• Fri. May 3rd, 2024

PLACE YOUR AD HERE AT LOWEST PRICE

ನಾವು ಹುಟ್ಟಿ ಬೆಳೆದ ಊರಿನ ಜನರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ, ಈ ನಿಟ್ಟಿನಲ್ಲಿ ಕೋಲಾರದ ವಂಶೋದಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಸೇವೆ ಅಭಿನಂದನಾರ್ಹ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ. ದೇವರಾಜ್ ಶ್ಲಾಘಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ವಂಶೋದಯ ಹಾಸ್ಪಿಟಲ್ ಅಡ್ವಾನ್ಸಡ್ ಮಲ್ಟಿ ಸ್ಪೆಷಾಲಿಟಿ ಸೆಂಟರ್ ವತಿಯಿಂದ ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ವೀಕ್ ಹಾಗು ಮಕ್ಕಳ ತೀವ್ರ ನಿಘಾ ಘಟಕದಲ್ಲಿ ಒಂದು ವರೆ ವರ್ಷದಲ್ಲಿ ೫೦೦ಕ್ಕೂ ಹೆಚ್ಚು ಮಕ್ಕಳ ಯಶಸ್ವಿ ಚಿಕಿತ್ಸೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಂಶೋದಯ ಆಸ್ಪತ್ರೆಯಲ್ಲಿ ಕೇವಲ ೭೦೦, ೮೦೦ ಗ್ರಾಂ ತೂಕದ ಹಲವು ಪುಟ್ಟ ಮಕ್ಕಳಿಗೆ ಮರುಜನ್ಮ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ ವೇಳೆ ಬಹಳಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದೆ, ಅದೇ ರೀತಿ ಕೋಲಾರದ ಅಂತರಗAಗೆ ಮುಖ್ಯ ರಸ್ತೆಯಲ್ಲಿರುವ ವಂಶೋದಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಬೆಂಗಳೂರಿನಲ್ಲಿರುವ ದಿ ಬೆಸ್ಟ್ ಆಸ್ಪತ್ರೆಗಳನ್ನ ಮೀರಿಸುವ ಮಟ್ಟಕ್ಕೆ ವಂಶೋದಯ ಆಸ್ಪತ್ರೆ ಇದೆ. ಮೂಲಭೂತ ಸೌಕರ್ಯಗಳು, ಸ್ವಚ್ಚತೆ ಜತೆಗೆ ಅನುಭವ ಹೊಂದಿರುವ ವೈದ್ಯರು, ಸಿಬ್ಬಂದಿ ಹೊಂದಿದ್ದಾರೆ. ಬಹಳಷ್ಟು ಡಾಕ್ಟರ್ ಗಳು ವಿದೇಶಗಳಲ್ಲಿ ಹಾಸ್ಪಿಟಲ್ ಓಪನ್ ಮಾಡಿದ್ದೇವೆ ಅಂತಾ ಹೇಳುವವರ ಮಧ್ಯೆ ನಾವು ಹುಟ್ಟಿ ಬೆಳೆದ ಊರಲ್ಲಿ ಅಡ್ವಾನ್ಸಡ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ತೆರೆದು ಜನರಿಗೆ ಉತ್ತಮ ಚಿಕಿತ್ಸೆ ಕೊಡುತ್ತಿರವುದು ದೇವರ ಸೇವೆ ಅಂತಾ ಹೇಳಬಹುದು. ಎಲ್ಲರಿಗೂ ಶುಭಕೋರಿ ಇದೇ ರೀತಿ ನಿಮ್ಮ ಕಾರ್ಯವನ್ನು ಮುಂದುವರಿಸಿ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡುತ್ತಾ. ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬ ತಾಯಿ ಒಂದು ವರ್ಷದ ತನಕ ಮಗವಿಗೆ ಸ್ತನ್ಯಪಾನ ಮಾಡಿಸಬೇಕು. ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಸ್ತನ್ಯಪಾನ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಠಿಕಾಂಶಗಳು ತಾಯಿಯ ಹಾಲಿನಲ್ಲಿವೆ. ಸರ್ಕಾರ ಕೂಡ ಈ ಬಗ್ಗೆ ಹಲವು ಕಾರ್ಯಕ್ರಮಳನ್ನ ತಂದಿದೆ. ಉತ್ತಮ ಚಿಕಿತ್ಸೆ ನೀಡುತ್ತಿರುವ ವಂಶೋದಯ ಹಾಸ್ಪಿಟಲ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸಧ್ಯದಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಂತ್ರಜ್ಞಾನದ ಹೊಂದಿರುವ ಮಕ್ಕಳ ತೀವ್ರ ನಿಘಾ ಘಟಕ ವೀಕ್ಷಣೆ ಮಾಡುತ್ತೇನೆ ಎಂದರು.

