• Mon. May 6th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನಾಯಕನಹಳ್ಳಿ ಗ್ರಾಮದ ಬಳಿ ಇರುವ ಬಾಲಾಜಿ ಪೌಲ್ಟ್ರಿಪಾರಂನ ಅವ್ಯವಸ್ಥೆ ಮತ್ತು ಅಸಮರ್ಪಕ ನಿರ್ವಹಣೆಯನ್ನು ಕಂಡು ಕೆಂಡಾಮಂಡಲರಾದ ಗ್ರಾ.ಪಂ ಅಧ್ಯಕ್ಷ ಹೆಚ್.ಎಂ.ರವಿ ಮಾಲೀಕರಿಗೆ ಪೌಲ್ಟ್ರಿಪಾರಂ ಪರವಾನಿಗಿ ರದ್ದುಪಡಿಸುವ ಖಡಕ್ ಎಚ್ಚರಿಕೆಯನ್ನು ನೀಡಿದರು.

ನಂತರ ಮಾತನಾಡಿದ ಅವರು ಬಾಲಾಜಿ ಪೌಲ್ಟ್ರಿಪಾರಂನ ಮಾಲೀಕ ರಮೇಶ್ ಹಲವು ವರ್ಷಗಳ ಹಿಂದೆ ನರಸಿಂಹರೆಡ್ಡಿ ಎಂಬುವವರಿಗೆ ತಾತ್ಕಾಲಿಕ ಗುತ್ತಿಗೆ ನೀಡಿದ್ದು, ಇವರು ಕೋಳಿಗಳ ತ್ಯಾಜ್ಯವನ್ನು ಕಲ್ಮಶವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸುತ್ತಮುತ್ತಲಿನ ಗ್ರಾಮಗಳಿಗೆ ಕಿರಿಕಿರಿ ಉಂಟಾಗಿ ದುರ್ವಾಸನೆ ಬೀರುತ್ತಿದೆ.

ಸತ್ತ ಕೋಳಿಗಳನ್ನು ನಿಯಮದಂತೆ ದೊಡ್ಡ ಹೊಂಡದಲ್ಲಿ ಹಾಕಿ ಮುಚ್ಚಬೇಕು. ಆದರೆ ಗುತ್ತಿಗೆದಾರ ಬೇಜವಾಬ್ದಾರಿತನದಿಂದ ಬೀದಿ ನಾಯಿಗಳಿಗೆ ಸತ್ತ ಕೋಳಿಗಳನ್ನು ತಂದು ಬಿಸಾಡುತ್ತಿದ್ದಾರೆ. ಕೆಲ ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಮಾಡದೇ ಇರುವ ಕಾರಣ ನೋಣಗಳ ಪ್ರಮಾಣ ಹೆಚ್ಚಾಗಿದ್ದು, ಈ ನೊಣಗಳಿಂದ ಗ್ರಾಮದಲ್ಲಿ ಅನಾರೋಗ್ಯದ ಸಮಸ್ಯೆ ಜನ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಈ ಹಿಂದೆ ಸದರಿ ಪೌಲ್ಟ್ರಿಪಾರಂಗೆ ಸುಚಿತ್ವ ಕಾಪಾಡುವಂತೆ ಗ್ರಾಮಸ್ಥರ ಮನವಿಯಂತೆ ಗ್ರಾಮ ಪಂಚಾಯಿತಿ ವತಿಯಿಂದ ತಿಳಿಸಿರುತ್ತೇವೆ. ಆದರೂ ಎಚ್ಚತ್ತುಕೊಳ್ಳದ ಕಾರಣ ಇಂದು ಖುದ್ದಾಗಿ ಪಿಡಿಓ ಚಿತ್ರಾ ಹಾಗೂ ಗ್ರಾ.ಪಂ ಸದಸ್ಯರ ಸಹಯೋಗದಲ್ಲಿ ಭೇಟಿ ನೀಡಿ ಪರಿಶೀಲಿಸಿ ಎಚ್ಚರಿಕೆ ನೀಡುತ್ತಿದ್ದೇವೆ.

ಗುತ್ತಿಗೆದಾರನ ಬೇಜವಾಬ್ದಾರಿಯ ಕಾರ್ಯವೈಖರಿ ಅಸಮರ್ಪಕವಾಗಿದ್ದು, ಇಂದು ಸಂಜೆಯೋಳಗಾಗಿ ಸಂಪೂರ್ಣ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು, ಔಷಧಿ ಸಿಂಪಡಿಸಿ, ಸ್ವಚ್ಚತೆ ಕಾಪಾಡಬೇಕು ಎಂದು ತಿಳಿಸಲಾಗಿದೆ ಎಂದರು.

ಪಿಡಿಓ ಚಿತ್ರಾ ಮಾತನಾಡಿ, ಪೌಲ್ಟ್ರಿಪಾರಂನ್ನು ಸ್ವಚ್ಛಗೊಳಿಸಿದ ಕಾರಣ ವಿಪರೀತ ನೋಣಗಳಿಂದ ಕೂಡಿದ್ದು, ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುತ್ತಿದೆ. ಈ ಬಗ್ಗೆ  ಗ್ರಾಮಸ್ಥರಿಂದ ದೂರುಗಳು ಬಂದಿದ್ದು, ಮಾಲೀಕರಿಗೆ ಹಾಗೂ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಸರಿಪಡಿಸಲು ಸೂಚಿಸಿದ್ದೇವೆ. ಇದೇ ರೀತಿ ಮುಂದುವರೆದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಿ, ಪೌಲ್ಟ್ರಿಪಾರಂಗೆ ಬೀಗ ಜಡಿಯಲಾಗುವುದೆಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಸುರೇಶ್, ಮೂರ್ತಿ, ಯಾಸಿನ್, ತಾನಪ್ಪ, ಹನುಮಪ್ಪ, ಮುನಿಯಪ್ಪ, ರಾಮಚಂದ್ರ, ಸತೀಶ್, ಗಣೇಶ್ ಹಾಗೂ ಗ್ರಾಮಸ್ಥರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!