• Wed. May 8th, 2024

PLACE YOUR AD HERE AT LOWEST PRICE

ಕೋಲಾರ: ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಜೊತೆಗೆ ಸರ್ವ ಧರ್ಮೀಯ ಸಹಿಷ್ಣುತೆಯೇ ಸಂವಿಧಾನದ ಹಿರಿಮೆಯಾಗಿದೆ ಎಂದು ಸಮಾಜ ಸೇವಕ, ಭಾರತ  ಸೇವಾದಳ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು.

ನಗರದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಹಳೇ ಉರ್ದು ಪ್ರಾಥಮಿಕ, ಮಾಧ್ಯಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ೭೫ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ಪ್ರಗತಿಶೀಲ ರಾಷ್ಟ್ರವಾಗಿರುವ ಹೊರಹೊಮ್ಮುತ್ತಿರುವ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಲು ಸಂವಿಧಾನ ಸಹಕಾರಿಯಾಗಿದೆಯೆಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಮಾತನಾಡಿ, ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಮಿತಿಯು ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಕೈಬರಹದಲ್ಲಿ ಬರೆದ ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ನವೆಂಬರ್ ೨೬, ೧೯೪೯ ರಂದು ಅಂಗೀಕರಿಸಿ, ೧೯೫೦, ಜ.೨೬ ರಂದು ಅಳವಡಿಸಿಕೊಂಡಿದ್ದರ ನೆನಪಿನಲ್ಲಿ ೭೫ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವುದಾಗಿ ವಿವರಿಸಿದರು.

ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ೭೫ ವರ್ಷಗಳಿಂದಲು ಭಾರತವು ಅಖಂಡವಾಗಿ ಉಳಿಯಲು ಹಾಗೂ ವಿವಿಧ ಭಾಷೆ, ಜಾತಿ, ಧರ್ಮಗಳ ಜನರು ಭಾರತೀಯರಾಗಿ ಐಕ್ಯತೆಯಿಂದ ಮಿಳಿತವಾಗಲು ಸಂವಿಧಾನ ಸಹಕಾರಿಯಾಗಿದೆ. ಯುವ ವಿದ್ಯಾರ್ಥಿ ಪೀಳಿಗೆ ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಂಡು ಭಾರತದ ಐಕ್ಯತೆ, ಸಮಗ್ರತೆ, ಸಮಾನತೆ ಆಶಯಗಳಿಗೆ ಧಕ್ಕೆ ತಾರದಂತೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಪದಾಕಾರಿಗಳಾದ ನಾಗರಾಜ್, ಶ್ರೀರಾಮ್, ಕೆ.ಜಯದೇವ್, ಅಪ್ಪಿ ನಾರಾಯಣಸ್ವಾಮಿ, ಫಲ್ಗುಣ, ಗೋಕುಲ ಚಲಪತಿ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿಯ ಸಿಬ್ಬಂದಿ ಗಿರೀಶ್‌ಕುಮಾರ್, ಸುಬ್ರಮಣಿ, ಸುದರ್ಶನ್, ಶ್ರೀನಿವಾಸಮೂರ್ತಿ, ಕೆ.ಶ್ರೀನಿವಾಸ್, ಮುನಿರತ್ನಯ್ಯ ಶೆಟ್ಟಿ, ರಾಘವೇಂದ್ರ, ವೆಂಕಟಾಚಲಪತಿ, ಮೂರು ಶಾಲೆಗಳ ಮುಖ್ಯ ಶಿಕ್ಷಕಿಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತ ಸೇವಾದಳ ಜಿಲ್ಲಾ  ಸಂಘಟ ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!