• Thu. May 2nd, 2024

PLACE YOUR AD HERE AT LOWEST PRICE

ಕೋಲಾರ: ಗಲ್‌ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಮತ್ತು ಮೊಬೈಲ್ ಕಳ್ಳರನ್ನು ಬಂಧಿಸಿ ಬಂಧಿತರಿಂದ ಸುಮಾರು 30 ಲಕ್ಷ ರೂ ಬೆಲೆ ಬಾಳುವ 30  ವಿವಿಧ ಮಾಧರಿಯ ದ್ವಿಚಕ್ರ ವಾಹನಗಳು ಹಾಗೂ ಸುಮಾರು 3 ಲಕ್ಷ ರೂ ಬೆಲೆ ಬಾಳುವ 50 ಮೊಬೈಲ್ ಪೋನ್‌ಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗಲ್‌ಪೇಟೆ ಪೊಲೀಸರು ಕೋಲಾರದ ಆರ್.ಜಿ.ಬಡಾವಣೆಯ ಅಂಬೇಡ್ಕರ್ ಭವನದ ಕಡ ಹೋಗುತ್ತಿದ್ಧಾಗ ಯಾರೋ ಇಬ್ಬರು ಆಸಾಮಿಗಳು ಒಂದು ನಂಬರ್ ಪ್ಲೇಟ್ ಇಲ್ಲದ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡಿದ್ದು, ಪೊಲೀಸ್ ಜೀಪ್ ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ್ದವರನ್ನು ಪೊಲೀಸ್ ಸಿಬ್ಬಂದಿ ಬೆನ್ನಟ್ಟಿ ಹಿಡಿದುಕೊಂಡು ವಿಚಾರಣೆ ಮಾಡಿದ್ದಾರೆ.

ಅವರ ಹೆಸರುಗಳು 1) ಸಂಜಯ್ ಜಯಚಂದ್ರನ್ @ ಫಾರೂಕ್, ವಾಸ: ಕಾರಂಜಿಕಟ್ಟೆ, ಕೋಲಾರ, 2) ನದೀಂ, ವಾಸ: ಕುಂಬಾರಪೇಟೆ, ಕೋಲಾರ ಎಂದು ತಿಳಿಸಿದ್ದು, ಅವರನ್ನು ದ್ವಿಚಕ್ರ ವಾಹನದ ಬಗ್ಗೆ ವಿಚಾರಿಸಲಾಗಿ ಸಮಂಜಸವಾದ ಉತ್ತರವನ್ನು ಕೊಡದೇ ಇದ್ದು, ಸದರಿ ಆಸಾಮಿಗಳು ಕಳುವು ಮಾಡಿಕೊಂಡು ಬಂದಿರಬಹುದೆAದು ಅವರನ್ನು ಠಾಣೆಗೆ ಕರೆದುಕೊಂಡು ಬಂದು ಠಾಣಾ ಮೊ.ಸಂ. 69/2023, ಕಲಂ 41 ಕ್ಲಾಸ್ ಡಿ, 102 ಸಿ.ಆರ್.ಪಿ.ಸಿ. ರೆ/ವಿ 379 ಐ.ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿತ್ತು.

ತದನಂತರ ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಇವರೊಂದಿಗೆ ಕೋಲಾರ ಕ್ಲಾಕ್ ಟವರ್ ದರ್ಗಾ ಮೊಹಲ್ಲ ವಾಸಿ ಸೈಯ್ಯದ್ ಇಮ್ರಾನ್ ಎಂಬಾತನು ಸೇರಿಕೊಂಡು ಅವರು ಗಲ್‌ಪೇಟೆ, ಕೋಲಾರ ನಗರ, ಕೋಲಾರ ಗ್ರಾಮಾಂತರ, ಬೆಂಗಳೂರು ನಗರದ ಶಿವಾಜಿ ನಗರ, ಸಂಪಿಗೆಹಳ್ಳಿ, ಕೆ.ಆರ್.ಪುರಂ, ಗೋವಿಂದಪುರ, ಭರತ್ ನಗರ, ಹೊಸಕೋಟೆ ಮುಂತಾದ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕಳವು ಮಾಡಿದ್ದ 30 ದ್ವಿಚಕ್ರ ವಾಹನಗಳನ್ನು ಹಾಗೂ 50 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತೆ.

ಈ ಆರೋಪಿಗಳು ಸುಮಾರು ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಯ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು ಹಾಗೂ ಮೊಬೈಲ್ ಪೋನ್‌ಗಳ ಮೌಲ್ಯವು ಸುಮಾರು 33 ಲಕ್ಷ ರೂಪಾಯಿಗಳಾಗಿರುತ್ತವೆ. ಸಾರ್ವಜನಿಕರು ಯಾರಾದರೂ ತಮ್ಮ ದ್ವಿಚಕ್ರ ವಾಹನಗಳನ್ನು ಹಾಗೂ ಮೊಬೈಲ್ ಪೋನ್ ಕಳೆದುಕೊಂಡಿದ್ದಲ್ಲಿ ಗಲ್‌ಪೇಟೆ ಪೊಲೀಸ್ ಠಾಣೆ, ಕೋಲಾರದ ಆವರಣದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ನೋಡಿ ಅವರ ವಾಹನ ಇದ್ದರೆ ಗುರುತಿಸಲು ಪೋಲಿಸರು ಕೋರಿದ್ದಾರೆ.

ದಾಳಿ ತಂಡದಲ್ಲಿ. ಭಾಸ್ಕರ್ ವಿ.ಬಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸದರಿ ಜಾಲದ ಪತ್ತೆಗಾಗಿ ಕೋಲಾರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಮಲ್ಲೇಶ್ ಹಾಗೂ  ಗಲ್‌ಪೇಟೆ ವೃತ್ತ ನಿರೀಕ್ಷಕರಾದ ವೆಂಕಟರಮಣಪ್ಪ ನೇತೃತ್ವದಲ್ಲಿ, ಗಲ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರುಣಗೌಡ್ ಪಾಟೀಲ್, ಪಿ.ಎಸ್.ಐ ಬಾಬುಖಾನ್ ಮತ್ತು ಗಲ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಎ.ಎಸ್.ಐ ಮಹಬೂಬ್ ಪಾಷ, ಪಿ.ಸಿ-674 ಮೂರ್ತಿ, ಪಿ.ಸಿ-365 ಬೈರೇಗೌಡ, ಮತ್ತು ಜೀಪ್ ಚಾಲಕ ಎ.ಪಿ.ಸಿ-327 ಮಂಜುನಾಥ್.ಕೆ.ಟಿ ಇದ್ದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಗಲ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಎಂ. ನಾರಾಯಣ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!