ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ.
ಕೆಜಿಎಫ್.,ಡಿ.೧:ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೩ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರದಂದು ಉದ್ಘಾಟನೆ ಮಾಡಲಾಯಿತು. ಕೆಜಿಎಫ್‌ನ ಚಾಂಫೀಯನ್‌ರೀಫ್ಸ್ ನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ…
*ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬರುವುದು ಶ್ಲಾಘನೀಯ: ಸಭಾಪತಿ ಬಸವರಾಜ ಹೊರಟ್ಟಿ.
ಬೆಂಗಳೂರು-ಡಿ.1.ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ದತೆ ಕಾಪಾಡಿಕೊಳ್ಳಬೇಕು. ಈ ಬಾರಿ ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ವಿಧಾನಪರಿಷತ್ ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯೂ.ಡಬ್ಲ್ಯೂ.ಜೆ)…
ಖಾಯಂಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಪೌರಕಾರ್ಮಿಕರ ಪ್ರತಿಭಟನೆ.
ಕೋಲಾರ:ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತರುವ ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಲೋಡರ್ಸ್, ಆಟೋ ಮತ್ತು ಟಿಪ್ಪರ್ ವಾಹನ ಚಾಲಕರು ಮತ್ತು ಸಹಾಯಕರು, ಸೂಪರ್ ವೈಸರ್ ಗಳು, ಡಾಟಾ ಎಂಟ್ರಿ…
ಸಮಾಜ ಸೇವಕ ವಕೀಲ ಕೆ.ಆರ್.ಧನ್ ರಾಜ್ ಇನ್ನಿಲ್ಲ.
ಕೋಲಾರ:ಹಿರಿಯ ವಕೀಲರಾದ ಕೆ.ಆರ್.ಧನ್ ರಾಜ್ ಇಂದು ಮದ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ . ಹಲವು ವರ್ಷಗಳಿಂದ ದೀನದಲಿತರಿಗಾಗಿ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಿದ್ದು, ಅನಾಥರಿಗಾಗಿ ಹಾಗೂ ವಯೋ ವೃದ್ದರಿಗೆ ತಾನೇ ನಿರ್ಮಿಸಿದ ಮುಸ್ಸಂಜೆ ಮನೆ ಆಶ್ರಮ ಸುಮಾರು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದರು. ಸಮಾಜ…
ಬೆಂಗಳೂರಿನ 44ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ:ಆತಂಕದಲ್ಲಿ ಪೋಷಕರು.
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ವಿವಿಧ 44ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದೀನ್ ಸಂಘಟನೆಯಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಶಾಲೆಗಳ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಾಲಾ ಮಕ್ಕಳನ್ನು ಸಿಬ್ಬಂದಿ ಹೊರ ಕಳಿಸಿದ್ದಾರೆ. ಇ-ಮೇಲ್ ನಲ್ಲಿ ಕೆಲವು ಅಂತಾರಾಷ್ಟ್ರೀಯ ವಿಚಾರವನ್ನು…
ಡ್ಯೂಟಿ ಮುಗಿಯಿತೆಂದು ರೈಲು ನಿಲ್ಲಸಿ ಹೋದ ಚಾಲಕ:ಗಂಟೆಗಟ್ಟಲೆ ಪ್ರಯಾಣಿಕರ ಪರದಾಟ.
‘ಡ್ಯೂಟಿ ಮುಗಿಯಿತು’ ಎಂದು ಹೇಳಿ ಚಾಲಕ (ಲೋಕೊ ಪೈಲಟ್) ರೈಲನ್ನು ಮಧ್ಯದಲ್ಲಿ ನಿಲ್ಲಿಸಿ ಹೊರಟು ಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬುರ್ವಾಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇದರಿಂದಾಗಿ…
ಉತ್ತರಾಖಂಡ:ಕಾರ್ಮಿಕರನ್ನು ರಕ್ಷಿಸಿದ ತಂಡದಲ್ಲಿ ಜಿಲ್ಲೆಯ ವೆಂಕಟೇಶ್ ಪ್ರಸಾದ್.
