• Sat. May 18th, 2024

PLACE YOUR AD HERE AT LOWEST PRICE

ಕೋಲಾರ,ಜ.೨೨ : ಕೋಲಾರ ನಗರದ ಹೊರವಲಯದ ತೇರಹಳ್ಳಿ ರಸ್ತೆ ಬಲಭಾಗದಲ್ಲಿರುವ ಸುಲ್ತಾನ್ ತಿಪ್ಪಸಂದ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧೬ರ ಉಸ್ಮಾನ್ ಷಾ ನಗರ ಪ್ರಮುಖ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿಗಳು, ವಿದ್ಯುತ್ ಸಂಪರ್ಕ ಕಂಬಗಳು ಇಲ್ಲದೆ ಇಲ್ಲಿನ ನಿವಾಸಿಗಳು ಅನುಭವಿಸುತ್ತ ಇರುವ ನೋವು ನರಕಸದೃಶವಾಗಿ ಕಂಡು ಬರುತ್ತದೆ.

ಜನವಸತಿ ಪ್ರದೇಶವೆಂದು ಹೇಳಲು ಮುಜುಗರವಾಗುಂತ ಅತ್ಯಂತ ಅನಾರೋಗ್ಯ ವಾತಾವರಣದಲ್ಲಿ ನರಳುತ್ತಿರುವ ಇಲ್ಲಿನ ಜನರ ಗೋಳು ನೋಡಿದವರಿಗೆ ಇಲ್ಲಿನ ನಗರಾಡಳಿತದ ದಿವ್ಯ ನಿರ್ಲಕ್ಷö್ಯವನ್ನು ಎತ್ತಿ ತೋರಿಸುತ್ತದೆ. ಬಹುತೇಕ ಮದ್ಯಮ ವರ್ಗದವರು ಹಾಗೂ ಬಡವರೇ ವಾಸ ಮಾಡುವ ಈ ಪ್ರದೇಶದಲ್ಲಿ ಇಲ್ಲಿನ ನಿವಾಸಿಗಳು ಹತ್ತಾರು ಸಮಸ್ಯೆಗಳ ಮದ್ಯೆ ಜೀವನ ಸಾಗಿಸುತ್ತಿದ್ದಾರೆ.

ನಗರಸಭೆಯ ವ್ಯಾಪ್ತಿಯಲ್ಲಿರುವ ೧೬ನೇ ವಾರ್ಡ್ನ ಜನರು ವಾರ್ತಾಭಾರತಿ ವರದಿಗಾರರಿಗೆ ದೂರವಾಣಿ ಕರೆ ಮಾಡಿ, ಇಲ್ಲಿನ ಸಮಸ್ಯೆಗಳ ಬಗ್ಗೆ ತಮ್ಮ ಗೋಳು ಹೇಳಿಕೊಂಡರು. ಕಳೆದ ೩೦ ವರ್ಷಗಳಿಂದ ನಗರ ಸಭೆಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದು,ನಮ್ಮ ವಾರ್ಡ್ಗೆ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಇಲ್ಲಿನ ಮಹಿಳೆಯರು ಬಹಳ ನಿರಾಶರಾಗಿ ಸರ್ಕಾರ ಹಾಗೂ ನಗರಾಡಳಿತದ ವಿರುದ್ದ ದೂರಿದರು.

ಪ್ರಸ್ತುತ ಎಸ್.ಡಿ.ಪಿ.ಐ.ಪಕ್ಷದ ಫೈರೋಜ್ ಎಂಬುವವರು ನಗರಸಭೆ ಸದಸ್ಯರಾಗಿದ್ದು,ಸಮಸ್ಯೆಗಳನ್ನು ಹೇಳಿಕೊಂಡರೆ, ಉಸ್ಮಾನ್ ಷಾ ನಗರ ನಗರಸಭೆಗೆ ಇನ್ನೂ ಸೇರಿಲ್ಲವೆಂದು ಹೇಳುತ್ತಾರೆ ಎನ್ನುತ್ತಾರೆ ಹಾಗಾದರೆ ಇಲ್ಲಿನ ಮತದಾರರು ಮಾತ್ರ ಹೇಗೆ ವಾರ್ಡ್ ೧೬ಕ್ಕೆ ಸೇರಿದ್ದಾರೆ ಎಂದು ಪ್ರಶ್ನಿಸಿದರು.

ಸರಿಯಾಗಿ ಚರಂಡಿಗಳು ಇಲ್ಲದ ಕಾರಣ ಮಳೆ ಬಂದರೆ ಚರಂಡಿಗಳು ತುಂಬಿ ಕಸ ಕಡ್ಡಿ ಸಮೇತ ಮಳೆ ನೀರು ಕೊಚ್ಚೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತದೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆಗಳು ಕೊಚ್ಚೆಗುಂಡಿಗಳಾಗಿ ಮಕ್ಕಳು ಮಹಿಳೆಯರು ಮಲಗಲೂ ಆಗದೆ ನರಕಯಾತನೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಇನ್ನೂ ರಸ್ತೆಗಳು ಇಲ್ಲದ ಕಾರಣ ಕನಿಷ್ಟ ಆಟೋಗಳೂ ಸಹ ವಾರ್ಡ್ ನ ಒಳಗೆ ಬರಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಯಾರಾದರೂ ಕಾಯಿಲೆ ಬಿದ್ದರೆ, ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲು ತೇರಹಳ್ಳಿ ಮುಖ್ಯ ರಸ್ತೆಗೆ ಕರೆದುಕೊಂಡು ಹೋಗಬೇಕು. ಇದರಿಂದ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತಿದೆ.

ಪ್ರಮುಖ ರಸ್ತೆಯಲ್ಲಿ ಡೀಸೆಲ್ ಬಾಬಾ ದರ್ಗಾ ಹಾಗೂ ಮುರ್ಷದ್ ಆಲಿ ದರ್ಗಾಗಳು ಇದ್ದು,ತಕ್ಷಣ ವಾರ್ಡ್ ನಲ್ಲಿ ಚರಂಡಿಗಳನ್ನು ಮಾಡಿ, ಸಿಮೆಂಟ್ ರಸ್ತೆಗಳನ್ನು ಮಾಡಿ ಕೊಡಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು,ಶಾಸಕರು ಹಾಗೂ ನಗರ ಸಭೆ ಆಯುಕ್ತರು ವಾರ್ಡ್ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನಮಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಸ್ಥಳೀಯ ಮಹಿಳೆಯರು ಆಗ್ರಹಿಸಿದರು.

ನಗರಸಭೆಗೆ ಹಣ ಕಟ್ಟಲು ನಾವುಗಳು ತಯಾರಾಗಿದ್ದು ನಮ್ಮ ಮನೆಗಳಿಗೆ ಖಾತೆಗಳನ್ನು ಮಾಡಿಕೊಡಬೇಕು, ಮೈನಾರಿಟಿ ಜನಾಂಗವಾಸ ಮಾಡುವ ಸ್ಥಳಗಳ ಅಭಿವೃದ್ಧಿಗೆ ಮೀಸಲು ಇರುವ ಹಣದಲ್ಲಿ ತಕ್ಷಣ ವಾರ್ಡ್ ನ ಎಲ್ಲಾ ರಸ್ತೆಗಳ ಅಭಿವೃದ್ಧಿ ಹಾಗೂ ಚರಂಡಿಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!