• Sun. Apr 28th, 2024

PLACE YOUR AD HERE AT LOWEST PRICE

ಕೆಜಿಎಫ್:ದೇವರು, ದೇವತಾ ಕಾರ್ಯಗಳು ಎಂದು ಬಂದಾಗ ಅಲ್ಲಿ ಯಾರೂ ಸಹ ಅಡ್ಡಿಪಡಿಸುವಂತಹ ಕೆಲಸಕ್ಕೆ ಕೈ ಹಾಕಬಾರದು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.

ನಗರದ ಶ್ರೀ ಲಕ್ಞ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೂತನವಾಗಿ ರಾಜಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಹಿರಿಯ ನಾಗರೀಕರು, ದೇವಾಲಯದ ಭಕ್ತರು ಹಾಗೂ ಎಲ್ಲ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು.

ಹಲವಾರು ವರ್ಷಗಳಿಂದ ದೇವಾಲಯದ ರಾಜಗೋಪುರ ಕಾರ್ಯ ನನೆಗುದಿಗೆ ಬೀಳಲು ಪ್ರಮುಖ ಕಾರಣ, ಕೆಲವರು ಬೇಕಂತಲೇ ಸರ್ಕಾರಕ್ಕೆ, ಆಯುಕ್ತರಿಗೆ, ಮುಜರಾಯಿ ಸಚಿವರಿಗೆ ಅರ್ಜಿಗಳನ್ನು ಬರೆದು ಅಡ್ಡಿಪಡಿಸುತ್ತಿದ್ದುದೇ ಆಗಿದೆ ಎಂದರು.

ದೇವತಾ ಕಾರ್ಯಗಳನ್ನು ಮಾಡುವಾಗ ಯಾರೇ ಆಗಿರಲಿ, ಯಾವುದೇ ಪಕ್ಷಕ್ಕೆ ಸೇರಿರಲಿ, ಪಕ್ಷಬೇಧ ಮರೆತು, ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು, ತನು, ಮನ, ಧನಗಳನ್ನು ಅರ್ಪಿಸಿದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಹಿನ್ನಲೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಪಕ್ಷಬೇಧ ಮರೆತು ಎಲ್ಲ ಸಮಾನ ಮನಸ್ಕರ ಸಭೆಯನ್ನು ದೇವಾಲಯದ ಆವರಣದಲ್ಲಿಯೇ ಕರೆದಿದ್ದು, ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಯಾರು ಅಡ್ಡಿಪಡಿಸಬಾರದೆಂದು ಮನವಿ ಮಾಡಿದರು.

ಮುಜರಾಯಿ ಇಲಾಖೆಯಿಂದ ವಿಶೇಷವಾಗಿ ೪ ಕೋಟಿ ರೂಪಾಯಿಗಳ ಅನುದಾನವನ್ನು ರಾಜಗೋಪುರದ ನಿರ್ಮಾಣಕ್ಕೆ ಬಿಡುಗಡೆ ಮಾಡಿಸಿ ತಂದಿದ್ದು, ರಾಜಗೋಪುರದ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯ ನುರಿತ ಅಧಿಕಾರಿಗಳಿಂದ ಅಗತ್ಯವಿರುವ ನಕ್ಷೆ ಮತ್ತು ವಿನ್ಯಾಸವನ್ನು ಸಿದ್ದಪಡಿಸಲಾಗುವುದು.

ಸರ್ಕಾರದ ಅಧೀನದಲ್ಲಿರುವ ಯಾವುದಾರೂ ಒಂದು ಸಂಸ್ಥೆಗೆ ನಿರ್ಮಾಣದ ಗುತ್ತಿಗೆಯನ್ನು ನೀಡಿ, ಮುಂದಿನ ಒಂದು ವರ್ಷದೊಳಗೆ ರಾಜಗೋಪುರ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಪ್ರಸಾದ್ ರೆಡ್ಡಿ ಮಾತನಾಡಿ, ಕಳೆದ ೪೦ ವರ್ಷಗಳಿಂದ ರಾಜಗೋಪುರ ನಿರ್ಮಾಣಕ್ಕೆ ಭಕ್ತರು ಪ್ರಯತ್ನಪಟ್ಟರು ಇದುವರೆಗೆ ಕನಸು ನನಸಾಗಿರಲಿಲ್ಲ, ಕೆಜಿಎಫ್ ನಗರದಲ್ಲಿ ಪ್ರಸಿದ್ದ ದೇವಾಲಯ ಎನಿಸಿಕೊಂಡಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣ ಮಾಡಿದರೆ ಕೆಜಿಎಫ್ ನಗರವು ಅಭಿವೃದ್ದಿಯಾಗಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಲ್ಲದೆ ದೇವಾಲಯದ ವಾಸ್ತು ಪ್ರಕಾರ ರಾಜಗೋಪುರ ನಿರ್ಮಾಣ ಮಾಡಬೇಕೆಂದು ದೇವಾಲಯದ ಲಕ್ಷಾಂತರ ಭಕ್ತರ ಬೇಡಿಕೆಯಾಗಿತ್ತು ಎಂದು ತಿಳಿಸಿದರು.

ಕೋಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮಾತನಾಡಿ, ದೇವಾಲಯದಲ್ಲಿ ರಾಜಗೋಪುರ ನಿರ್ಮಾಣವಾದರೆ ರಾಜಗೋಪುರದ ದರ್ಶನವನ್ನು ಭಕ್ತರು ಮಾಡಿದಾಗ ಕೋಟಿ ಪುಣ್ಯವು ಲಭಿಸಲಿದೆ ಎಂಬ ಪ್ರತೀತಿ ಇದ್ದು, ಶಾಸಕರು ರಾಜಗೋಪುರದ ನಿರ್ಮಾಣಕ್ಕೆ ಮುಂದಾಗಿರುವುದು ನಗರದ ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡ ಮುನಿರತ್ನಂನಾಯ್ಡು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಮಾರಿಕುಪ್ಪಂ ವಿಜಿಕುಮಾರ್ ಇನ್ನಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!