• Tue. May 7th, 2024

PLACE YOUR AD HERE AT LOWEST PRICE

ಕೋಲಾರ: ಸಿನಿಮಾಗಳು ವಾದ ಹುಟ್ಟುಹಾಕಬಾರದು, ಅವು ಸಾಮಾಜಿಕ ಹೊಣೆಗಾರಿಕೆಯ ಹೊಸ ಆಲೋಚನೆಯನ್ನು ಹುಟ್ಟು ಹಾಕುವಂತಿರಬೇಕು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸಂಜೆ ಡಾ.ಎಲ್.ಬಸವರಾಜು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಚಿತ್ರ ನಿರ್ದೇಶಕ,ಛಾಯಾಗ್ರಾಹಕ ಹಾಗೂ ರಂಗಕರ್ಮಿ ಕೆ.ಶಿವರುದ್ರಯ್ಯ ಅವರಿಗೆ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಿನಿಮಾ ಹಾಗೂ ಇತರ ಕಲೆಗಳ ಮುಖ್ಯ ಉದ್ದೇಶ ಸಂವಾದ ಹುಟ್ಟು ಹಾಕುವಂತಿರಬೇಕೇ ವಿನಹಃ ವಾದಕ್ಕೆ ಹಾಗೂ ಹೊಗಳಿಕೆಗೆ ಸೀಮಿತವಾಗಬಾರದು, ಸಿನಿಮಾ ನುಡಿಕಟ್ಟು ಬಹಳ ಪ್ರಭುದ್ಧವಾಗಿರಬೇಕು, ಕಥೆಗೆ ಅಗತ್ಯವಾದ ಧ್ಯಾನಸ್ಥಿಕೆ ಇರಬೇಕು ಎಂದು ತಿಳಿಸಿದ ಅವರು, ಕೆ. ಶಿವರುದ್ರಯ್ಯ ಅವರ ಸಿನಿಮಾಗಳು ಸಂವಾದ ಹುಟ್ಟು ಹಾಕುವಂತಿವೆ. ಯೋಚನೆಗೆ ಹಚ್ಚುವಂತಿವೆ ಮತ್ತು ಸಿನಿಮಾ ರಂಗಕ್ಕೆ ಒಂದು ಆಲೋಚನಾ ಕ್ರಮವನ್ನು ತೋರಿಸಿಕೊಟ್ಟಿದೆ, ಚಿತ್ರರಂಗ ಅದನ್ನು ಮುಂದುವರಿಸಿಕೊoಡು ಹೋಗಬೇಕಾದ ಹೊಣೆಗಾರಿಕೆ ಹೊರಬೇಕಿದೆ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಚ.ಹ.ರಘುನಾಥ ಮಾತನಾಡಿ, ಈಗಿನ ಚಿತ್ರನಟರಲ್ಲಿ ಸಾಮಾಜಿಕ ಬದ್ಧತೆ ಇಲ್ಲ. ಇಂದು ಸಿನಿಮಾವನ್ನು ವಾಣಿಜ್ಯ ಸರಕಾಗಿ ನೋಡುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಪ್ರಜ್ಞೆ ಇರುವ ನಿರ್ದೇಶಕರ ಪರಂಪರೆಗೆ ಸೇರಿದವರು ಶಿವರುದ್ರಯ್ಯ. ಅವರ ಸಿನಿಮಾಗಳಲ್ಲಿ ಸಾಮಾಜಿಕ ಸಾಮರಸ್ಯ, ದಲಿತ ಬದುಕು ಹಾಗೂ ಸ್ತ್ರೀ ಪ್ರಜ್ಞೆ ಇದೆ. ಸಮಾಜದ ಆರೋಗ್ಯದ ಕನಸುಗಾರರಾಗಿರುವ ಶಿವರುದ್ರಯ್ಯ ಸಂಭAಜ ದೊಡ್ಡದು ಕಣ ಎಂಬುದನ್ನು ಪ್ರತಿಪಾಧಿಸುತ್ತಾರೆ ಎಂದು ತಿಳಿಸಿದರು.

