• Wed. May 1st, 2024

PLACE YOUR AD HERE AT LOWEST PRICE

 .ಬಂಗಾರಪೇಟೆ.ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಕೊಡಲು ಹಣವಿಲ್ಲ ಇನ್ನು ೨ಸಾವಿರ ಕೋಟಿ ಜಿಲ್ಲೆಗೆ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುರುಡೇ ಬಿಟ್ಟು ಹೋಗಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.

ಯರಗೋಳ ಡ್ಯಾಂ ಉದ್ಘಾಟನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಸರ್ಕಾರದ ಖಜಾನೆ ಖಾಲಿಯಾಗಿದೆ ತಮ್ಮ ಪಕ್ಷದ ಶಾಸಕರಿಗೆ ಕೇವಲ ಒಂದೆಡರು ಲಕ್ಷ ಅನುದಾನ ಕೊಡಲೂ ಹಣವಿಲ್ಲದಿರುವಾಗ ಹೇಗೆ ಜಿಲ್ಲೆಗೆ ಎರಡು ಸಾವಿರ ಕೋಟಿ ಕೊಡಲು ಸಾಧ್ಯವೆಂದು ಪ್ರಶ್ನಸಿದರು.

ಕೆಜಿಎಫ್ ಮತ್ತು ಬಂಗಾರಪೇಟೆ ಶಾಸಕರು ಹೇಳಿಕೊಟ್ಟಂತೆ ಅಂಕಿ ಅಂಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಯರಗೋಳ ಡ್ಯಾಂ ಉದ್ಘಾಟನೆ ವೇದಿಕೆ ಡ್ರಾಮಾ ಕಂಪನಿಯ ವೇದಿಕೆಯಾಗಿತ್ತು ಎಂದು ಟೀಕಿಸಿದರು.

ಯರಗೋಳ ಯೋಜನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಅದು ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆಯಾಗಿದೆ. ಮೊದಲು ಯೋಜನೆಗೆ ೧೫೦ಕೋಟಿ ಮಂಜೂರು ಮಾಡಿದ್ದೇ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ. ಇದಕ್ಕೂ ಮೊದಲು ಯೋಜನೆಯ ಸರ್ವೆ ಮಾಡಲು ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಶ್ರೀನಿವಾಸಗೌಡ, ಎಸ್.ರಾಜೇಂದ್ರನ್, ಕೃಷ್ಣಯ್ಯಶೆಟ್ಟಿ ತಲಾ ೨ಲಕ್ಷ ಕೊಟ್ಟಿದ್ದರು.

ಯರಗೋಳ ಲೋಕಾರ್ಪಣೆ ಕೀರ್ತಿ ಇವರಿಗೆ ಸಲ್ಲಬೇಕೆ ವಿನಃ ಕಾಂಗ್ರೆಸ್ ಸರ್ಕಾರಕ್ಕೆ ಅಲ್ಲ. ಮುಖ್ಯಮಂತ್ರಿ ಇಂದು ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಗೆ ಚಾಲನೆ ನೀಡಿರುವ ೨೨೬೩ ಕೋಟಿ ರೂ ಹಣದಲ್ಲಿ ಬಹುಪಾಲು ಕೇಂದ್ರ ಸರ್ಕಾರದ ಅನುದಾನವೆಂದು ಸ್ಪಷ್ಟಪಡಿಸಿದರು.

೬ತಿಂಗಳಲ್ಲಿ ಸರ್ಕಾರ ಅಭಿವೃದ್ದಿ ಕಾಮಗಾರಿಗಳಿಗೆ ಎಷ್ಟು ಅನುದಾನ ನೀಡಿದೆ ಎಂಬುದರ ಬಗ್ಗೆ ದಾಖಲೆ ನೀಡಲಿ ಎಂದು ಸವಾಲು ಹಾಕಿದ ಅವರು ಎತ್ತಿನಹೊಳೆ ಯೋಜನೆಗೆ ೧೩ಸಾವಿರ ಕೋಟಿ ವೆಚ್ಚದ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಒಂದೇ ಒಂದು ಹನಿ ನೀರು ಜಿಲ್ಲೆಗೆ ಬಂದಿಲ್ಲ ಇದರಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಹಣ ಕೊಡಲು ಸಾಧ್ಯವಿಲ್ಲ. ಇನ್ನು ಅಭಿವೃದ್ದಿ ಮಾತೆಲ್ಲಿ ಎಂದರಲ್ಲದೆ ಜನರನ್ನು ದಿಕ್ಕು ತಪ್ಪಿಸಲು ಉದ್ಘಾಟನೆ, ಗುದ್ದಲಿ ಪೂಜೆ ಹೆಸರಲ್ಲಿ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಈ ಎಲ್ಲಾ ಪ್ರಶ್ನೆಗಳನ್ನು ನಾನು ವೇದಿಕೆಯಲ್ಲಿ ಮಾತನಾಡಲು ಸಿದ್ದನಾಗಿದ್ದೆ ಆದರೆ ಅವರ ಮಾನ ಮರ್ಯಾದೆ ಹರಾಜು ಹಾಕಿದಂತಾಗುತ್ತದೆ ಎಂದು ಯಾರನ್ನೂ ಮಾತನಾಡಲು ಬಿಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!