ನAತರ ವಂಶೋದಯ ಹಾಸ್ಪಿಟಲ್ ನ ನಿರ್ದೇಶಕ ಡಾ.ಅರವಿಂದ್ ಮಾತನಾಡಿ ವಿದೇಶಿ ಹಾಸ್ಪಿಟಲ್ ನಲ್ಲಿರುವ ರೀತಿ ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ದಾಖಲಾದ ೫೦೦ ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಅತ್ಯಾದುನಿಕ ತಂತ್ರಜ್ಞಾನದ ಹೊಸ ಮಾಡೆಲ್ ಎಕ್ಯೂಪ್ಮೆಂಟ್ಸ್ ಆದ ತೀವ್ರ ಪಲ್ಮನರಿ ಹೈಪರ್ ಟೆನ್ಶನ್ ಗೆ ಬಳಸುವ ಇನ್ಹೇಲ್ಡ್ ನೈಟ್ರಿಕ್ ಆಕ್ಸೈಡ್, ನಿಯೋನೇಟನ್ ಎನಸೆಪಲೋಪತಿಗೆ ಬಳಸುವ ಕ್ರಿಟಿಕೂಲ್ ಮೆಶಿನ್, ಹೈ ಫ್ರೀಕ್ವೆನ್ಸಿ ವೆಂಟಿಲೇಷನ್, ಮೆಕಾನಿಕಲ್ ವೆಂಟಿಲೇಟರ್, ಸಿ ಪ್ಯಾಪ್, ಎಚ್ ಎಫ್ ಎನ್ ಸಿ ಹಾಗು ಫೋಟೋ ಥೆರಪಿ ಯೂನಿಟ್ ನಂತಹ ತಂತ್ರಜ್ಞಾನವನ್ನು ವಂಶೋದಯ ಅಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಬಳಸಲಾಗುತ್ತಿದೆ.

ಇನ್ನು ೭೦೦ ರಿಂದ ೮೦೦ಗ್ರಾಂ ಇದ್ದಂತ ಪ್ರೀ ಟರ್ಮ್ ಮಕ್ಕಳ ನ್ನು ದಿನದ ೨೪ ಘಂಟೆಗಳು ನುರಿತ ಮಕ್ಕಳ ತಜ್ಞ ವೈದ್ಯರು ಚಿಕಿತ್ಸೆ ನೀಡಿ ನಾರ್ಮಲ್ ತೂಕ ಬರುವಹಾಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಮಕ್ಕಳ ನಿಗಾ ಘಟಕದಲ್ಲಿ ಉತ್ತಮ ಪರಿಣಿತಿಯನ್ನ ಹೊಂದಿರುವ ನರ್ಸಿಂಗ್ ಸ್ಟಾಪ್ ಇದ್ದು ಮಕ್ಕಳ ಉತ್ತಮ ಆರೈಕೆ ಮಾಡುತ್ತಾರೆ. ಎಲ್ಲರ ಪರಿಶ್ರಮ ದಿಂದ ಕಳೆದ ಒಂದು ವರ್ಷದಲ್ಲಿ ೫೦೦ಕ್ಕೂ ಹೆಚ್ಚು ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ ಎಂದರು. ಇದೇ ವೇಳೆ ಪೋಷಕರೊಂದಿಗೆ ಆಗಮಿಸಿದ ೧೦೦ ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್, ಕೆಜಿಎಪ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಕೆಎಎಸ್ ಅಧಿಕಾರಿ ಮಮತ, ಐಎಂಎ ಜಿಲ್ಲಾಧ್ಯಕ್ಷ ಡಾ.ನಾರಾಯಣಸ್ವಾಮಿ, ಮಕ್ಕಳ ತಜ್ಞರಾದ ಡಾ.ಗಿರಿಜಾ, ಡಾ.ಮನೋಜ್, ಶ್ರೀನಿವಾಸ ನರ್ಸಿಂಗ್ ಹೋಂ ಸರ್ಜನ್ ಡಾ.ಶಂಕರ್, ವಂಶೋದಯ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!