• Mon. Sep 16th, 2024

ಬೆಮೆಲ್ ಕಾರ್ಖಾನೆಯಲ್ಲಿ ಉಪವಾಸ ಸತ್ಯಾಗ್ರಹ:ಸ್ಥಳಕ್ಕೆ ಸಂಸದ ಮಲ್ಲೇಶ್‌ಬಾಬು

PLACE YOUR AD HERE AT LOWEST PRICE

KGF,ಕೆಜಿಎಫ್:ಬೆಮೆಲ್ ಕಾರ್ಖಾನೆಯಲ್ಲಿ ದಿನಗೂಲಿ ನೌಕರರನ್ನು ಕಡೆಗಣಿಸಿ ದಕ್ಷಿಣ ಬಾರತದ ಕಾರ್ಮಿರನ್ನು ನೇಮಕ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಬೆಮೆಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 2500 ಕಾರ್ಮಿಕರು ಟೂಲ್‌ಡೌನ್ ಮಾಡಿ ಬೆಮೆಲ್ ಕಾರ್ಖಾನೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಶನಿವಾರ ಆರಂಭಿಸಿದ್ದರು, ದಿನಗೂಲಿ ನೌಕರರನ್ನು ಖಾಯಂಗೊಳಿಸುವವರಿಗೆ ಉಪವಾಸ ಸತ್ಯಾಗ್ರಹವನ್ನು ವಾಪಸ್ಸು ಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಸಂಸದ ಮಲ್ಲೇಶ್‌ಬಾಬು, ಶಾಸಕಿ ರೂಪಕಲಾಶಶಿಧರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಅಕ್ರಂಪಾಷ ಬೆಮೆಲ್ ಕಾರ್ಖಾನೆಗೆ ಭೇಟಿ ನೀಡಿ ದಿನಗೂಲಿ ನೌಕರರ ಮನವೊಲಿಸುವಲ್ಲಿ ಯಶ್ವವಿಯಾದರು.

ಆಗಸ್ಟ್ 30 ರೊಳಗೆ ಬೆಮೆಲ್ ಆಡಳಿತ ಮಂಡಳಿಯೊಂದಿಗೆ ಸಭೆ ಕರೆಯುವ ಭರವಸೆ.

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಬೆಮಲ್‌ನ ಸಿಎಂಡಿ ಶಾಂತನುರಾಯ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಮೆಲ್‌ನ ಕಾರ್ಖಾನೆಯಲ್ಲಿ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿರನ್ನು ಖಾಯಂ ಗೊಳಿಸುವ ನಿಟ್ಟನಲ್ಲಿ ಚರ್ಚೆಸಿ ತೀರ್ಮಾನ ಕೈಗೊಳ್ಳುವುದಾಗಿ ಸಂಸದ ಮಲ್ಲೇಶ್ ಬಾಬು ದಿನಗೂಲಿ ನೌಕರರ ಸಂಘದ ಅಧ್ಯಕ್ಷರ ಜೊತೆ ಮಾತುಕತೆ ನಡೆಸುವ ಮೂಲಕ ಶನಿವಾರ ಮತ್ತು ಭಾನುವಾರ ಮುಸ್ಕರಕ್ಕೆ ತೆರೆ ಎಳೆದರು. ಈ ಸಭೆಯಲ್ಲಿ ಸ್ಥಳೀಯ ಶಾಸಕರಾದ ರೂಪಕಲಾಶಶಿಧರ್ ಮತ್ತು ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಕಾರ್ಮಿಕರ ಮುಖಂಡರು ಸಭೆಗೆ ಅಹ್ವಾನ ನೀಡುವುದಾಗಿ ಸಂಸದ ಮಲ್ಲೇಶ್ ಬಾಬು ತಿಳಿಸಿದರು.

