• Sun. May 5th, 2024

PLACE YOUR AD HERE AT LOWEST PRICE

ಕೋಲಾರ: ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ, ಸಂರಕ್ಷಣೆಗಾಗಿ ಹಾಗೂ ಶೋಷಿತ ಸಮುದಾಯಗಳ ಧ್ವನಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಜ.28ರಂದು ಶೋಷಿತರ ಜಾಗೃತಿಗಾಗಿ ರಾಜ್ಯ ಮಟ್ಟದ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಮುಖಂಡ ಎನ್. ಅನಂತ ನಾಯಕ್ ಮನವಿ ಮಾಡಿದರು.
ನಗರದ ದೇವರಾಜ ಅರಸು ಭವನದಲ್ಲಿ ಭಾನುವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಸಮಾವೇಶ ಕುರಿತಾಗಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಾ ಬ್ರಾಹ್ಮಣ ಶಾಹಿಗಳ ಕುತಂತ್ರದಿಂದ ತಳ ಸಮುದಾಯಗಳು ಅನಾದಿ ಕಾಲದಿಂದಲೂ ಸಂಕಷ್ಟ ಎದುರುಸುತ್ತಿದ್ದು  ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಮೂಲ ನಿವಾಸಿಗಳು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ಪ್ರಸ್ತುತ ಇದನ್ನು ಸಹಿಸದ ಪುರೋಹಿತಶಾಹಿ ವರ್ಗ ಮುಸ್ಲಿಂ ಸಮುದಾಯದ ಜನರನ್ನು ತೋರಿಸಿ ಯುವಕರಲ್ಲಿ ಭಯ ಹುಟ್ಟಿಸಿ ತಮ್ಮಗಳ ಸ್ವಾರ್ಥಕ್ಕಾಗಿ ಯುವಕರನ್ನು ಮರಳು ಮಾಡಿ ಅಧಿಕಾರ ಪಡೆಯುವ ಹುನ್ನಾರ ನಡುಸುತ್ತಿವೆ ಎಂದು ವಿವರಿಸಿದರು.
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾಂತರಾಜು ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು, ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು ಇಡ್ಲೂಎಸ್  ಶೇ.10 ಮೀಸಲಾತಿಯನ್ನು ರದ್ದು ಪಡಿಸುವಂತೆ ಒತ್ತಾಯಿಸಬೇಕು ರಾಜಕಾರಣವೇ ನಮ್ಮ ಭವಿಷ್ಯವನ್ನು ನಿರ್ಧರಿಸುವಾಗ ನಾವು ರಾಜಕಾರಣವನ್ನು ಸರಿ ದಾರಿಗೆ ತರಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ ಸಂವಿಧಾನ ಅಪಾಯದಲ್ಲಿದೆ. ಉಳ್ಳವರು ಶೋಷಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಸಿ ಅವರ ಧ್ವನಿ ಹತ್ತಿಕ್ಕುತ್ತಿದ್ದಾರೆ ಎಲ್ಲ ಶೋಷಿತ ಸಮುದಾಯಗಳು ಒಗ್ಗೂಡಿ ತಮ್ಮ ಹಕ್ಕು ಪಡೆಯಬೇಕಿದೆ ಎಂದು ತಿಳಿಸಿದರು.
ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ, ಸಾಮಾಜಿಕ ಸಮಾನತೆ ಸಾರಿದ ಪುಣ್ಯ ಭೂಮಿ ನಮ್ಮದು. ಹಲವು ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಗೊಳಿಸಿವೆ. ಆದರೆ, ಬಲಾಡ್ಯರು ಶೋಷಿತರ ಹಕ್ಕನ್ನು ಕಬಳಿಸುತ್ತಿರುವುದು ಶೋಚನೀಯ. ದೇಶದ ಪ್ರಧಾನಿ ಶೋಷಿತರ ಪರವಾಗಿ ನಿಲ್ಲದಿರುವುದು ದುರದೃಷ್ಟಕರ. ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ. ಹಿಂದುಳಿದ ವರ್ಗಗಳ ಕಾಂತರಾಜ ವರದಿ ಜಾರಿಗೆ ಉಳ್ಳವರು ವಿರೋಧಿಸುತ್ತಿದ್ದಾರೆ. ಕೆಲ ಸಚಿವ, ಶಾಸಕರು ಬೆಂಬಲಿಸಿ ಜಾರಿಗೊಳಿಸದಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದರು
ಸಭೆಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಮುಖಂಡರಾದ ರಾಜಗೋಪಾಲ್, ರವಿಕುಮಾರ್, ವೆಂಕಟರಾಮಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾ ಅಧ್ಯಕ್ಷ ಪ್ರಸಾದ್ ಬಾಬು ಜಿಲ್ಲಾ  ಕುರುಬರ ಸಂಘದ ನಿರ್ದೇಶಕ ಅಂಜನಿ ಸೋಮಣ್ಣ, ನಗರಸಭೆ ಸದಸ್ಯರಾದ ಅಂಬರೀಶ್, ಮಂಜುನಾಥ್, ಮುಖಂಡರಾದ ವಕ್ಕಲೇರಿ ರಾಜಪ್ಪ, ರಾಮಣ್ಣ, ಮಂಜುನಾಥ್, ಸೋಮಶೇಖರ್, ತ್ಯಾಗರಾಜ್, ಫಾಲ್ಗುಣ, ಅಪ್ರೋಜ್ ಪಾಷ, ಶಿವಕುಮಾರ್, ಮುಂತಾದವರು ಇದ್ದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!