ರಜನಿಕಾಂತ್ ಇಲ್ಲಿಗೆ ಬರಬಾರದು ಎಂದು ವಾರ್ನಿಂಗ್ ಕೊಟ್ಟ ವಾಟಾಳ್ ನಾಗರಾಜ್!
ಇತ್ತೀಚೆಗೆ ಬಿಡುಗಡೆಯಾಗಿ ವಿಶ್ವದಾದ್ಯಂತ ನೂರಾರು ಕೋಟಿ ಕಲೆಕ್ಷನ್ ಮಾಡಿರುವ ರಜನಿಕಾಂತ್ ಅಭಿನಯದ ಜೈಲರ್ ಕರ್ನಾಟಕದಲ್ಲೂ ಸಕತ್ ಕಮಾಲ್ ಮಾಡಿದೆ. ಆದರೆ, ಈಗ ಕಾವೇರಿ ವಿಚಾರದಲ್ಲಿ ಅದೇ ದೊಡ್ಡ ವಿವಾದವಾಗಿ ಪರಿಣಮಿಸಿದೆ. ರಜನಿಕಾಂತ್ ಅವರನ್ನು ನಟ ದರ್ಶನ್ ಪರೋಕ್ಷವಾಗಿ ಕಾಲೆಳೆದಿದ್ದರು. ಈಗ ಹೋರಾಟಗಾರ…
ಇರಾಕ್‌ನ ಮದುವೆ ಮಂಟಪದಲ್ಲಿ ಬೆಂಕಿ:ನೂರು ಜನಮರಣ-ಕಾರಣ ತಿಳಿಯಿರಿ.
ಬಾಗ್ದಾದ್:ಇರಾಕ್‌ನ ಹಮ್ದನಿಯಾಹ್ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮದುವೆ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮಾಹಿತಿ…
ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳ ಬಂಧನ.
ಕೆಜಿಎಫ್: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳನ್ನು ಬಂಧಸಿ ಸಶಸ್ತ್ರ ಕಾಯ್ದೆ ಅಡಿಯಲ್ಲಿ ನಾಡ ಬಂದೂಕು ವಶಪಡಿಸಿಕೊಂಡಿರುವ ಘಟನೆ ಆಂಡರ್ ಸನ್ ಪೇಟೆ ಸರಹದ್ದಿನಲ್ಲಿನ ನಡೆದಿದೆ. ದಿನಾಂಕ:೨೪.೦೯.೨೦೨೩ ರಂದು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬಾಣಗಿರಿ ಗೊಲ್ಲಹಳ್ಳಿ ಗ್ರಾಮದ ಕೆರೆ ಕಟ್ಟೆಯ…
ಪುನಃ 3000 ಕ್ಯೂಸೆಕ್ ನೀರು ಬಿಡಲು ಆದೇಶ:ಕಾನೂನು ತಂಡದೊಂದಿಗೆ ಚರ್ಚಿಸುವೆ:ಸಿಎಂ ಸಿದ್ದು.
ತಮಿಳುನಾಡಿಗೆ ಮುಂದಿನ ಹದಿನೆಂಟು ದಿನಗಳ ಕಾಲ 3,000 ಕ್ಯೂಸೆಕ್ಸ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಆಘಾತಕಾರಿಯಾದುದು. ಈ ಬಗ್ಗೆ ಕಾನೂನು ತಂಡದ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು…
RAIN:ರಾಜ್ಯಾದ್ಯಂತ ಅ.4 ರವರಿಗೆ ಭಾರಿ ಮಳೆ ಸಾದ್ಯತೆ:ಹವಾಮಾನ ಇಲಾಖೆ.
ರಾಜ್ಯಾದ್ಯಂತ ಅಕ್ಟೋಬರ್ 4ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ 64.5 ಮಿ.ಮೀ ನಿಂದ 100 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆ.27ರಂದು ಧಾರವಾಡ, ಹಾವೇರಿ, ಗದಗ, ಕೊಪ್ಪಳ,…
Manipur:ಇಬ್ಬರು ವಿದ್ಯಾರ್ಥಿಗಳ ಹತ್ಯೆ ಫೋಟೊ ವೈರಲ್- ಮಣಿಪುರದಲ್ಲಿ ತೀವ್ರಗೊಂಡ ಪ್ರತಿಭಟನೆ.