ಕೇಂದ್ರ ಸರಕಾರದ ಮಲತಾಯಿ ಧೋರಣೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ಬೆಮೆಲ್ ಕಾರ್ಖಾನೆಯಲ್ಲಿ ಸ್ಥಳೀಯವಾಗಿ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿರನ್ನು ಕಡೆಗಣಿಸಿ ಹಿಂದಿ ಬಾಷಿಗರಿಗೆ ಖಾಯಂ ನೌಕರಿ ನೀಡಿರುವ ಹಿನ್ನಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬೆಮೆಲ್ ಆಡಳಿತ ಮಂಡಳಿಯ ವಿರುದ್ದ ಅಕ್ರೋಶ ಹೊರ ಹಾಕಿ ಕೇಂದ್ರ ಸರಕಾರದ ಮಲತಾಯಿ ಧೋರಣೆಯನ್ನು ಖಂಡಸಿ ಕೇಂದ್ರ ಸರಕಾರದ ಮೋದಿ ಸರಕಾರದ ವಿರುದ್ದ ದಿಕ್ಕಾರ ಕೂಗಿದರು.

ಹಿಂದಿ ಬಾಷಿಗರಿಗೆ ಬೆಮಲ್ ಕಾರ್ಖಾನೆಯಲ್ಲಿ ಖಾಯಂ ನೌಕರಿ ನೀಡಿದ್ದಾರೆ. 20 ವರ್ಷಗಳಿಂದ ಬೆಮೆಲ್ ಕಾರ್ಖಾನೆಯಲ್ಲಿ ದಿನಗೂಲಿ ನೌಕರರ ಹೊರಗಿಟ್ಟು ಆಡಳಿತಮಂಡಳಿಯವರು ದ್ರೋಹ ವೆಸಗಿದ್ದಾರೆ. ಕೂಡಲೇ ಬೆಮೆಲ್‌ನ ಆಡಳಿತಮಂಡಳಿಯವರು ಸ್ಥಳೀಯರಿಗೆ ಬೆಮೆಲ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವಂತಹ ಕೆಲಸವನ್ನು ಮಾಡಬೇಕಿದೆ ಈ ಹಿನ್ನಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಜೊತೆಗೂಡಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸ್ಥಳಿಯರಿಗೆ ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಆಗಸ್ಟ್ 30 ರೊಳಗೆ ಸಭೆ ಸೇರಿ ದಿನಗೂಲಿ ನೌಕರರ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ತಿಳಿಸಿದರು.

ಮಾನವೀಯತೆ ಮರೆತ ಬೆಮೆಲ್ ಅಧಿಕಾರಿಗಳು:

ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ದಿನಗೂಲಿ ನೌಕರರಿಗೆ ಕನಿಷ್ಟ ಒಂದು ಗ್ಲಾಸ್ ಕುಡಿವ ನೀರು ಸಹ ಕೊಟ್ಟಿಲ್ಲ. ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರ್ಮಿಕರಿಗೆ ಬೆಮೆಲ್ ಆಡಳಿತ ಮಂಡಳಿ ಅನ್ಯಾಯ ಮಾಡಿರುವುದಾಗಿ ಎಸ್.ಎನ್ ನಾರಾಯಣ್ವಸ್ವಾಮಿ ಅಕ್ರೋಶ ವ್ಯಕ್ತಪಡಿಸಿ ಖಾಯಂ ನೌಕರರಿಗೆ ನೀಡುತ್ತಿರುವ ಸೌಲತ್ತುಗಳನ್ನು ದಿನಗೂಲಿ ನೌಕರರಿಗೂ ನೀಡುವಂತೆ ಬೆಮೆಲ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ಸಾರ್ವಜನಿಕ ಉದ್ದೇಮೆಗಳನ್ನು ಉಳಿಸುವ ಅವಶ್ಯ:

