• Sat. Mar 2nd, 2024

ಕೆಜಿಎಫ್

  • Home
  • *ಮಾರ್ಚ್-1ರಿಂದ ಸರ್ಕಾರಿ ನೌಕರರ ಪ್ರತಿಭಟನೆ.*

*ಮಾರ್ಚ್-1ರಿಂದ ಸರ್ಕಾರಿ ನೌಕರರ ಪ್ರತಿಭಟನೆ.*

ಕೆಜಿಎಫ್:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಎನ್‍ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾರ್ಚ್ 1ನೇ ತಾರೀಖಿನಿಂದ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಿಯಾಗುವ ಮೂಲಕ ಪ್ರತಿಭಟನೆ…

*ಬೆಮೆಲ್ ಕಾರ್ಖಾನೆ ಸಂಘದ ಚುನಾವಣೆ:ಬ್ಯಾನರ್ ನಲ್ಲಿ ಕನ್ನಡವೇಕಿಲ್ಲ.*

ಕೆಜಿಎಫ್:ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಹಾಗೂ ಆಡಳಿತ ಭಾಷೆಯಾಗಿದ್ದರೂ ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟಿರುವ ಬೆಮೆಲ್ ಕಾರ್ಖಾನೆಯ ಕಾರ್ಮಿಕ ಸಂಘದ ಚುನಾವಣೆ ಪ್ರಚಾರದ ಬ್ಯಾನರ್  ನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಬೆಮೆಲ್ ಕಾರ್ಖಾನೆ ಕಾರ್ಮಿಕ ಸಂಘದ ಚುನಾವಣೆಯು ಇದೇ…

*ಕೆಜಿಎಫ್ ಡಿಎಆರ್ ಆವರಣದಲ್ಲಿ ಆರೋಗ್ಯ ತಪಾಷಣಾ ಶಿಭಿರ.*

ಕೆಜಿಎಫ್‍ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ  ಡಿಎಆರ್ ಆವರಣದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ವೈದ್ಯಕೀಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಪೂರ್ವಿಕಾ ಬಯೋ ಸೈನ್ಸ್ ಮತ್ತು ಕೆಜಿಎಫ್ ಸಂಭ್ರಮ್ ಆಸ್ಪತ್ರೆಯ ಸಹಯೋಗದಲ್ಲಿ ಖ್ಯಾತ ಹೃದಯತಜ್ಞ ಡಾ||ಎಸ್.ಅರಿವಳಗನ್ ಮತ್ತು ಡಾ||ಸಂಗೀತಾರ ನೇತೃತ್ವದಲ್ಲಿ ಪೊಲೀಸರಿಗೆ ಆರೋಗ್ಯ ತಪಾಸಣಾ…

*ಸಿಡಿಪಿಒ ಇಲಾಖೆಯ ಮಕ್ಕಳ ಪೌಷ್ಠಿಕ ಆಹಾರ ಕಾಳ ಸಂತೆಯಲ್ಲಿ ಮಾರಾಟ.*

ಕೆಜಿಎಫ್:ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಮಕ್ಕಳ ಬೆಳವಣಿಗೆಗಾಗಿ ವಿತರಿಸಬೇಕಾಗಿದ್ದ ಮಕ್ಕಳ ಪೌಷ್ಠಿಕ ಆಹಾರದ ಪ್ಯಾಕೇಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೇತಮಂಗಲ ಗ್ರಾಮದ ಹಳೆ ಬಡಾವಣೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ಅಂಗನವಾಡಿ…

*ಗಾಂಜಾ ಗಿಡ ಬೆಳೆಸಿದ ವ್ಯಕ್ತಿಗೆ 10ವರ್ಷ ಜೈಲು ಶಿಕ್ಷ ವಿಧಿಸಿದ ನ್ಯಾಯಾಲಯ.*

ಬಂಗಾರಪೇಟೆ ತಾಲ್ಲೂಕಿನ ಹುನುಕುಂದ ಗ್ರಾಮದ ವಾಸಿ ಶಂಕ್ರಪ್ಪ  ಎಂಬುವವರು  ಸರ್ವೇ ನಂಬರ್ 29 ರ ಜಮೀನಿನಲ್ಲಿ ಅಕ್ರಮವಾಗಿ 11 ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿ ಅಬಕಾರಿ ನಿರೀಕ್ಷಕರಾದ ರಮಾಮಣಿರವರು 15-04-2021ರಂದು ಪ್ರಕರಣವನ್ನು ದಾಖಲಿಸಿದ್ದರು. ನಂತರ ಸದರಿ ಪ್ರಕರಣವನ್ನು ಅಬಕಾರಿ ಅಧಿಕಾರಿ…