ಗುವಾಹಟಿ:ರಾಜಧಾನಿ ಇಂಫಾಲ್‌ನಲ್ಲಿ ಶಂಕಿತ ಶಸ್ತ್ರಧಾರಿಗಳಿಂದ ಇಬ್ಬರು ವಿದ್ಯಾರ್ಥಿಗಳ ಹತ್ಯೆಯಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಬರ್ಬರ ಕೃತ್ಯವನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಆಕ್ರೋಶಭರಿತ ವಿದ್ಯಾರ್ಥಿಗಳು ಮುಖ್ಯಮಂತ್ರಿ…
ದೆಹಲಿಯಲ್ಲಿ ಚಿನ್ನಾಭರಣ ಅಂಗಡಿ ದರೋಡೆ:ಸಿನಿಮೀಯ ರೀತಿಯಲ್ಲಿ 25 ಕೋಟಿ ಆಭರಣ ಕಳ್ಳತನ.
ದಕ್ಷಿಣ ದಿಲ್ಲಿಯ ಜಂಗ್‌ಪುರದಲ್ಲಿ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳರು ₹ 20-25 ಕೋಟಿ ಮೌಲ್ಯದ ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಭೋಗಲ್ ಪ್ರದೇಶದ ಉಮ್ರಾವ್ ಜ್ಯುವೆಲ್ಲರ್ಸ್‌ನಲ್ಲಿ ಭಾನುವಾರ ಸಂಜೆ ಮತ್ತು ಮಂಗಳವಾರದ ನಡುವೆ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಕೃತ್ಯವನ್ನು ಎಸಗಿದ್ದಾರೆ.…
ಬಿಜೆಪ ಜೊತೆಗಿನ ಮೈತ್ರಿ ಕೊನೆಗೊಳಿಸಿದ AIADMK:ಪಟಾಕಿ ಹೊಡೆದ ಕಾರ್ಯಕರ್ತರು.
ಬಿಜೆಪಿ ಜೊತೆಗಿನ ಮೈತ್ರಿಯ ಸಂಬಂಧವನ್ನು ಎಐಎಡಿಎಂಕೆ ಕೊನೆಗೊಳಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದೆ. ತಮಿಳುನಾಡಿನಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯ ನಂತರ ಸೋಮವಾರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಜೊತೆ ಎಐಎಡಿಎಂಕೆ ತನ್ನ ಸಂಬಂಧವನ್ನು ಮುರಿದುಕೊಂಡಿತು. ಕೇಸರಿ…
ಬೆಂಗಳೂರು ಬಂದ್:ವ್ಯವಹಾರ ನಡೆಸಿ ಹಾನಿ ಆದರೆ ಅವರೇ ಹೊಣೆ:BSY.
ಕಾವೇರಿ ವಿಚಾರದಲ್ಲಿ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ ಹೋಟೆಲ್, ಅಂಗಡಿ, ಮುಂಗಟ್ಟುಗಳ ಮಾಲೀಕರು ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಬೇಕು. ಒಂದು ವೇಳೆ ಯಾರಾದರೂ ಬಾಗಿಲು ತೆರೆದು ವ್ಯವಹಾರ ನಡೆಸಲು ಪ್ರಯತ್ನಿಸಿದರೆ ಮುಂದಾಗುವ ತೊಂದರೆಗಳಿಗೆ ಅವರೇ ಹೊಣೆ ಎಂದು ಬಿಜೆಪಿ ಸಂಸದೀಯ…
MP ಬಂದಾಗ ಶಾಸಕರ ಅಭಿಮಾನಿಗಳಿಂದ ಬಾಯ್ ಕಾಟ್:ಗೋವಿಂದರಾಜು.
ಬಂಗಾರಪೇಟೆ:ಕೋಲಾರದ ರಂಗಮಂದಿರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ ಉಸ್ತುವಾರಿ ಸಚಿವರ ಪಕ್ಕದಲ್ಲಿರುವ ಎಲ್ಲರೂ ಭೂಗಳ್ಳರೆಂದು ಶಾಸಕರಿಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆರೋಪ ಮಾಡಿರುವುದು ಶೋಭೆ ತರುವಂತದ್ದಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.…