• Sat. May 4th, 2024

PLACE YOUR AD HERE AT LOWEST PRICE

ಕೋಲಾರ:ಕದ್ದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ಜರುಗಿದೆ.

ಕೋಲಾರದ ಅಮ್ಮಾವರಪೇಟೆ ವೃತ್ತದಲ್ಲಿ ಕಳ್ಳತನ ಮಾಡಿದ ಕೋಳಿಗಳನ್ನು ಖರೀದಿಸುವ ಆಸಾಮಿಯನ್ನು ಗುರುತು ಪತ್ತೆ ಮಾಡಿ ಪ್ರಶ್ನಿಸಿದ ಖಾಸಗಿ ವಾಹಿನಿಯ ಕ್ಯಾಮರಾ ಮೆನ್ ಕಿರಣ್ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ ನಡೆದಿದೆ.

ಕೋಳಿ ಕತ್ತರಿಸುವ ಮಚ್ಚಿನಿಂದ ಹಲ್ಲೆಗೆ ಮುಂದಾದ ಆಸಾಮಿ,ಕೋಳಿ ಮಾಂಸದ ಅಂಗಡಿ ಮಾಲೀಕ ತಾಜ್ ಪೀರ್  ಎಂದು ಹೇಳಲಾಗುತ್ತಿದೆ.

ಕದ್ದ ಕೋಳಿಗಳನ್ನು ಖರೀದಿ‌ ಮಾಡುತ್ತಾನೆ ಎಂದು ಹೇಳಿ ವೀಡಿಯೋ ಮಾಡಲು ಮುಂದಾದ ಕಿರಣ್ ಮೇಲೆ ಕೋಳಿ ಕತ್ತರಿಸುವ ಮಚ್ಚು ತೆಗೆದುಕೊಂಡು ಬಂದು ಎರಡು ಭಾರಿ ಬೀಸಿದ ಆಸಾಮಿ ಹಲ್ಲೆಗೆ ಯತ್ನಿಸಿದ.

ಖಾಸಗಿ ವಾಹಿನಿ ಕ್ಯಾಮರಾ ಮೆನ್ ಅದೃಷ್ಟವಶಾತ್ ತಪ್ಪಿಸಿಕೊಂಡ. ಹಲ್ಲೆಯನ್ನು ತಡೆದ ಸಾರ್ವಜನಿಕರು  ಸಮಯಕ್ಕೆ ಅಲ್ಲೇ ಇದ್ದ ಪೋಲೀಸರ ಕೈಗೆ ಹಲ್ಲೆ ಮಾಡಿದವನನ್ನು ಒಪ್ಪಿಸಿದರು.

ಆರೋಪಿಯನ್ನು ನಗರದ ಗಲ್ ಪೇಟ್ ಪೋಲೀಸ್ ಠಾಣೆಗೆ ಕರೆದೊಯ್ದು,ಪ್ರಕರಣ ದಾಖಲಿಸಿಕೊಂಡು , ಆರೋಪಿತನ ವಿರುದ್ಧ ತನಿಖೆ ಮುಂದುವರೆಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!