ಬಂಗಾರಪೇಟೆ:ಉತ್ತರಾಖಂಡದ ಉತ್ತರಕಾಶಿ ಬಳಿ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ಹೊರತೆಗೆಯಲು ರಾಜ್ಯದಿಂದ ೯ ಜನರ ಮೈನಿಂಗ್ ಎಂಜಿನಿಯರ್ ತಂಡ ಶ್ರಮಿಸಿದ್ದು, ತಂಡದಲ್ಲಿ ಜಿಲ್ಲೆಯ ಹೆಮ್ಮೆಯ ಪುತ್ರ ಹೆಚ್.ಎಸ್.ವೆಂಕಟೇಶ್ ಪ್ರಸಾದ್ ಒಬ್ಬರಾಗಿದ್ದುಕೊಂಡು ಕಾರ್ಮಿಕರನ್ನು ಹೊರ ತರಲು ಪ್ರಧಾನವಾಗಿ ಶ್ರಮಿಸಿರುವುದು ವಿಶೇಷವಾಗಿದೆ. ಕೇಂದ್ರ ಸರ್ಕಾರದ…
ತೆಲಂಗಾಣ:ನಾಗಾರ್ಜುನ ಸಾಗರ ಅಣೆಕಟ್ಟಿನ ಬಳಿ ಉದ್ವಿಗ್ನ.
ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಮಧ್ಯೆ ನಲ್ಗೊಂಡ ಜಿಲ್ಲೆಯಲ್ಲಿ ನಾಗಾರ್ಜುನ ಸಾಗರ ಅಣೆಕಟ್ಟಿನ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ತೆಲಂಗಾಣ ಸರ್ಕಾರದ ನಿಯಂತ್ರಣದಲ್ಲಿ ಇರಬೇಕಾದ ಅಣೆಕಟ್ಟನ್ನು ಅದರ ಅರ್ಧಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಆಂಧ್ರ…
ಮಕ್ಕಳಲ್ಲಿನ ಕೌಶಲ್ಯ ಹೊರಹಾಕಲು ವಸ್ತು ಪ್ರದರ್ಶನ ಸಹಕಾರಿ:ಎಸ್.ಎನ್.
ಬಂಗಾರಪೇಟೆ: ಮಕ್ಕಳಲ್ಲಿನ ಕೌಶಲ್ಯ ಹೊರಹಾಕುವ ನಿಟ್ಟಿನಲ್ಲಿ ಶಾಲಾ ಮಕ್ಕಳ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ಅವರು ಪಟ್ಟಣದ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಳೆ ಕಾಲದ ಮಣ್ಣಿನ ಮನೆ…
ಮಕ್ಕಳ ಕುಡಿಯುವ ನೀರಿನ ಬೆಲ್, ಸುತ್ತೋಲೆಯನ್ನು ಮರೆತ ಶಿಕ್ಷಣ ಇಲಾಖೆ.!
-ಕೆ.ರಾಮಮೂರ್ತಿ. ನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಚಿಕ್ಕವಯಸ್ಸಿನಿಂದಲೇ ಶರೀರಕ್ಕೆ ಬೇಕಾದಷ್ಟು ನೀರು ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಗಟ್ಟಬಹುದು ಎಂದು ಸರ್ವೆ ವರಧಿಗಳನ್ನು ಆಧರಿಸಿ ವೈದ್ಯಕೀಯ ತಜ್ಞರ ಅಭಿಪ್ರಯಾಯವಾಗಿದೆ. ದೈನಂದಿನ ಜೀವನದಲ್ಲಿ ಕುಡಿಯುವ ನೀರಿನ ಮಹತ್ವವನ್ನು ಅರಿತ ಸರ್ಕಾರ ರಾಜ್ಯಾದ್ಯಂತ…