• Sat. May 4th, 2024

PLACE YOUR AD HERE AT LOWEST PRICE

ಕೋಲಾರ, ಜ.೨೩ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಜಿಲ್ಲಧಿಕಾರಿಗಳ ಕಚೇರಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗಳನ್ನು ಸುಮಾರು ೩೦ ನಿಮಿಷಗಳ ಕಾಲ ಬಿಸಿಲಲ್ಲಿ ನಿಲ್ಲಿಸಿ ಜಿಲ್ಲೆಯಲ್ಲಿ ದಲಿತ ಸ್ಥಿತಿಗತಿಗಳ ಬಗ್ಗೆ ವಿವರಣೆ ನೀಡಿ, ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಕೋಲಾರ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ತಾಲ್ಲೂಕು ಆಡಳಿತ ದಲಿತರನ್ನು ಕಡೆಗಣಿಸುತ್ತಿದೆ. ಸರ್ಕಾರಿ ಸೌಕರ್ಯಗಳನ್ನು ಒದಗಿಸುವಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದಾರೆ, ಕೂಡಲೇ ದಲಿತರಿಗೆ ಸರ್ಕಾರಿ ಸವಲತ್ತುಗಳು ಹಾಗೂ ಭೂಮಿ ಹಂಚಿಕೆಯಲ್ಲಿ ಆಧ್ಯತೆಯನ್ನು ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಸುಮಾರು ಎಂಟು ವರ್ಷಗಳಿಂದ ವಾಸ ಮಾಡುತ್ತಿರುವ ಮಾಲೂರಿನ ಎಸ್.ಅಗ್ರಹಾರದ ನಿರಾಶ್ರಿತ ಗುಡಿಸಲು ಕುಟುಂಬಗಳಿಗೆ ಹಾಗೂ ಮುಳಬಾಗಿಲಿನ ನರಸಿಂಹ ತೀರ್ಥ ಹಾಗೂ ನೂಗಲುಬಂಡೆಯ ಗುಡಿಸಲು ವಾಸಿಗಳಿಗೆ ಅವರು ವಾಸ ಮಾಡುತ್ತಿರುವ ಜಾಗಕ್ಕೆ ಹಕ್ಕುಪತ್ರಗಳನ್ನು ನೀಡಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಶೇ.೯೦ರಷ್ಟು ನಿಲಯ ಪಾಲಕರು ಗ್ರೂಪ್ ಡಿ ದರ್ಜೆ ನೌಕರರು ಹಾಗೂ ದಿನಗೂಲಿ ನೌಕರರೇ ಆಗಿದ್ದು, ಅವರು ಭಷ್ಟಾಚಾರದಲ್ಲಿ ತೊಡಿಗಿಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ಇತ್ತ ಗುಣಮಟ್ಟದ ಆಹಾರವೂ ಇಲ್ಲದೆ, ಅತ್ತ ಗುಣಮಟ್ಟದ ಶಿಕ್ಷಣವೂ ಇಲ್ಲದೆ ಅನಾರೋಗ್ಯ ವಾತಾವರಣದಲ್ಲಿ ಕೂಡಿಹಾಕಿದಂತಿದ್ದಾರೆ. ತಕ್ಷಣವೇ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಅರ್ಹ ಪಧವೀದರ ಸಿಬ್ಬಂದಿಯನ್ನು ನಿಲಯ ಪಾಲಕರಾಗಿ ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾಡಳಿತ ಭವನದಲ್ಲೇ ಕಾರ್ಯನಿರ್ವಹಿಸುತ್ತಿರುವ ಡಾ.ಅಂಬೇಡ್ಕರ್ ನಿಗಮದಲ್ಲಿ ದಲ್ಲಾಳಿಗಳ ಆವಳಿ ಹೆಚ್ಚಾಗಿದೆ. ಪರಿಶಿಷ್ಟ ಜಾತಿ ಸಮುದಾಯದವರು ಯಾವುದೇ ಸೌಲಭ್ಯ ಪಡೆಯಬೇಕಾದರೂ ಇಲ್ಲಿ ದಲ್ಲಾಳಿಗಳ ಮೂಲಕ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ಅದೇ ರೀತಿ ಇಲ್ಲಿನ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ದಲಿತರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ, ದೂರು ಕೊಟ್ಟವರಿಗೆ ಸಾಕ್ಷö್ಯ ಕೇಳಿ ಹಿಂಬರಹ ನೀಡಲಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, ಜಿಲ್ಲಾದ್ಯಂತ ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪಿಟಿಸಿಎಲ್ ಪ್ರಕರಣಗಳನ್ನು ಸವರ್ಣೀಯರಿಗೆ ಆದೇಶಗಳನ್ನು ಮಾಡುತ್ತಿದ್ದು ಸರ್ವೆ ಸಾಮಾನ್ಯವಾಗಿದ್ದು, ಇದರಿಂದ ದಲಿತರ ಭೂಮಿ ಅನ್ಯರ ಪಾಲಾಗುತ್ತಿದೆ. ಬಾಕಿ ಇರುವ ಪಿಟಿಸಿಎಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿ ದಲಿತರಿಗೆ ಭೂಮಿ ಬಿಡಿಸಿಕೊಡಬೇಕು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಚರಿಸಿದ ಕೆ.ಜಿ.ಎಫ್ ನಗರದಲ್ಲಿ ೧೦ ಎಕರೆ ಭೂಮಿ ನೀಡಿ, ೧೦ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ನೆನಪಿನಲ್ಲಿ ರಾಷ್ಟಿçÃಯ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ ಅವರು, ಈಗಾಗಲೇ ನಿರ್ಮಾಣವಾಗಿರುವ ಮಿನಿ ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ಕೆ.ವಿಜಿ. ತಾಲ್ಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ರೋಜೇರ್ನಹಳ್ಳಿ ವೆಂಕಟರಮಣಪ್ಪ, ಮುನಿಚೌಡಪ್ಪ, ಸಂಪತ್ ಕುಮಾರ್, ಸಿ.ಈರಪ್ಪ. ಶ್ರೀಧರ್, ಮುದುವತ್ತಿ ಕೇಶವ, ಗನ್ ವೆಂಕಟರಮಣಪ್ಪ, ಮಹಿಳಾ ಒಕ್ಕೂಟದ ಸುಬ್ಬಮ್ಮ, ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!