• Mon. Apr 29th, 2024

PLACE YOUR AD HERE AT LOWEST PRICE

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಸಂಗೀತ ಕಛೇರಿ ಆಗಸ್ಟ್ 12 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಅದನ್ನು ಮುಂದೂಡಲಾಗಿದೆ. ಅದೇ ಬಗ್ಗೆ ಅಭಿಮಾನಿಗಳಿಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಅಭಿಮಾನಿಗಳು ಹೆಚ್ಚು ಬೇಸರ ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಕಾಂಮೆಟ್‌ಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಚೆನ್ನೈನಲ್ಲಿ ಅಂತರರಾಷ್ಟ್ರೀಯ ಮಟ್ಟದ ಉತ್ತಮ ಮೂಲಸೌಕರ್ಯಗಳನ್ನು ನೀಡಬೇಕು. ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಅನುವು ಮಾಡಿಕೊಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಎಆರ್ ರೆಹಮಾನ್ ಸಂಗೀತ ಕಚೇರಿ ಮುಂದೂಡಿಕೆ ಮ್ಯೂಸಿಕ್ ಕಾನ್ಸರ್ಟ್ ಮುಂದೂಡಲಾಗಿರುವ ಬಗ್ಗೆ ಟ್ವೀಟರ್‌ನಲ್ಲಿ ಎಆರ್ ರೆಹಮಾನ್ ಹೇಳಿದ್ದು ಹೀಗೆ, “ನನ್ನ ಆತ್ಮೀಯ ಸ್ನೇಹಿತರೇ … ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ನಿರಂತರ ಮಳೆಯಿಂದಾಗಿ, ನನ್ನ ಪ್ರೀತಿಯ ಅಭಿಮಾನಿಗಳು ಮತ್ತು ಸ್ನೇಹಿತರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಂಗೀತ ಕಛೇರಿಯನ್ನು ಹತ್ತಿರದ ಒಳ್ಳೆ ದಿನಾಂಕಕ್ಕೆ ಮುಂಡೂಡಲಾಗಿದೆ. ಹೊಸ ದಿನಾಂಕದ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬರಲಿವೆ” ಎಂದಿದ್ದಾರೆ.

ಎಆರ್ ರೆಹಮಾನ್ ಪೋಸ್ಟ್ ಹಾಕಿದ ನಂತರ, ಅವರ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದು, ಅವರಲ್ಲಿ ಅನೇಕರು ಈಗಾಗಲೇ ಮ್ಯೂಸಿಕ್ ಕಾನ್ಸರ್ಟ್ ನಡೆಯುವ ಸ್ಥಳಕ್ಕೆ ತೆರಳಿದ್ದೇವೆ. ಹೀಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇತರರು ವಾರಗಟ್ಟಲೆ ಈ ಕಾರ್ಯಮಕ್ರಮಕ್ಕಾಗಿ ಕಾಯುತ್ತಿದ್ದು, ಈಗ ಮುಂದೂಡಬೇಡಿ ಎಂದಿದ್ದರು.

ಸ್ಟಾಲಿನ್ ಸರ್ಕಾರಕ್ಕೆ ರೆಹಮಾನ್ ಮನವಿ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿರುವ ಸ್ಥಳಕ್ಕೆ ಭೇಟಿ ನೀಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಅಭಿಮಾನಿಯೊಬ್ಬರಿಗೆ ಪ್ರತ್ಯುತ್ತರವಾಗಿ, ರೆಹಮಾನ್ ಅವರು ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿದ್ದಾರೆ.

“ನಮ್ಮ ಸರ್ಕಾರದ ಸಹಾಯದಿಂದ ನಾವು ಚೆನ್ನೈ ಜನತೆಗೆ ಕಲೆ, ಮೆಗಾ ಶೋಗಳು ಮತ್ತು ಅಂತರರಾಷ್ಟ್ರೀಯ ಅನುಭವಗಳನ್ನು ನೀಡಲು ಅತ್ಯಾಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತೇವೆ ಎಂದು ನಾನು ವಿಶ್ವಾಸ ವ್ಯಕ್ತಪಡಿಸುತ್ತೇನೆ ಮತ್ತು ಮನವಿ ಮಾಡುತ್ತೇನೆ” ಎಂದಿದ್ದಾರೆ. ಇದರಲ್ಲಿ ಸುರಕ್ಷತೆ , ಮಳೆ, ಬಿಸಿಲಿನಿಂದ ರಕ್ಷಣೆ, ಪಾರ್ಕಿಂಗ್ ಗೊಂದಲ, ಟ್ರಾಫಿಕ್‌ ಜಾಮ್‌ ಮುಕ್ತತೆ ಬೇಕು ಎಂದು ಹೇಳಿದ್ದಾರೆ.

ಎಆರ್ ರೆಹಮಾನ್ ಅವರ ಮನವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಉತ್ತರ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಈ ಬಹುಕಾಲದ ಆಕಾಂಕ್ಷೆಯನ್ನು ಚೆನ್ನೈ ಶೀಘ್ರದಲ್ಲೇ ಈಡೇರಿಸಲಿದೆ!. ಇಸಿಆರ್‌ನಲ್ಲಿ ಸ್ಥಾಪಿಸಲಾಗುವ ಕಲೈಂಜರ್ ಕನ್ವೆನ್ಷನ್ ಸೆಂಟರ್, ದೊಡ್ಡ ದೊಡ್ಡ ಸಂಗೀತ ಕಛೇರಿಗಳು, ಪ್ರದರ್ಶನಗಳು, ಈವೆಂಟ್‌ಗಳು ಮತ್ತು ಸಮಾವೇಶಗಳನ್ನು ಆಯೋಜಿಸುವ ವಿಶ್ವ ದರ್ಜೆಯ ಸೌಲಭ್ಯವಾಗಲಿದೆ. ಅತ್ಯಂತ ಉತ್ತಮ ಸೌಲಭ್ಯ, ಹೋಟೆಲ್‌ಗಳು, ಫುಡ್ ಕೋರ್ಟ್‌ಗಳು, ಪಾರ್ಕಿಂಗ್ ಸ್ಥಳಗಳು ಮತ್ತು ಅತ್ಯುತ್ತಮ ರಸ್ತೆ ಸಂಪರ್ಕದೊಂದಿಗೆ ಇದು ನಗರದ ಹೊಸ ಸಾಂಸ್ಕೃತಿಕ ಐಕಾನ್ ಆಗಲಿದೆ” ಎಂದು ಹೇಳಿದ್ದಾರೆ.

ಎಆರ್ ರೆಹಮಾನ್ ಬಗ್ಗೆ ಬಹುಮುಖಿ, ಸಂಗೀತ ಪ್ರತಿಭೆ ಎಆರ್ ರೆಹಮಾನ್ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್ ರೋಜಾಗೆ ಮೊದಲು ಸಂಗೀತ ಸಂಯೋಜಿಸಿದರು. ಅಂದಿನಿಂದ ಅವರನ್ನು ಹಿಂತಿರುಗಿ ನೋಡಿದ್ದೇಯಿಲ್ಲ. ಸುಮಾರು ಮೂರು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಎಆರ್ ರೆಹಮಾನ್ ಎರಡು ಅಕಾಡೆಮಿ ಪ್ರಶಸ್ತಿಗಳು, ಒಂದು BAFTA ಪ್ರಶಸ್ತಿ, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಗೋಲ್ಡನ್ ಗ್ಲೋಬ್ ಮತ್ತು 15 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!