ದೇಶಕ್ಕೆ ಆಧಾರ ಸ್ತಂಭಗಳಾಗಿರುವ ಸಾರ್ವಜನಿಕ ಉದ್ದೇಮೆಗಳನ್ನು ಉಳಿಸುವಂತಹ ಕೆಲಸ ಆಗಬೇಕು. ಈ ಹಿನ್ನಲೆಯಲ್ಲಿ ಸಮಾಜಿಕ ನ್ಯಾಯವನ್ನು ಕಾಪಡುವ ನಿಟ್ಟನಿಲ್ಲಿ ಸಾರ್ವಜನಿಕ ಉದ್ದೇಮೆಗಳು ಉಳಿಯಬೇಕು. ಬೆಮೆಲ್‌ನಲ್ಲಿ ಉದ್ಯೋಗ ನೀಡಲು ಅನ್‌ಲೈನ್‌ಮೂಲಕ ಅಹ್ವಾನ ನೀಡಿ, ಅರ್ಹ ಅಭ್ಯರ್ಥಿಗಳ ಅಯ್ಕೆಗೆ ಲಿಖಿತ ಪರೀಕ್ಷೆ ನಡೆಸಿದ್ದು, ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದುಕೊಂಡಿರುವ ಅರ್ಹ ಅಭ್ಯರ್ಥಿಗಳನ್ನು ಬೆಮೆಲ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಅಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಉದ್ದೇಮೆಗಳನ್ನು ಉಳಿಸುವ ನಿಟ್ಟನಿಲ್ಲಿ ಬೆಮೆಲ್ ಆಡಳಿತ ಮಂಡಳಿಯವರು ಉತ್ತಮ ಹೆಜ್ಜೆ ಇಡಲಾಗಿದೆ ಎಂದರು.

ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡಲು ಒತ್ತಾಯ:

ಸ್ಥಳಿಯವಾಗಿ ಬೆಮೆಲ್ ಕಾರ್ಖಾನೆಯಲ್ಲಿ ತರಭೇತಿ ಪಡೆದುಕೊಂಡು ಕಳೆದ 20 ವರ್ಷಗಳಿಂದ ಬೆಮೆಲ್ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿರನ್ನು ಖಾಯಂಮ ನೌಕರರನ್ನಾಗಿ ಪರಿಗಣಿಸುವಂತೆ ಅಗಸ್ಟ್ 30 ರೊಳಗೆ ಬೆಮೆಲ್ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಒತ್ತಾಯ ಮಾಡುವುದಾಗಿ ಶಾಸಕಿ ರೂಪಕಲಾಶಸಿಧರ್ ತಿಳಿಸಿದರು.

ಬೆಮೆಲ್ ಖಾಯಂ ನೌಕರರಿಗೆ ನೀಡುತ್ತಿರುವ ಸೌಲತ್ತುಗಳನ್ನು ದಿನಗೂಲಿ ನೌಕರಿಗೂ ನೀಡಲು ಸಭೆಯಲ್ಲಿ ಚರ್ಚೆಸಿ ತೀರ್ಮಾನಿಸಲಾಗುವುದೆಂದು ಕಾರ್ಮಿಕ ಮುಖಂಡರಿಗೆ ಶಾಸಕರು ಭರವಸೆ ನೀಡಿದ ಹಿನ್ನಲೆಯಲ್ಲಿ ಮುಷ್ಕರವನ್ನು ವಾಪಸ್ಸು ಪಡೆದುಕೊಂಡರು.

ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ನಾಲ್ವರು ಕಾರ್ಮಿಕರು ಅಸ್ಥವ್ಯಸ್ಥಗೊಂಡ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು ಕಾರ್ಮಿರನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಶನಿವಾರ 2500 ಕಾರ್ಮಿಕರು ಬೆಮೆಲ್ ಕಾರ್ಖಾನೆಯೊಳಗೆ ದೀಡಿರ್ ಮುಷ್ಕರ ಹೂಡಿ ಟೂನ್ ಡೌನ್ ಮಾಡಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾವಾಗಿ ಹೆಚ್ಚಿನ ಪೊಲೀಸ್ ತುಕಡಿಗಳನ್ನು ಆಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಡಾ.ಮೈತ್ರಿ, ಕಾರ್ಮಿಕ ನೀರಿಕ್ಷಕಿ ಸಬಾನಾ ಅಜ್ಮಿ, ತಹಶೀಲ್ದಾರ್ ನಾಗವೇಣಿ, ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ವಾರ್ಡ್ನ ಸದಸ್ಯರಾದ ಮಾಣಿಕ್ಯಂ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!