• Mon. May 6th, 2024

PLACE YOUR AD HERE AT LOWEST PRICE

ದಲಿತರ ಪಾಲಿಗೆ ಒಂದು ರೀತಿಯಲ್ಲಿ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸೆಕ್ಷನ್‌ 7ಡಿ ರದ್ದುಪಡಿಸಿರುವ ಸಂಗತಿಯನ್ನು ಎಲ್ಲ ಅಧಿಕಾರಿಗಳೂ ಗಮನದಲ್ಲಿಟ್ಟುಕೊಳ್ಳಬೇಕು. SCP/ TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗೆ ಮಾತ್ರ ಬಳಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ SCP/ TSP ಅನುದಾನದ ಹಂಚಿಕೆಯ ಕುರಿತಂತೆ ವಿಕಾಸಸೌಧದಲ್ಲಿ ಜರುಗಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಅನುದಾನ ಬಳಕೆ ಕುರಿತು ನಿರ್ದೇಶನ ನೀಡಿದರು.

SCP/TSP ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿ ಎಲ್ಲ ಇಲಾಖೆಗಳಲ್ಲಿ ಯಾವ ರೀತಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಗತಿಯ ಸ್ಥಿತಿಗತಿ ಏನಾಗಿದೆ ಮತ್ತು ಪ್ರಗತಿಯ ಹಾದಿಯಲ್ಲಿ ಇಲಾಖೆಗಳು ಏನಾದರೂ ಕೊರತೆಗಳನ್ನು ಎದುರಿಸುತ್ತಿವೆಯೇ? ಎಂಬ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು.

“ಜಲಜೀವನ್ ಮಿಷನ್‌ನಲ್ಲಿ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಶೇ.50 ಹಣ ಮತ್ತು ರಾಜ್ಯ ಸರ್ಕಾರದ ಶೇ.50 ಹಣ ಇದ್ದು, ಈ ಪೈಕಿ ಜಲಜೀವನ್ ಮಿಷನ್‌ನಲ್ಲಿ ರಾಜ್ಯದ ಹಣದ ಪಾಲು ಹೆಚ್ಚಾಗಿದೆ. ಜನವರಿ ವೇಳೆಗೆ ಕೇಂದ್ರದಿಂದ ಅಗತ್ಯ ಅನುದಾನ ಪಡೆಯಬೇಕು. ಇಲ್ಲವಾದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಹಣವನ್ನು ಹಿಂಪಡೆಯಲಾಗುವುದು” ಎಂದು ಸಚಿವರು ತಿಳಿಸಿದರು.

“ಮೂಲ ಸೌಕರ್ಯಗಳಾದ ರಸ್ತೆಗಳ ವಿಷಯದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ ಗುಣಮಟ್ಟದ ಅವಧಿ 50 ವರ್ಷ ಇರಬೇಕು. ಹಾಗಿದ್ದಾಗ ಮಾತ್ರ ಪದೇ ಪದೇ ರಸ್ತೆಗಳ ಮೇಲೆ ಅನುದಾನ ಬಳಸುವುದು ತಪ್ಪುತ್ತದೆ. ಆ ಅನುದಾನವನ್ನು ಇತರೆ ಕೆಲಸಗಳಿಗೆ ಬಳಸಬಹುದು” ಎಂದು ಸಚಿವರು ಅಭಿಪ್ರಾಯಪಟ್ಟರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಡ್ಡಾಯವಾಗಿ 100 ದಿನಗಳ ನರೇಗಾ ಕೆಲಸ ನೀಡಬೇಕು. ಆಗ ಅವರ ಬದುಕಲ್ಲಿ ಒಂದಷ್ಟು ಧನಾತ್ಮಕ ಬದಲಾವಣೆ ತರಬಹುದು ಎಂದು ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಉನ್ನತ ಶಿಕ್ಷಣ ಇಲಾಖೆಯಲ್ಲಿ SCP/TSP ಕಾಯ್ದೆಯಡಿ ಬಳಸದೇ ಇರುವ ಅನುದಾನದ ಬಳಕೆಗೆ ಸೂಕ್ತ ಪ್ರಾಶಸ್ತ್ಯ ನೀಡಬೇಕು ಮತ್ತು ಹಾಸ್ಟೆಲ್ ಕಾಲೇಜುಗಳ ಮೂಲಸೌಕರ್ಯದ ಅಭಿವೃದ್ದಿಗೆ ಒತ್ತು ನೀಡಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿದರು.

ಆರ್ ಟಿ ಶಿಕ್ಷಣ ಕಾಯ್ದೆ

“ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶಾಲಾ ನೋಂದಣಿ ಪ್ರಮಾಣವು ನೆರೆಯ ರಾಜ್ಯಗಳಿಗಿಂತ ಕಡಿಮೆ ಇದ್ದು, ನೊಂದಣಿಯ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಆರ್ ಟಿ ಇ ಶಿಕ್ಷಣ ಕಾಯ್ದೆ ಅಡಿಯಲ್ಲಿ ಈಗ ಇರುವ 1 ರಿಂದ 8 ನೇ ತರಗತಿ ಶಿಕ್ಷಣದ ಪ್ರಮಾಣವನ್ನು 9 ರಿಂದ 10 ನೇ ತರಗತಿಗೆ ಏರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಗಮನಕ್ಕೆ ತರಲಾಯಿತು.

ಕೃಷಿ, ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಇನ್ನೂ ಹಲವು ಇಲಾಖೆಗಳಲ್ಲಿ ಆಗುತ್ತಿರುವ ಪ್ರಗತಿಯ ಮಟ್ಟವನ್ನು ಪರಿಶೀಲಿಸಿದ ಸಚಿವರು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದ ಹಂಚಿಕೆಯು ಸಮರ್ಪಕವಾಗಿ ಬಳಕೆಯಾಗಬೇಕು. ಇಲ್ಲದೇ ಹೋದಲ್ಲಿ ಆ ಅನುದಾನವನ್ನು ಹಿಂಪಡೆಯಲಾಗುವುದು” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!