ಕನ್ನಡದಲ್ಲಿ ಕಲಾತ್ಮಕ ಸಿನಿಮಾಗಳಿಗೆ ಮಿತಿ ಇದೆ. ಅದು ಬಂಡವಾಳದ ಮಿತಿಯೂ ಹೌದು. ಬಂಡವಾಳ ಹಿಂತಿರುಗಿ ಪಡೆಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ತಮಿಳುನಾಡು ಸಿನಿಮಾದಲ್ಲಿ ಈ ಸಮಸ್ಯೆ ಇಲ್ಲ ಎಂದು ಹೇಳಿದ ಅವರು ೭೦ರ ದಶಕದಲ್ಲಿ ಹೊಸ ಅಲೆಯ ಸಿನಿಮಾಗಳು ಬಂದವು, ಪ್ರೇಕ್ಷಕರು ಆ ಸಿನಿಮಾಗಳನ್ನು ಗೆಲ್ಲಿಸಿದರು. ನಂತರ ವ್ಯಾಪಾರಿ ಚಿತ್ರೋದ್ಯಮದಲ್ಲಿ ಕಾಣೆಯಾದ ಹೊಸ ಅಲೆಯ ಚಿತ್ರಗಳ ನಿರ್ದೇಶಕರು ನೇಪಥ್ಯಕ್ಕೆ ಸರಿದರು. ಆ ನಂತರ ಮತ್ತೆ ಹೊಸ ಅಲೆಯ ಸಿನಿಮಾ ಮಾಡಿದವರಲ್ಲಿ ಶಿವರುದ್ರಯ್ಯ ಕೂಡ ಒಬ್ಬರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕವಿ ಲಕ್ಷ್ಮೀಪತಿ ಕೋಲಾರ, ಕೆಲವು ಆಡಳಿತಾತ್ಮಕ ಕಾರಣಗಳಿಗಾಗಿ ಡಾ.ಎಲ್.ಬಸವರಾಜು ಪ್ರತಿಷ್ಠಾನದಿಂದ ಇಂದಿನ ಕಾರ್ಯಕ್ರಮ ಕೊನೆಯದಾಗಿದೆ. ಈ ಕಾರ್ಯಕ್ರಮದ ನಂತರ ಟ್ರಸ್ಟ್ ಆದಿಮ ಸಾಂಸ್ಕೃತಿಕ ಕೇಂದ್ರದೊoದಿಗೆ ವಿಲೀನಗೊಳಿಸಲಾಗುತ್ತಿದ್ದು. ಮುಂದಿನ ವರ್ಷದಿಂದ ಡಾ.ಎಲ್.ಬಸವರಾಜು ಪ್ರತಿಷ್ಟಾನದ ಪ್ರಶಸ್ತಿ ಕಾರ್ಯಕ್ರಮಗಳನ್ನು ಆದಿಮ ಮುಂದುವರೆಸಿಕೊ0 ಡು ಹೋಗಲಿದೆ ಎಂದು ತಿಳಿಸಿದರು. ಇದಕ್ಕೂ ಮೊದಲು ಶಿವರುದ್ರಯ್ಯ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ನಿರ್ದೇಶನದ ದಾಟು ಚಲನಚಿತ್ರ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿಲ ಡಾ.ಎಲ್.ಬಸವರಾಜು ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಿನಾರಾಯಣ(ಲಚ್ಚಿ), ಹಿರಿಯ ಪತ್ರಕರ್ತ ಸಿ.ಎಂ.ಮುನಿಯಪ್ಪ, ನಂಗಲಿ ಚಂದ್ರಶೇಖರ್, ಪುರುಷೋತ್ತಮ ರಾವ್, ಕೆ.ಎಂ.ಕೊಮ್ಮಣ್ಣ, ಹ.ಮಾ.ರಾಮಚಂದ್ರ, ಗೊಲ್ಲಹಳ್ಳಿ ಶಿವಪ್ರಸಾದ್, ಜೆ.ಜಿ.ನಾಗರಾಜ್, ಮಾ.ವೆಂ.ತಮ್ಮöಯ್ಯ, ವಿ.ಗೀತಾ, ಹೇಮಾರೆಡ್ಡಿ ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!