*ಕೆಜಿಎಫ್ ನಲ್ಲಿ ಭಾರತ ಮಾತಾ ಕ್ಯಾಂಟಿನ್‍ ಆರಂಭ:ಸುರೇಶ್.*

ಕೆಜಿಎಫ್:ಹಸಿದವರ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ಎಲ್ಲಾ ಜನರಿಗೆ ಉಚಿತವಾಗಿ ಊಟ ಕೊಡಲು ನಾಳೆಯಿಂದ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಭಾರತ ಮಾತಾ ಕ್ಯಾಂಟಿನ್‍ಗೆ ಚಾಲನೆ ನೀಡಲಾಗುವುದು ಎಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಓ.ಎಸ್.ಆರ್ ಚಾರಿಟಬಲ್ ಟ್ರಸ್ಟ್  ಅದ್ಯಕ್ಷ  ಬಿ.ಸುರೇಶ್…

*ವಿದ್ಯುತ್ ತಂತಿ ತುಂಡಾದ ಹಿನ್ನೆಲೆ:ರೈಲುಗಳ ಸಂಚಾರ ಸ್ಥಗಿತ*

ಬಂಗಾರಪೇಟೆ:ರೈಲ್ವೆ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ ಚೆನ್ನೈ-ಬೆಂಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ. ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ಲೈನ್​ ತುಂಡಾಗಿ ರೈಲಿನೆ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ. ವಿದ್ಯುತ್ ತಂತಿ ತುಂಡಾಗಿರುವುದನ್ನು ರೈಲ್ವೆ…

*ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷರಾಗಿ ಜಯರಾಮರೆಡ್ಡಿ ಆಯ್ಕೆ.*

ಕೆಜಿಎಫ್:ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಯರಾಮರೆಡ್ಡಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಅಧ್ಯಕ್ಷ ಸ್ಥಾನವು ತೆರವುಗೊಂಡಿದ್ದರಿಂದ ಇಂದು ತೆರವುಗೊಂಡಿದ್ದ ಅಧ್ಯಕ್ಷ…

*ನಿರುದ್ಯೋಗ ಹೋಗಲಾಡಿಸಲು ಸ್ವಕ್ಷೇತ್ರ ಅಭ್ಯರ್ಥಿ ಗೆಲ್ಲಿಸಿ:ಸುರೇಶ್.*

ಕೆಜಿಎಫ್‍:ಚುನಾವಣೆ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ, ಆಮಿಷಗಳನ್ನು ಒಡ್ಡಿ ಮತಗಳು ಪಡೆಯುವ ನಾಯಕರ ಬಗ್ಗೆ ಎಚ್ಚರವಿದ್ದು, ಸದಾ ಬಡವರ, ದೀನ ದಲಿತರ, ಕೂಲಿ ಕಾರ್ಮಿಕರ, ಪರ ಚಿಂತನೆ ಇರುವ ನಿರುದ್ಯೋಗ ಹೋಗಲಾಡಿಸುವ ಸ್ವಕ್ಷೇತ್ರ ಬಿಜೆಪಿ ಅಭ್ಯರ್ಥಿಗೆ ಮತಕೊಟ್ಟು  ಗೆಲ್ಲಿಸಿ ಎಂದು ಕಮ್ಮಸಂದ್ರ ಗ್ರಾಪಂ…

*ಹಸು ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಹಾಲು ಸಿಗುತ್ತದೆ: ಲಕ್ಷ್ಮೀಪತಿ.*

ಕೆಜಿಎಫ್:ಹಾಲು ಕರೆಯುವ ಹಸು ಆರೋಗ್ಯದಿಂದ ಇದ್ದರೆ ಮಾತ್ರ ಆರೋಗ್ಯಕರವಾದ ಹಾಲನ್ನು ಉತ್ಪಾದನೆ ಮಾಡಲು ಸಾಧ್ಯ ಎಂದು ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಎನ್‍ಎಸ್‍ಎಸ್ ಯೋಜನೆ ಅಧಿಕಾರಿ ಲಕ್ಷ್ಮೀಪತಿ ಹೇಳಿದರು. ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉನ್ನತ್ ಭಾರತ್ ಅಭಿಯಾನದಡಿ ಶುದ್ದ ಹಾಲಿನ ಉತ್ಪಾದನೆ ಕುರಿತು ಒಂದು ದಿನದ…

You missed

error: Content is protected !!