೇಶದಿಂದ ಇಂದು ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುತ್ತಿದ್ದಾರೆ, ಕೊಡುಗೆ ನೀಡುವ ಭಾವನೆ ಎಲ್ಲರಿಗೂ ಬರುವುದಿಲ್ಲ, ಆದರೂ ಗುರೂಜಿಯವರು ಸದಾ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮುಂದಿನ ವರ್ಷ ವಾತಾವರಣದ ಅನುಕೂಲವಾದರೆ ಮೈದಾನದಲ್ಲಿ ಯಶಸ್ವಿಯಾಗಿ ಯೋಗವನ್ನು ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಛಾಯಾದೇವಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹಾಂತೇಶ್, ಆಡಳಿತ ಮಂಡಳಿ ಮತ್ತು ಶಾಲಾ ಸಿಬ್ಬಂದಿ ದೈಹಿಕ ಶಿಕ್ಷಕರು ಹಾಜರಿದ್ದರು,

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!